Oct 21, 2021

ನಾವಾಡುವ ನುಡಿಯೇ ಕನ್ನಡ ನುಡಿ|NAVADUVA NUDIYE SONG LYRICS IN KANNADA|ಕನ್ನಡ

 

ಗಂಧದ ಗುಡಿ (1973) - ನಾವಾಡುವ ನುಡಿಯೇ


ನಾವಾಡುವ ನುಡಿಯೇ ಕನ್ನಡ ನುಡಿ 

ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ ಚೆಂದದ ಗುಡಿ


ನಾವಾಡುವ ನುಡಿಯೇ ಕನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ

ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ

ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು
ಆಹಹಾ ಓ ಹೊ ಹೋ..ಆ‌ಆ ಓ ಹೋ
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ
ಚಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ..ಹಾಹ ||1||

ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳೂ

ಮುಗಿಲನು ಚುಂಬಿಸುವಾಸೆಯಲಿ ತೂಗಾಡುತ ನಿಂತ ಮರಗಳಲಿ

ಹಾಡುತಿರೆ ಬಾನಾಡಿಗಳು ಎದೆಯಲ್ಲಿ ಸಂತಸದಾ ಹೊನಲು

ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ ಆಹಹಾ.ಓಹೋ ||2||
………………………………………………………………………………….

ALSO SEE:

PATRIOTIC SONGS(ದೇಶಭಕ್ತಿಗೀತೆಗಳು)

No comments:

Post a Comment