Jan 31, 2024

ರಾಯರು ಬಂದರು ಮಾವನ ಮನೆಗೆ SONG LYRICS IN KANNADA| RAAYARU BANDARU MAAVANA MANEGE| K S NARASIMHA SWAMY

 

ಹಾಡಲು ಕಲಿಯಿರಿ(CLICK HERE TO LEARN THIS SONG)

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು

ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು

ತುಂಬಿದ ಚಂದಿರ ಬಂದಿತ್ತು

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು

ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು

ತುಂಬಿದ ಚಂದಿರ ಬಂದಿತ್ತು ||

 

ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು

ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು

ಒಳಗಡೆ ದೀಪದ ಬೆಳಕಿತ್ತು ||

 

ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು

ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು

ಭೂಮಿಗೆ ಸ್ವರ್ಗವೆ ಇಳಿದಿತ್ತು ||

 

ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು

ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು

ಪದುಮಳು ಹಾಕಿದ ಹೂವಿತ್ತು ||

 

ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ

ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ

ಮಡದಿಯ ಸದ್ದೇ ಇರಲಿಲ್ಲ ||

 

ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ

ಮೆಲುದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ

ನಕ್ಕಳು ರಾಯರು ನಗಲಿಲ್ಲ||

 

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು

ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು

ತುಂಬಿದ ಚಂದಿರ ಬಂದಿತ್ತು ||

ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ

ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ

ಪದುಮಳ ಬಳೆಗಳ ದನಿಯಿಲ್ಲ ||

ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ

ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ

ಯಾರಿಗೆ ಎನ್ನಲು ಹರುಷದಲಿ||

 

ಪದುಮಳು ಬಂದಳು ಪದುಮಳು ಬಂದಳು

ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ…..

ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ……

ರಾಯರ ಕೋಣೆಯಲಿ……

ರಾಯರ ಕೋಣೆಯಲಿ

ರಾಯರ ಕೋಣೆಯಲಿ..

.........................................................................................................................................................................................

No comments:

Post a Comment