गुरवे
सर्वलोकानां भिषजे भवरोगिणाम् ।
निधये
सर्व विद्यानां दक्षिणामूर्तये नम: ॥
ಗುರವೇ
ಸರ್ವ ಲೋಕಾನಾಂ ಭಿಷಜೇ ಭವ ರೋಗಿಣಾಮ್।
ನಿಧಯೇ
ಸರ್ವ ವಿದ್ಯಾನಾಂ ದಕ್ಷಿಣಾಮೂರ್ತಯೇ ನಮ:॥
ಸಕಲ
ರೋಗಗಳ ಗುರುವಾದ, ಸಂಸಾರವೆಂಬ (ಭವ) ರೋಗಗಳಿಂದ ಪೀಡಿತರಾದವರಿಗೆ ವೈದ್ಯನಾದ, ಸರ್ವ ವಿದ್ಯೆಗಳ ನಿಧಿಯಾದ ,ದಕ್ಷಿಣಾಮೂರ್ತಿ ಗೆ ನನ್ನ ನಮಸ್ಕಾರಗಳು.
………………………………………………………………………………………………………….
य:
शिवो नाम रूपाभ्यां या देवी सर्वमङ्गला ।
तयो:सम्स्मरणात् पुम्सां सर्वतो जय मङ्गलम् ॥
ಯ:
ಶಿವೋ ನಾಮ ರೂಪಾಭ್ಯಾಂ ಯಾ ದೇವೀ ಸರ್ವಮಂಗಲ |
ತಯೋ: ಸಂಸ್ಮರಣಾತ್ ಪು೦ಸಾ೦ ಸರ್ವತೋ ಜಯ ಮಂಗಲಮ್॥
ಯಾರು
ತನ್ನ ರೂಪ ಮತ್ತು ಹೆಸರುಗಳಿಂದ ಮಂಗಳಕರನೋ, ಯಾವ ದೇವಿಯು ಯಾವಾಗಲೂ ಮಂಗಳವನ್ನೇ ಉಂಟುಮಾಡುತ್ತಾಳೋ, ಅವರಿಬ್ಬರ ನಾಮಸ್ಮರಣೆಯಿಂದ
ಮಾನವನಿಗೆ ಯಾವಾಗಲೂ ಜಯ ಮತ್ತು ಮಂಗಳಗಳು ಬಂದು ಸೇರುತ್ತವೆ.
…………………………………………………………………………………………..
नम: शिवाय
शान्ताय हराय परमात्मने ।
प्रणत: क्लेश नाशाय योगिनां पतये नम: ॥
ನಮ:
ಶಿವಾಯ ಶಾಂತಾಯ ಹರಯೇ ಪರಮಾತ್ಮನೇ ।
ಪ್ರಣತ:
ಕ್ಲೇಶ ನಾಶಾಯ ಯೋಗಿನಾ೦
ಪತಯೇ ನಮ: ॥
ಮಂಗಳಕರನಾದ,
ಶಾಂತ ಮೂರ್ತಿಯಾದ,ಕಷ್ಟಗಳನ್ನು ನಾಶಪಡಿಸುವ ಯೋಗಿಗಳಿಗೆ ಪ್ರಭುವಾದ ಪರಮಾತ್ಮ ಈಶ್ವರನಿಗೆ ನಮಸ್ಕಾರಗಳು.
……………………………………………………………………………………………………
दीर्घमायु:
सदारोग्यं कोशवृद्धि: बलोन्नति: ।
ममास्तु
नित्यमानन्द: प्रसादात् तव शङ्कर ॥
ದೀರ್ಘಮಾಯುಃ:
ಸದಾರೋಗ್ಯ೦ ಕೋಶವೃದ್ಧಿ: ಬಲೋನ್ನತಿ: ।
ಮಮಾಸ್ತು
ನಿತ್ಯಮಾನಂದ: ಪ್ರಸಾದಾತ್ ತವ ಶಂಕರ ॥
ದೀರ್ಘಾಯಸ್ಸು,ಚಿರಕಾಲದ
ಆರೋಗ್ಯ,ಧನ ಕೋಶದ ವೃದ್ಧಿ,ಬಲದ ವೃದ್ಧಿ, ನಿತ್ಯವಾದ ಆನಂದ ನಿನ್ನ ಪ್ರಸಾದದಿಂದ ನನಗೆ ಸಿದ್ದಿಸಲಿ.
………………………………………………………………………………………
No comments:
Post a Comment