ಹಾಡಲು ಕಲಿಯಿರಿ(CLICK HERE TO LEARN THIS SONG)
ರೆಕ್ಕೆ
ಇದ್ದರೆ ಸಾಕೆ, ಹಕ್ಕಿಗೆ ಬೇಕು ಬಾನು ಬಯಲಲಿ ತೇಲುತ ತಾನು
ಮ್ಯಾಲೇ
ಹಾರೋಕೆ
ಕಾಲೊಂದಿದ್ದರೆ
ಸಾಕೆ, ಚಿಗರೆಗೆ ಬೇಕು ಕಾನು ಗಾಳಿಯ
ಮೇಲೆ ತಾನು
ಜಿಗಿದು
ಆಡೋಕೆ||
ಹೂವೊಂದಿದ್ದರೆ
ಸಾಕೇ ಬ್ಯಾಡವೆ ಗಾಳಿ
ನೀವೇ ಹೇಳಿ ಕಂಪ ಬೀರೋಕೆ
ಮುಖವೊಂದಿದ್ದರೆ
ಸಾಕೇ ದುಂಬಿ ತಾವ
ಬ್ಯಾಡವೇ ಹೂವ ಜೇನ ಹೀರೋಕೆ||1||
ನೀರೊಂದಿದ್ದರೆ
ಸಾಕೇ ಬ್ಯಾಡವೆ ಹಳ್ಳಾ
ಬಲ್ಲವ ಬಲ್ಲ ತೊರೆಯು ಹರಿಯೋಕೆ
ಮೋಡ
ಇದ್ದರೆ ಸಾಕೆ ಬ್ಯಾಡವೇ ಭೂಮಿ
ಹೇಳಿ ಸ್ವಾಮಿ ಮಳೆಯು
ಸುರಿಯೋಕೆ||2||
ಕಣ್ಣೊಂದಿದ್ದರೆ
ಸಾಕೆ ಬ್ಯಾಡವೆ ಮಂದೆ
ಕಣ್ಣಿನ
ಮುಂದೆ ನಿಮಗೆ ಕಾಣೋಕೆ
ಕೊರಳೊಂದಿದ್ದರೆ
ಸಾಕೆ ಬ್ಯಾಡವೇ ಹಾಡು
ಎಲ್ಲರ
ಜೋಡಿ ಕೂಡಿ ಹಾಡೋಕೆ||3||
REKKE IDDARE SAAKE,
HAKKIGE BEKU BAANU BAYALALI TELUTHA THAANU
MYAALE HAAROKE
KAALONDIDDARE SAAKE,
CHIGAREGE BEKU KAANU GAALIYA MELE THAANU
JIGIDU AADOKE||
HOOVONDIDDARE SAAKE BYAADAVE GAALI
NEEVE HELI, KAMPA BEEROKE
MUKHAVONDIDDARE SAAKE DUMBI THAAVA
BYAADAVE HOOVA, JENA HEEROKE||1||
NEERONDIDDARE SAAKE BYAADAVE HALLA
BALLAVA BALLA TOREYU HARIYOKE
MODA IDDARE SAAKE BYADAVE BHOOMI
HELI SWAMI MALEYU SURIYOKE||2||
KANNONDIDDARE SAAKE BYAADAVE MANDHE
KANNINA MUNDHE NIMAGE KAANOKE
KORALONDIDDARE SAAKE BYAADAVE HAADU
ELLARA JODI KOODI HAADOKE||3||
................................................................................................
Also See:
ಜ್ಞಾನವಿಲ್ಲದೇ ಮೋಕ್ಷವಿಲ್ಲಾ/JNANAVILLADE MOKSHAVILLA song lyrics in kannada
No comments:
Post a Comment