ಹಾಡಲು ಕಲಿಯಿರಿ(CLICK HERE TO LEARN THIS SONG)
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ತಾಜೆಣುತಾ ,ಗೆಜ್ಜೆ ಘಲ್ಲು ತಾಜೆಣುತಾ
ಬಲ್ಲಿದ ರಂಗನ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ ,
ನಮ್ ಬಲ್ಲಿದ ರಂಗನ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ
|| ಪ ||
ಅರೆದರು ಅರಿಶಿಣವ ಅದಕೆ ಬೆರೆಸ್ಯಾರು ಸುಣ್ಣಾವ , ಅದಕೆ ಬೆರೆಸ್ಯಾರು ಸುಣ್ಣಾವ
ಅಂದವುಳ್ಳ ರಂಗನ ಮ್ಯಾಲೆ ಚೆಲ್ಲಿದರೋಕುಳಿಯೊ,
ನಮ್ ಅಂದವುಳ್ಳ ರಂಗನ ಮ್ಯಾಲೆ ಚೆಲ್ಲಿದರೋಕುಳಿಯೊ ||1||
ಹಾಲಿನೋಕುಳಿಯೋ ಒಳ್ಳೆ ನೀಲಾದೋಕುಳಿಯೊ,
ಒಳ್ಳೆ ನೀಲಾದೋಕುಳಿಯೊ
ಲೋಲನಾದ ರಂಗನ ಮ್ಯಾಲೆ ಹಾಲಿನೋಕುಳಿಯೊ,
ನಮ್ ಲೋಲನಾದ ರಂಗನ ಮ್ಯಾಲೆ ಹಾಲಿನೋಕುಳಿಯೊ ||2||
ತುಪ್ಪದೋಕುಳಿಯೋ ಒಳ್ಳೆ ಒಪ್ಪದೋಕುಳಿಯೋ
, ಒಳ್ಳೆ ಒಪ್ಪದೋಕುಳಿಯೋ
ಒಪ್ಪವುಳ್ಳ ರಂಗನ ಮ್ಯಾಲೆ ತುಪ್ಪದೋಕುಳಿಯೊ,
ನಮ್ ಒಪ್ಪವುಳ್ಳ ರಂಗನ ಮ್ಯಾಲೆ ತುಪ್ಪದೋಕುಳಿಯೊ ||3||
ಗಂಧದೋಕುಳಿಯೋ ಒಳ್ಳೆ ಚೆಂದದೋಕುಳಿಯೋ,
ಒಳ್ಳೆ ಚೆಂದದೋಕುಳಿಯೋ
ಅಂದವುಳ್ಳ ರಂಗನ ಮೇಲೆ ಗಂಧದೋಕುಳಿಯೋ,
ನಮ್ ಅಂದವುಳ್ಳ ರಂಗನ ಮೇಲೆ ಗಂಧದೋಕುಳಿಯೋ ||4||
...................................................................................................
No comments:
Post a Comment