ತಾಳ: ಆದಿ ತಾಳ
ರಚನೆ : ಶ್ರೀ ವಿಜಯದಾಸರು
ಏನಾದರೇನು ಮೋಕ್ಷವಿಲ್ಲಾ
ಜ್ಞಾನವಿಲ್ಲದೇ ಮೋಕ್ಷವಿಲ್ಲಾ ||
ವೇದ ಓದಿದರೇನು ಶಾಸ್ತ್ರ ಕೇಳಿದರೇನು
ಕಾಡಿ ಕಾದಾಡಿ ಗೆದ್ದರೇನು…..
ಜ್ಞಾನವಿಲ್ಲದೇ ಮೋಕ್ಷವಿಲ್ಲಾ || ೧ ||
ಕಾಶಿಗೆ ಹೋದರೇನು ಕಾನನ ಸೇರಿದರೇನು
ಕಾಶಿ ಪೀತಂಬರ ಉಟ್ಟರೇನು ….
ಜ್ಞಾನವಿಲ್ಲದೇ ಮೋಕ್ಷವಿಲ್ಲಾ || ೨ ||
ಜಪ ತಪ ಮಾಡಿದರೇನು ಜಾಣತನದಿ ಮೆರೆದರೇನು
ವಿಜಯ ವಿಠಲವ ಸಾರಿದರೇನು....
ಜ್ಞಾನವಿಲ್ಲದೇ ಮೋಕ್ಷವಿಲ್ಲಾ || ೩ ||
.........................................................
Also See:
ಸ್ವರ್ಣಗೌರಿ ಶ್ಲೋಕಗಳು (SWARNA GOWRI SHLOKAS) WITH KANNADA AND ENGLISH LYRICS
ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡಾನ |MUNJANEDDU KUMBARANNA LYRICS IN KANNADA,ENGLISH
No comments:
Post a Comment