ಸರಳ ಸುಭಾಷಿತ: ಮಾತಾ ಶತ್ರು ಪಿತಾ ವೈರೀ | SUBHASHITA WITH MEANING: MATHA SHATRU PITA VAIRI | PARENTING TIPS IN SANSKRIT

 

ಹಾಡಲು ಕಲಿಯಿರಿ(CLICK HERE TO LEARN THIS SHLOKA)

माता शत्रु पिता वैरी यॆन बालॊ पाठित:

शॊभतॆ सभा मध्ये हम्स मध्ये बको यथा॥

 

ಮಾತಾ ಶತ್ರು ಪಿತಾ ವೈರೀ, ಏನ ಬಾಲೋ ನ ಪಾಠಿತ: |

ನ ಶೋಭತೇ ಸಭಾಮಧ್ಯೇ ಹಂಸ ಮಧ್ಯೇ ಬಕೊ ಯಥಾ ||

 

ಯಾವ ತಾಯಿ ತಂದೆಯರು ತಮ್ಮ ಮಗುವನ್ನು ವಿದ್ಯಾವಂತರನ್ನಾಗಿ ಮಾಡುವುದಿಲ್ಲವೋ , ಅವರೇ ಮುಂದೆ ಮಕ್ಕಳಿಗೆ ಶತ್ರುಗಳಾಗುತ್ತಾರೆ. ಹೇಗೆ ಹಂಸ ಬಕ ಪಕ್ಷಿಗಳ ಸಭೆಯಲ್ಲಿ ಬಕಪಕ್ಷಿಯು ಶೋಭಿಸುವುದಿಲ್ಲವೋ, ಹಾಗೆಯೇ ಅವಿದ್ಯಾವಂತ ಮಕ್ಕಳು ಸಮಾಜದಲ್ಲಿ ಶೋಭಿಸುವುದಿಲ್ಲ.

.........................................................................................................................

ಸರಳ ಸುಭಾಷಿತ :ದುರ್ಜನರಲ್ಲಿ ವಿಶ್ವಾಸವಿರಿಸಬಾರದು : दुर्जन: प्रियवादीति | SUBHASHITA WITH MEANING ದುರ್ಜನ: ಪ್ರಿಯವಾದೀತಿ

 

CLICK HERE TO LEARN TO CHANT THIS SUBHASHITA

दुर्जन: प्रियवादीति नैतद् विश्वास  कारणम्।

मधु तिष्ठति जिह्वाग्रे हृदये तु हालाहलम्॥

 

ದುರ್ಜನ: ಪ್ರಿಯವಾದೀತಿ ನೈತದ್ ವಿಶ್ವಾಸ ಕಾರಣಮ್।

ಮಧು ತಿಷ್ಠತಿ ಜಿಹ್ವಾಗ್ರೇ ಹೃದಯೇ ತು ಹಾಲಾಹಲಮ್॥

 

ದುರ್ಜನರು ನಮ್ಮ ಜೊತೆ ಪ್ರಿಯವಾಗಿ ವರ್ತಿಸಿದರೂ, ಪ್ರಿಯವಾದ ಮಾತುಗಳನ್ನಾಡಿದರೂ, ಅವರಲ್ಲಿ ವಿಶ್ವಾಸವನ್ನು ಇರಿಸಬಾರದು. ಏಕೆಂದರೆ ಅವರ ನಾಲಿಗೆಯಲ್ಲಿ ಜೇನಿನಂತಹ ಸಿಹಿಯಾದ ಮಾತುಗಳು ಬಂದರೂ ಅವರ ಹೃದಯದಲ್ಲಿ ಹಾಲಾಹಲವೇ ತುಂಬಿರುತ್ತದೆ.

................................................................................................


ಭಗವದ್ಗೀತೆ ಧ್ಯಾನ ಶ್ಲೋಕಗಳು : BHAGAVADGITA BHAYAN SHLOKAS IN KANNADA | KANNADA SAVIGANA |

 

ಭಗವದ್ಗೀತೆ ಧ್ಯಾನ ಶ್ಲೋಕಗಳು


ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ |
ಅದ್ವೈತಾಮೃತವರ್ಷಿಣೀಂ ಭಗವತೀಮಷ್ಟಾದಶಾಧ್ಯಾಯಿನೀಂ
ಅಂಬ ತ್ವಾಮನುಸಂದಧಾಮಿ ಭಗವದ್ಗೀತೇ ಭವದ್ವೇಷಿಣೀಮ್ || ||

 

ನಮೋಽಸ್ತು ತೇ ವ್ಯಾಸ ವಿಶಾಲಬುದ್ಧೇ
ಫುಲ್ಲಾರವಿಂದಾಯತಪತ್ರನೇತ್ರ |
ಯೇನ ತ್ವಯಾ ಭಾರತತೈಲಪೂರ್ಣಃ
ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ || ||

ಪ್ರಪನ್ನಪಾರಿಜಾತಾಯತೋತ್ರವೇತ್ರೈಕಪಾಣಯೇ |
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ || ||

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ || ||

ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ || ||

ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ
ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣೇನ ವೇಲಾಕುಲಾ |
ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರ್ತಿನೀ
ಸೋತ್ತೀರ್ಣಾ ಖಲು ಪಾಂಡವೈಃ ರಣನದೀ ಕೈವರ್ತಕಃ ಕೇಶವಃ || ||

ಪಾರಾಶರ್ಯವಚಃ ಸರೋಜಮಮಲಂ ಗೀತಾರ್ಥಗಂಧೋತ್ಕಟಂ
ನಾನಾಖ್ಯಾನಕಕೇಸರಂ ಹರಿಕಥಾಸಂಬೋಧನಾಬೋಧಿತಮ್ |
ಲೋಕೇ ಸಜ್ಜನಷಟ್ಪದೈರಹರಹಃ ಪೇಪೀಯಮಾನಂ ಮುದಾ
ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನಃ ಶ್ರೇಯಸೇ || ||

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಮ್ || ||

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದೈಃ ಸಾಂಗಪದಕ್ರಮೋಪನಿಷದೈರ್ಗಾಯಂತಿ ಯಂ ಸಾಮಗಾಃ |
ಧ್ಯಾನಾವಸ್ಥಿತತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ
ಯಸ್ಯಾಂತಂ ವಿದುಃ ಸುರಾಸುರಗಣಾ ದೇವಾಯ ತಸ್ಮೈ ನಮಃ || ||
.............................................................................................................

ಹೂವು ಹೊರಳುವವು ಸೂರ್ಯನ ಕಡೆಗೆ LYRICS IN KANNADA | HOOVU HORALUVAVU SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)


ರಚನೆ: ಚೆನ್ನವೀರ ಕಣವಿ

 

ಹೂವು ಹೊರಳುವವು ಸೂರ್ಯನ ಕಡೆಗೆ

ನಮ್ಮ ದಾರಿ ಬರಿ ಚಂದ್ರನವರೆಗೆ |

ಇರುಳಿನ ಒಡಲಿಗೆ ದೂರದ ಕಡಲಿಗೆ

ಮುಳುಗಿದಂತೆ ದಿನ ಬೆಳಗಿದಂತೆ

ಹೊರಬರುವನು ಕೂಸಿನ ಹಾಗೆ ||

 

ಜಗದ ಮೂಸೆಯಲಿ ಅಡಗಿಸಿ ಬಿಡುವನು ಎಲ್ಲ ಬಗೆಯ ಸರಕು

ಅದಕೆ ಅದರ ಗುಣ ದೋಷಗಳಂಟಿಸಿ ಬಿಡಿಸಿ ಬಿಟ್ಟ ತೊಡಕು ||1||

 

ಗಿಡದಿಂದುದುರುವ ಎಲೆಗಳಿಗೂ ಮುದ  ಚಿಗುರುವಾಗಲೂ ಒಂದೆ ಹದ |

ನೆಲದ ಒಡಲಿನೊಳಗೇನು ನಡೆವುದೋ ಎಲ್ಲಿ ಕುಳಿತಿಹನೋ ಕಲಾವಿದ||2||

 

ಬಿಸಿಲ ಧಗೆಯ ಬಸಿರಿಂದಲೇ ಸುಳಿವುದು ಮೆಲು ತಂಗಾಳಿಯು ಬಳಿಗೆ |

ಸಹಿಸಿಕೊಂಡ ಸಂಕಟವನು ಸೋಸಲು ಬಂದೆ ಬರುವುದಾ ಗಳಿಗೆ ||3||

 

ಸಹಜ ನಡೆದರೂ ಭೂಮಿಯ ಲಯದಲಿ ಪದಗಳನಿರಿಸಿದ ಹಾಗೆ |

ವಿಶ್ವದ ರಚನೆಯ ಹೊಳಹಿನಲ್ಲಿ ಕಂಗೊಳಿಸಿತು ಕವಿತೆಯು ಹೀಗೆ ||4||

................................................................................................................................

INSECTS NAMES IN SANSKRIT | कीटा:/ ಕೀಟಗಳು | Sanskrit Learning Through Kannada | list of insects

CLICK HERE TO VIEW ON YOUTUBE   पतङ्ग: = ಚಿಟ್ಟೆ ( ಹಾರಾಡುವ ಕೀಟ ) (fly) चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly) पुत्तिका / ...