ಹಾಡಲು ಕಲಿಯಿರಿ(CLICK HERE TO LEARN THIS SONG)
ಲಾಲೀ ಲಾಲೀ ಲಾಲಿ
ಲಾಲಿ, ಲಾಲೀ
ಲಾಲೀ ಲಾಲಿ ಲಾಲಿ
ಶ್ರೀ
ಚಕ್ರಧಾರಿಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ
ರಮಣೀಯ ಲಾಲಿ
ಹಾಲ್ಗೆನ್ನೆ
ಕೃಷ್ಣನಿಗೆ ಹಾಲ್ಜೇನ ಲಾಲಿ ಜಗವಾಳೋ ಸ್ವಾಮಿಗೆ
ಪದಮಾಲೆ ಲಾಲಿ
ಲಾಲೀ ಲಾಲೀ ಲಾಲಿ
ಲಾಲಿ, ಲಾಲೀ
ಲಾಲೀ ಲಾಲಿ ಲಾಲಿ||
ಕಲ್ಯಾಣ ರಾಮನಿಗೆ ಕೌಸಲ್ಯೆ ಲಾಲಿ
ಯದುವಂಶ
ವಿಭುವಿಗೆ ಯಶೋದೆ ಲಾಲಿ
ಪರಮೇಶ
ಸುತನಿಗೆ ಪಾರ್ವತಿಯ ಲಾಲಿ
ಧರೆಯಾಳೋ
ವಾಗ್ ಧಣಿಗೆ ಶರಣೆಂಬೆ ಲಾಲಿ||1||
ಶ್ರೀ
ಕನಕದಾಸರದು ಕೃಷ್ಣನಿಗೆ ಲಾಲಿ
ಲಿಂಗಕ್ಕೆ
ಜಂಗಮರ ವಚನಗಳ ಲಾಲಿ
ವೇದ
ವೇದ್ಯರಿಗೆ ವೇದಾಂತ ಲಾಲಿ
ಆಗಮ
ನಿಗಮವೆ ಲಾಲೀ ಲಾಲಿ||2||
No comments:
Post a Comment