ಹಾಡಲು ಕಲಿಯಿರಿ(CLICK HERE TO LEARN THIS SONG)
ಹಚ್ಚೇವು ಕನ್ನಡದ ದೀಪಾ
ಹಚ್ಚೇವು ಕನ್ನಡದ ದೀಪಾ
ಕರುನಾಡ ದೀಪಾ ಸಿರಿನುಡಿಯ ದೀಪಾ
ಒಲವೆತ್ತಿ ತೋರುವಾ ದೀಪಾ
ಹಚ್ಚೇವು ಕನ್ನಡದ ದೀಪಾ
ಹಚ್ಚೇವು ಕನ್ನಡದ ದೀಪಾ
ಬಹುದಿನಗಳಿಂದ ಮೈಮರವೆಯಿಂದ
ಕೂಡಿರವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯಾ ಕೆಚ್ಚೇವು
ಮರೆತೇವು ಮರವಾ ತೆರೆದೇವು ಮನವಾ
ಎರೆದೇವು ಒಲವಾ ಹಿಡಿ ನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪಾ
ಹಚ್ಚೇವು ಕನ್ನಡದ ದೀಪಾ||1||
ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ
ನಾಡೊಲವೆ ನೀತಿ ಹಿಡಿ ನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ
ಹಚ್ಚೇವು ಕನ್ನಡದ ದೀಪಾ
ಹಚ್ಚೇವು ಕನ್ನಡದ ದೀಪಾ ||2||
ನಮ್ಮವರುಗಳಿಸಿದಾ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವಿ ಮಾತಿನಲ್ಲಿ
ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀರುವಿ ನಾಡಿನಲ್ಲಿ
ಮಾಂಗಲ್ಯಗೀತಾ ಹಾಡೇವು
ತೊರೆದೇವು ಮರುಳ ಕಳೆದೇವು ಇರುಳ
ಪಡೆದೇವು ತಿರುಳ ಹಿಡಿ ನೆನಪಾ
ಕರುಳೆಂಬ ಕುಡಿಗೆ ಮಿಂಚಂತೆ ಮುಡಿಸಿ
ಹಚ್ಚೇವು ಕನ್ನಡದ ದೀಪಾ
ಹಚ್ಚೇವು ಕನ್ನಡದ ದೀಪಾ||3||
.............................................
HACHEVU KANNADA DA DEEPA
KARUNAADA DEEPA SIRI NUDIYA DEEPA
No comments:
Post a Comment