Feb 12, 2024

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು LYRICS IN KANNADA |BALEGARA CHENNAYYA SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)


ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೇ

ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು ಬಳೆಯ ತೊಡಿಸುವುದಿಲ್ಲ ನಿಮಗೆ ||

 

ಮುಡಿದ ಮಲ್ಲಿಗೆ ಅರಳು ಬಾಡಿಲ್ಲ ರಾಯರೇ ತವರಿನಲ್ಲಿ ತಾಯಿ ನಗುತಿಹರು

ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೇ ಅಮ್ಮನಿಗೆ ಬಳೆಯ ತೊಡಿಸಿದರು

ಅಂದು ಮಂಗಳವಾರ ನವಿಲೂರ ಕೇರಿಯಲ್ಲಿ ಓಲಗದ ಸದ್ದು ತುಂಬಿತ್ತು

ಬಳೆಯ ತೊಡಸಿದರಂದು ಅಮ್ಮನಿಗೆ ತೌರಿನಲಿ ಅಂಗಳದ ತುಂಬಾ ಜನವಿತ್ತು ||1||

 

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ ಸೆರಗಿನಲಿ ಕಣ್ಣೀರನೊರೆಸಿ

ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ ದೀಪದಲಿ ಬಿಡುಗಣ್ಣ ನಿಡಿಸಿ

ಬೇಕಾದ ಹಣ್ಣಿಹುದು ಹೂವಿಹುದು ತೌರಿನಲಿ ಹೊಸ ಸೀರೆ ರತ್ನದಾಭರಣ

ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲ್ಲಿ ನಿಮಗಿಲ್ಲ ಒಂದು ಹನಿ ಕರುಣ||2||

 

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು ಕುದಿಯಬಾರದು ನನ್ನ ದೊರೆಯೇ

ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು ಒಣಗಬಾರದು, ಒಡಲ ಚಿಲುಮೆ

ಮುನಿಸು ಮಾವನ ಮೇಲೆ ಮಗಳೇನ ಮಾಡಿದಳು ನಿಮಗೇತಕೀ ಕಲ್ಲು ಮನಸು

ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು ಅಮ್ಮನಿಗೆ ನಿಮ್ಮದೇ ಕನಸು ||3||

...............................................................................................................................


No comments:

Post a Comment