ಹೂವು ಹೊರಳುವವು ಸೂರ್ಯನ ಕಡೆಗೆ LYRICS IN KANNADA | HOOVU HORALUVAVU SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)


ರಚನೆ: ಚೆನ್ನವೀರ ಕಣವಿ

 

ಹೂವು ಹೊರಳುವವು ಸೂರ್ಯನ ಕಡೆಗೆ

ನಮ್ಮ ದಾರಿ ಬರಿ ಚಂದ್ರನವರೆಗೆ |

ಇರುಳಿನ ಒಡಲಿಗೆ ದೂರದ ಕಡಲಿಗೆ

ಮುಳುಗಿದಂತೆ ದಿನ ಬೆಳಗಿದಂತೆ

ಹೊರಬರುವನು ಕೂಸಿನ ಹಾಗೆ ||

 

ಜಗದ ಮೂಸೆಯಲಿ ಅಡಗಿಸಿ ಬಿಡುವನು ಎಲ್ಲ ಬಗೆಯ ಸರಕು

ಅದಕೆ ಅದರ ಗುಣ ದೋಷಗಳಂಟಿಸಿ ಬಿಡಿಸಿ ಬಿಟ್ಟ ತೊಡಕು ||1||

 

ಗಿಡದಿಂದುದುರುವ ಎಲೆಗಳಿಗೂ ಮುದ  ಚಿಗುರುವಾಗಲೂ ಒಂದೆ ಹದ |

ನೆಲದ ಒಡಲಿನೊಳಗೇನು ನಡೆವುದೋ ಎಲ್ಲಿ ಕುಳಿತಿಹನೋ ಕಲಾವಿದ||2||

 

ಬಿಸಿಲ ಧಗೆಯ ಬಸಿರಿಂದಲೇ ಸುಳಿವುದು ಮೆಲು ತಂಗಾಳಿಯು ಬಳಿಗೆ |

ಸಹಿಸಿಕೊಂಡ ಸಂಕಟವನು ಸೋಸಲು ಬಂದೆ ಬರುವುದಾ ಗಳಿಗೆ ||3||

 

ಸಹಜ ನಡೆದರೂ ಭೂಮಿಯ ಲಯದಲಿ ಪದಗಳನಿರಿಸಿದ ಹಾಗೆ |

ವಿಶ್ವದ ರಚನೆಯ ಹೊಳಹಿನಲ್ಲಿ ಕಂಗೊಳಿಸಿತು ಕವಿತೆಯು ಹೀಗೆ ||4||

................................................................................................................................

No comments:

Post a Comment

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ninnedege baruvaaga | Kuvempu | Kannada bhavagethe lyrics

ಹಾಡಲು ಕಲಿಯಿರಿ(CLICK HERE TO LEARN THIS SONG)   ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ ?  ಸಡಗರದ ಮಾತುಗಳ ಬಿಂಕವೇಕೆ ? ನಿನ್ನ ಮುಂದಿರುವಾಗ ಮಂತ್ರಗಳ...