Nov 25, 2023

KANNADA RHYMES- ನಾಯಿಮರಿ-ನಾಯಿಮರಿ ತಿಂಡಿ ಬೇಕೆ LYRICS - NAYI MARI NAYI MARI THINDI BEKE

 

ನಾಯಿಮರಿ-ನಾಯಿಮರಿ ತಿಂಡಿ ಬೇಕೆ ?

ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

 ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?

ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

 ನಾಯಿ ಮರಿ ಕಳ್ಳ ಬಂದರೆ ಏನು ಮಾಡುವೆ?

 ಬೌ ಬೌ ಎಂದು ಕೂಗಿ ಹೇಳುವೆ,

ಜಾಣಮರಿ ನಾನು ಹೋಗಿ ತಿಂಡಿ ತರುವೆನು

ನಾನು ನಿನ್ನ ಮನೆಯನ್ನು ಕಾಯುತ್ತಿರುವೆನು ||

 

                                                 -ಜಿ. ಪಿ ರಾಜರತ್ನಮ್

.............................................................................


No comments:

Post a Comment