ಹಾಡಲು ಕಲಿಯಿರಿ(CLICK HERE TO LEARN THIS SONG)
ದೇವೀ ಅಪರಾಧ ಕ್ಷಮಾಪಣ ಸ್ತೋತ್ರ (ದ ರಾ ಬೇಂದ್ರೆ)
ಮಂತ್ರವರಿಯೆ ನಾ ಯಂತ್ರವರಿಯೆ ನಾನರಿಯೆ ನಿನ್ನ ಸ್ತುತಿಯಾ।
ಆಹ್ವಾನವರಿಯೆ ನಾ ಧ್ಯಾನವರಿಯೆ ನಾನರಿಯೆ ಶ್ರುತಿಯ ಕಥೆಯಾ।।
ಮುದ್ರೆಗಿದ್ರೆಗಳ ಅರಿಯೆ ನಾನು ಕೂಸಾಗಿ ತೆರೆವೆ ಬಾಯಿ|
ನಿನ್ನ ಅನುಸರಣ ಕ್ಲೇಶ ಹರಣ ಇದನೊಂದೆ ಬಲ್ಲೆ ತಾಯಿ||1||
ಗೊತ್ತಿಲ್ಲ ವಿಧಿಯು ಮೈಗಳ್ಳ ನಾನು ಕೈಯ್ಯಲ್ಲಿ ಕಾಸು ఇల్ల
ನಡೆಯಲಾರೆ ಒಳಗಾಗಿ ಚರಣ ಕೈಬಿಟ್ಟು ಜಾರಿತಲ್ಲ
ಕ್ಷಮಿಸು ಜನನಿ ಶಿವೆ ಸಕಲರನ್ನು ನೀ ಕೃಪೆಯದೋರಿ ಕಾಯಿ
ಹುಟ್ಟಬಹುದಲಾ ಕೆಟ್ಟಮಗುವು ಇರಲಾಸ ಕೆಟ್ಟ ತಾಯಿ||2||
ನಿನ್ನ ಪುತ್ರರೆಷ್ಟೆಷ್ಟೋ ಸರಲರೆನಿಸಿಹರು ಭೂಮಿಯಲ್ಲಿ |
ವಿರಲತರಲ ಸ್ಥಿರವಿರಲೆ ಆರೆ ನಾನವರ ಸೀಮೆಯಲ್ಲಿ|
ಬಿಡಬೇಡ ಕೈಯ ಅದು ತಕ್ಕುದಲ್ಲ
ಕೇಳವ್ವ ಶಿವನ ಜಾಯೆ।
ಕೆಟ್ಟ ಮಗುವು ಹೋ! ಹುಟ್ಟಬಹುದು ಇರಬಹುದೆ ಕೆಟ್ಟ ತಾಯಿ?||3||
ಜಗಜ್ಜನನಿ ನನ್ನಿಂದ ನಿನ್ನ ಪದಸೇವೆಯಾಗಲಿಲ್ಲ ।
ದೇವಿ ನಿನ್ನ ಸಲುವಾಗಿ ನನ್ನ ಹಣ ವೆಚ್ಚವಾಗಲಿಲ್ಲ
ಇಷ್ಟಾದರೂನು ಆ ಸ್ನೇಹಕಣೆಯೆ ಮಮತಾಸ್ವರೂಪ ಮಾಯೆ
ಕೆಟ್ಟ ಮಗುವು ಹುಟ್ಟಾನು ಕೆಟ್ಟವಳು ಆಹಳೆ ಇವಳೆ ತಾಯೆ ॥4||
ಎಷ್ಟಂತ ಪೂಜೆ ಎಷ್ಟೆಂತ ಸೇವೆ ದೇವರನೆ ಬಿಟ್ಟು ಕೊಟ್ಟೆ
ಎಂಬತ್ತರಾಚೆ ಇಳಿವಯಸು ಬಂತು ನಿನ್ನಲ್ಲಿ ದೃಷ್ಟಿ ನೆಟ್ಟೆ|
ಓ ತಾಯಿ ನಿನ್ನ ಕೃಪೆ
ಸಾಕು ಉಳಿದವರು ಹಿಡಿಯಲೆನ್ನ
ಬಿಡಲಿ
ಆಧಾರವಿರದೆ ನಾನಾರ ನಂಬಿ ಈ ಬಗೆಯ ಮೊರೆಯನಿಡಲಿ||5||
ಓ ಅಪರ್ಣೆ ಆ ಕರ್ಣಗಳಲಿ ಬಿದ್ದಿರಲು ನಿನ್ನ ನಾಮ|
ಬಾಯಿಬಡಕ ನಾಯಡಗತಿಂಬ ಜನವಾಣಿ ಅಮೃತಧಾಮ|
ರಂಕ ಕೂಡ ಆತಂಕವಿರದೆ
ತಾ ಕೋಟಿ ಕನಕ ಪಡೆವ
ಜನನಿ ನಿನ್ನ ಜಪ ಮಹಿಮೆಯರಿಯದವ ಹೌದು ತೀರ ಬಡವll6||
ಮೈಯ ತುಂಬ ಸುಡುಗಾಡ ಬೂದಿ, ವಿಷದೂಟ ಬಯಲನುಟ್ಟ
ಜಡೆಯ ಕಟ್ಟಿ ಹಾವನ್ನು ತೊಟ್ಟು ಪಶುಪತಿಯೆ ಆಗಿಬಿಟ್ಟ
ತಲೆಯ ಬುರುಡೆ ಕೈಯಲ್ಲಿ ಭೂತಗಣ ಸುತ್ತಿಕೊಂಡೆ ಇರುವ
ನಿನ್ನ ಕೈಯ ಹಿಡಿದಿರುವ ಪುಣ್ಯದಲಿ ಈಶನಾಗಿ ಮೆರೆವ||7||
ಮೋಕ್ಷದಾಸೆ ನನಗಿಲ್ಲ ವೈಭವದ ಆಸೆಯಿಲ್ಲ ನೆವಕೆ
ವಿಜ್ಞಾನದಾಸೆ ಸುಖದಾಸೆ ಕೂಡ ಇನಿಸಿಲ್ಲ ಇಂಥ ಸ್ತವಕೆ|
ಅಂತೆ ನಿನ್ನ
ಬೇಡುವೆನು ನಾನು ಆಮರಣ ತಪಿಸುತಿರಲಿ
ಓ ಭವಾನಿ ರುದ್ರಾಣಿ
ಶಿವೆಶಿವೇ ಎಂದು ಜಪಿಸುತಿರಲಿ||8||
ವಿವಿಧವಾದ ಉಪಚಾರದಿಂದ ಆರಾಧನೆಯನು ಮಾಡೆ|
ಒಣ ಒಣಕು ಮಾತು ಬರಿ ಚಿಂತೆಯಾತು ನಿನ್ನವನು ಎಂದು ನೋಡೆ|
ಓ ಶ್ಯಾಮೆ ನೀನೆ
ನನ್ನಲ್ಲಿ ಕರುಣೆಯಲಿ ಕರಗಿ ನೋಡುತಿರುವೆ
ಅದು ನಿನಗೆ ಸಹಜ ಇದು ನನಗೆ ಸಹಜ ಕರುಣೆಯನೆ
ಬೇಡುತಿರುವೆ||9||
ಆಪತ್ತಿನಲ್ಲಿ ನಾ ಮಗ್ನನಾಗಿ ಸ್ಮರಿಸುವೆನು ನಿನ್ನನೊಂದೇ
ಹೇ ದುರ್ಗೆ ನೀನು ಕಾರುಣ್ಯಪೂರ್ಣೆ ನಿನ್ನೆಡೆಗೆ ಅಂತೆ ಬಂದೆ
ಇದು ಢೋಂಗು ಡಂಭ ಬರಿದೆಂದು ತಿಳಿಯದಿರು ಭಾವ ಸಹಜ ತೆರನೇ।
ಹಸಿವೆ ನೀರಡಿಕೆಯಿಂದ ಬಳಲಿದವ ತಾಯಿಯೆಡೆಗೆ ಬರನೇ?॥10||
ಜಗದಂಬೆ ಬೇರೆ ವೈಚಿತ್ರ್ಯ ಬೇಕೆ ಕರುಣೆಯಲಿ ಮಾಡು ಎಲ್ಲ
ಅಪರಾಧವೆಷ್ಟೆ ಮಾಡಿದರು ಮಗುವು ತಾಯೇನೂ ಬಿಡುವದಿಲ್ಲ
ಪಾಪಘ್ನಿ ನಿನ್ನ ಸಮರಿಲ್ಲ ಪಾಪದಲಿ ನನಗೆ ಇಲ್ಲ
ಜೋಡು |
ಮಹದೇವಿ ಏನು ನಾ ಹೇಳಬೇಕೆ? ಸರಿ ತಿಳಿದ ಹಾಗೆ ಮಾಡು ||11||