ಹಾಡಲು ಕಲಿಯಿರಿ(CLICK HERE TO LEARN THIS SONG)
ಶಿವನು ಭಿಕ್ಷಕ್ಕೆ ಬಂದ ನೀಡು ಬಾರೇ ತಂಗಿ
ಇವನಂಥ ಚಲುವರಿಲ್ಲಾ ನೋಡು ಬಾರೇ llಪll
ಒಂದೇ ಕೈಲಾಜನಕ ಕೋಲಕಾಣೆ
ಬೆನ್ಹಿಂದೆ ಕಟ್ಟಿರುವ ತ್ರಿಶೂಲ ಕಾಣೆ |
ನಂದೀಯ ಕೋಲು ಪತಾಕೆ ಕಾಣೆ
ಮತ್ತೊಂದೊಂದು ಪಾದದಾ ಶೌರ್ಯ ಕಾಣೆ ll1ll
ಮೈಯಲ್ಲಾ ಹಾವಿನ ಮೊತ್ತ ಕಾಣೆ
ಬಲದ ಕೈಯಲ್ಲಿ ಹಿಡಿದ ನಾಗರ ಬೆತ್ತ ಕಾಣೆ|
ವಯ್ಯಾರ ಮೂರು ಲೋಕ ಕರ್ತ ಕಾಣೆ
ಥಕ ಥೈಯಾ ಥೈಯಾನಂದಕ್ಕ ಕಾಣೆ ll2ll
ಮನೆ ಮನೆ ದಪ್ಪಲಿ ಧಿಮ್ಮಿ ಸಾಲೆ
ಆತ ಹಣವನ್ನು ಕೊಟ್ರು ಒಲ್ಲೆನಂತೆ ಕಾಣೆ |
ತಣಿವನ್ನು ನೀಡಬೇಕಂತೆ ಕಾಣೆ
ಗೌರಿ ಮನಸಾ ಬಿಟ್ಟಿರಲಾರನಂತೆ ಕಾಣೆ ll3ll
........................................................................................................
Also See:
ಶಂಕರ ಶಶಿಧರ ಗಜಚರ್ಮಾಂಬರ SONG LYRICS IN KANNADA |SHANKARA SHASHIDHARA SONG LYRICS|
No comments:
Post a Comment