Feb 7, 2024

ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ | LYRICS IN KANNADA | K S NARASIMHA SWAMY| PALLAVAGALA PALLAVIYALI

ಹಾಡಲು ಕಲಿಯಿರಿ(CLICK HERE TO LEARN THIS SONG) 


ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ;

ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತ.

ಇಮ್ಮಾವಿನ ಮಡಿಲಲ್ಲಿದೆ ದುಂಬಿಯ ಝೇಂಕಾರ,

ತರುಲತೆಗಳ ಮೈಗೊಪ್ಪಿದೆ ಕೆಂಪಿನಲಂಕಾರ.||

 

ಗಿರಿ ನದಿಗಳನಾವರಿಸಿದೆ ಹೊಸ ಚೇತನದುಸಿರು;

ಬನ ಬನದಲಿ ಅಚ್ಚಾಗಿದೆ ಹೊಸವರ್ಷದ ಹೆಸರು.

ಬಳುಕುವ ಎಲೆ, ಚೆಲುವಿನ ಬಲೆ, ಸಿರಿಯುಕ್ಕುವ ನೋಟ;

ತಿಳಿಗೊಳದಲಿ ಹೊಂದಾವರೆ ಹೂವರಳಿದ ತೋಟ.||1||

 

ಬಾನ್ನೀಲಿಯ ಕೊನೆಯಿಲ್ಲದ ನೀಲಾಂಬರದೊಳಗೆ

ಬಂದಾಡುವ ಬಿಳಿಮುಗಿಲಿನ ತಣ್ಣೆಳಲಿನ ಕೆಳಗೆ

ಮಾಂದಳಿರಿನ ತೋರಣವಿಹ ಮುಂಬಾಗಿಲ ಬಳಿಗೆ

ಮಧುಮಾಸವೆ ಅಡಿ ಇಡುತಿದೆ ಹೊಸವರ್ಷವ ಬೆಳಗೆ.||2||

 

ನಲ್ಲೆಯ ತುಟಿ ಅದುರುತ್ತಿದೆ ನಲ್ಲನ ತುಟಿಯಲ್ಲಿ;

ನಸುಗೆಂಪಿನ ಉಂಗುರವಿದೆ ಆಕೆಯ ಬೆರಳಲ್ಲಿ.

ಮಲ್ಲಿಗೆ ಹೂ ಪರಿಮಳವಿದೆ ತುಂಬಿದ ಹೆರಳಲ್ಲಿ;

ಹೊಸವರ್ಷದ ಹೊಸ ಹಾಡಿದೆ ಆಕೆಯ ಕೊರಳಲ್ಲಿ||3||

................................................................................................


No comments:

Post a Comment