Jan 31, 2024

ರಾಯರು ಬಂದರು ಮಾವನ ಮನೆಗೆ SONG LYRICS IN KANNADA| RAAYARU BANDARU MAAVANA MANEGE| K S NARASIMHA SWAMY

 

ಹಾಡಲು ಕಲಿಯಿರಿ(CLICK HERE TO LEARN THIS SONG)

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು

ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು

ತುಂಬಿದ ಚಂದಿರ ಬಂದಿತ್ತು

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು

ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು

ತುಂಬಿದ ಚಂದಿರ ಬಂದಿತ್ತು ||

 

ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು

ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು

ಒಳಗಡೆ ದೀಪದ ಬೆಳಕಿತ್ತು ||

 

ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು

ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು

ಭೂಮಿಗೆ ಸ್ವರ್ಗವೆ ಇಳಿದಿತ್ತು ||

 

ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು

ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು

ಪದುಮಳು ಹಾಕಿದ ಹೂವಿತ್ತು ||

 

ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ

ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ

ಮಡದಿಯ ಸದ್ದೇ ಇರಲಿಲ್ಲ ||

 

ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ

ಮೆಲುದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ

ನಕ್ಕಳು ರಾಯರು ನಗಲಿಲ್ಲ||

 

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು

ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು

ತುಂಬಿದ ಚಂದಿರ ಬಂದಿತ್ತು ||

ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ

ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ

ಪದುಮಳ ಬಳೆಗಳ ದನಿಯಿಲ್ಲ ||

ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ

ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ

ಯಾರಿಗೆ ಎನ್ನಲು ಹರುಷದಲಿ||

 

ಪದುಮಳು ಬಂದಳು ಪದುಮಳು ಬಂದಳು

ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ…..

ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ……

ರಾಯರ ಕೋಣೆಯಲಿ……

ರಾಯರ ಕೋಣೆಯಲಿ

ರಾಯರ ಕೋಣೆಯಲಿ..

.........................................................................................................................................................................................

Jan 20, 2024

ಮೊದಲ ದಿನ ಮೌನ - ಭಾವಗೀತೆ -ಕೆ ಎಸ್. ನರಸಿಂಹ ಸ್ವಾಮಿ LYRICS | MODALA DINA MOUNA-K S NARASIMHA SWAMY SONGS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ

ಚಿಂತೆ ಬಿಡಿ ಹೂವ ಮುಡಿದಂತೆ

ಹತ್ತು ಕಡೆ ಕಣ್ಣು ಸಣ್ಣಗೆ ದೀಪ

ಉರಿದಂತೆ ಜೀವದಲಿ ಜಾತ್ರೆ ಮುಗಿದಂತೆ ||

 

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು

ಮೂಗುತಿಯ ಮಿಂಚು ಒಳಹೊರಗೆ

ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು

ಬೇಲಿಯಲಿ ಹಾವು ಹರಿದಂತೆ ||1||

 

ಮೂರನೆಯ ಸಂಜೆ ಹೆರಳಿನ ತುಂಬ ದಂಡೆವು

ಹೂ ಹೂವಿಗೂ ಜೀವ ಬಂದಂತೆ

ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ

ಹುಣ್ಣಿಮೆಯ ಹಾಲು ಹರಿದಂತೆ ||2||

.......................................................................................................................................

Also See:

Jan 16, 2024

ಸರಳ ಸುಭಾಷಿತ -ಕಾಕ ಚೇಷ್ಟಾ ಬಕ ಧ್ಯಾನಂ- ವಿದ್ಯಾರ್ಥಿಗಳ ಲಕ್ಷಣ | SUBHASHITA ON STUDENTS

 

CLICK HERE FOR SUBHASHIT EXPLAINATION IN KANNADA


काक चॆष्टा बकध्यानम् श्वान निद्रा तथैव च ।

अल्पाहारम् गृहत्यागी एतत् विद्यार्थि लक्षणम्॥

 

ಕಾಕ ಚೇಷ್ಟಾ ಬಕ ಧ್ಯಾನಂ ಶ್ವಾನ ನಿದ್ರಾ ತಥೈವ ಚ।

ಅಲ್ಪಹಾರಂ ಜೀರ್ಣ ವಸ್ತ್ರಂ/ ಗೃಹತ್ಯಾಗಿ ಏತತ್ ವಿದ್ಯಾರ್ಥಿ ಲಕ್ಷಣಂ||

 

ಕಾಗೆಯಂತೆ ಚಟುವಟಿಕೆಯಿಂದ ಇರುವುದು ಬಕಪಕ್ಷಿಯಂತೆ ಏಕಾಗ್ರತೆ ಶ್ವಾನದಂತೆ ನಿದ್ರಿಸುವುದು ಅಲ್ಪಹಾರವನ್ನು ಸೇವಿಸುವುದು ಗುರುಕುಲದಲ್ಲಿ ವಾಸಮಾಡುವುದು ಇವು ವಿದ್ಯಾರ್ಥಿಗಳ ಲಕ್ಷಣ.

.................................................................................................


ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ತಾಜೆಣುತಾ KANNADA FOLK SONG LYRICS, GHALLU GHALLENUTHA GEJJE

 ಹಾಡಲು ಕಲಿಯಿರಿ(CLICK HERE TO LEARN THIS SONG)


ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ತಾಜೆಣುತಾ ,ಗೆಜ್ಜೆ ಘಲ್ಲು ತಾಜೆಣುತಾ

ಬಲ್ಲಿದ ರಂಗನ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ ,

ನಮ್ ಬಲ್ಲಿದ ರಂಗನ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ || ||

 

ಅರೆದರು ಅರಿಶಿಣವ ಅದಕೆ ಬೆರೆಸ್ಯಾರು ಸುಣ್ಣಾವ , ಅದಕೆ ಬೆರೆಸ್ಯಾರು ಸುಣ್ಣಾವ

ಅಂದವುಳ್ಳ ರಂಗನ ಮ್ಯಾಲೆ ಚೆಲ್ಲಿದರೋಕುಳಿಯೊ,

ನಮ್ ಅಂದವುಳ್ಳ ರಂಗನ ಮ್ಯಾಲೆ ಚೆಲ್ಲಿದರೋಕುಳಿಯೊ  ||1||

 

ಹಾಲಿನೋಕುಳಿಯೋ ಒಳ್ಳೆ ನೀಲಾದೋಕುಳಿಯೊ, ಒಳ್ಳೆ ನೀಲಾದೋಕುಳಿಯೊ

ಲೋಲನಾದ ರಂಗನ ಮ್ಯಾಲೆ ಹಾಲಿನೋಕುಳಿಯೊ,

ನಮ್ ಲೋಲನಾದ ರಂಗನ ಮ್ಯಾಲೆ ಹಾಲಿನೋಕುಳಿಯೊ ||2||

 

ತುಪ್ಪದೋಕುಳಿಯೋ ಒಳ್ಳೆ ಒಪ್ಪದೋಕುಳಿಯೋ , ಒಳ್ಳೆ ಒಪ್ಪದೋಕುಳಿಯೋ

ಒಪ್ಪವುಳ್ಳ ರಂಗನ ಮ್ಯಾಲೆ ತುಪ್ಪದೋಕುಳಿಯೊ,

ನಮ್ ಒಪ್ಪವುಳ್ಳ ರಂಗನ ಮ್ಯಾಲೆ ತುಪ್ಪದೋಕುಳಿಯೊ ||3||

 

ಗಂಧದೋಕುಳಿಯೋ ಒಳ್ಳೆ ಚೆಂದದೋಕುಳಿಯೋ, ಒಳ್ಳೆ ಚೆಂದದೋಕುಳಿಯೋ

ಅಂದವುಳ್ಳ ರಂಗನ ಮೇಲೆ ಗಂಧದೋಕುಳಿಯೋ,

ನಮ್ ಅಂದವುಳ್ಳ ರಂಗನ ಮೇಲೆ ಗಂಧದೋಕುಳಿಯೋ ||4||

...................................................................................................