Sep 6, 2025

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ SONG LYRICS |PURANDARA DASA SONGS| JNANAVANTARIGE VIDHI

 

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ ಅ-

ಜ್ಞಾನಿ ಮೂಢರಿಗೆ ಹರಿ ನಿನ್ನ ಬಲವಯ್ಯ॥

 

ಚಂದ್ರನಿಗೆ ವಿಧಿ ಕಾಡಿ ಗ್ರಹಣ ನುಂಗುವುದಾಯ್ತು

ಇಂದ್ರನಿಗೆ ವಿಧಿ ಕಾಡಿ ಭಂಗಪಡಿ..ಸಿತು।

ಚಂದದಲಿ ಪಾಂಡವರ ವನವಾಸ ಮಾಡಿಸಿತು

ಅಂದು ಸೀತೆಯನು ಲಂಕೆಯಲ್ಲಡಗಿಸಿತು॥

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ

ಚಂದದಲಿ ಪಾಂಡವರ ವನವಾಸ ಮಾಡಿಸಿತು

ಅಂದು ಸೀತೆಯನು ಲಂಕೆಯಲ್ಲಡಗಿಸಿತು॥1||

 

ಹಿಂದಕ್ಕೆ ಹರಿಶ್ಚಂದ್ರನ ಅರಣ್ಯವ ಸೇರಿಸಿತು

 ಮಡದ್ಯಾಗಿ ಕಾಡಿತೋ ಕರಿಬಂಟಗೆ।

ಕುಂದದೀಶ್ವರನ ಸುಡುಗಾಡ ಸೇರಿಸಿತು

ಇನ್ನು ವಿಧಿಯನ್ನು ನೋಡುವ ನರರ ಪಾಡೇನು॥

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ….

ಕುಂದದೀಶ್ವರನ ಸುಡುಗಾಡ ಸೇರಿಸಿತು

ಇನ್ನು ವಿಧಿಯನ್ನು ನೋಡುವ ನರರ ಪಾಡೇನು॥2||

 

ವಿಧಿ ಕಾಡೋ ಕಾಲಕ್ಕೆ ಇಲ್ಲದಪವಾದ ಬಂತು

ಕಲಿಸಿತೋ ಸುಳ್ಳು ಕಳವು ಹಾದರವ।

ವಿಧಿಯೊಳಗಾಗದಾ ನರರು ಮತ್ತಿಲ್ಲ

ವಿಧಿಯ ಗೆದ್ದನೊ ನಮ್ಮ ಪುರಂದರ ವಿಟ್ಟಲ॥

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ….

ವಿಧಿಯೊಳಗಾಗದಾ ನರರು ಮತ್ತಿಲ್ಲ

ವಿಧಿಯ ಗೆದ್ದನೊ ನಮ್ಮ ಪುರಂದರ ವಿಟ್ಟಲ॥3||

.......................................................................................................... 

 

 


Sep 4, 2025

ಬಸವಣ್ಣನವರ ವಚನ: ಎನ್ನ ನಡೆಯೊಂದು ಪರಿ |BASAVANNA VACANA - ENNA NADEYONDU PARI

 

ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ.

......................................................................................................................................

 ENNA NADEYONDU PARI ENNA NUDIYONDU PARI

ENNOLAGENOO SHUDDHAVILL NODAYYA

NUDIGE TAKKA NADEYA KANDEDE

KOODALA SANGAMA DEVANOLAGIPPANAYYAA

......................................................................................................................................

ಅಡವಿ ದೇವಿಯ ಕಾಡು ಜನಗಳ SONG LYRICS IN KANNADA |ADAVI DEVIYA KAADU JANAGALA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಅಡವಿ ದೇವಿಯ ಕಾಡು ಜನಗಳ ಹಾಡೂ ನಾಡಿನ ಜೀವ ತುಂಬಿದೆ

ಉವ್ವಾ ಉವ್ವಾ ಉವ್ವಾ ಉವ್ವಾ

ಅಡವಿ ದೇವಿಯ ಕಾಡು ಜನಗಳ ಹಾಡೂ ನಾಡಿನ ಜೀವ ತುಂಬಿದೆ

ಉವ್ವಾ ಉವ್ವಾ ಉವ್ವಾ ಉವ್ವಾ

ಕನ್ನಡಾ ನಾಡೇ ಮಧುಚಂದ್ರ ಕನ್ನಡಾ ನುಡಿಯೇ ಶ್ರೀ ಗಂಧ

 ಉಸಿರು ನೀಡಿದೆ…. ಹಸಿರು ತೂಗಿದೆ…. ಮಧುರವಾಗಿದೆ….||

 

ಕಾಡು ಮಲ್ಲಯ್ಯಂಗೆ ಜೇನು ಕಿತ್ತು ಪೂಜೆ ಕೊಟ್ಟು

 ಜಾಜಿ ಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು

.... ...

ಏಳು ಹಟ್ಟಿಯಿಂದ ಏಳು ರಾತ್ರಿ ಏಳು ಹಗಲು

ಏಳು ಕನ್ನೆರಿಂದ ಸೋಬಲಕ್ಕಿ ದೇವಿಗಿಡಲು

.... ...

ಚಿಗುರೊಡೆಯಿತು ಬೆಳಕರಳಿತು ಹೊಳೆ ತರಿಸಿತು ರಸತಾಣ

ಮನೆ ಮನೆಯಲು ಜನ ಮನದಲು ಶಿವನೊಲವಿನ ಶುಭಧ್ಯಾನ

ಕನ್ನಡ ನೆಲವೇ ಧನ್ಯ ಕನ್ನಡ ಜಲವೇ ಮಾನ್ಯ

ಕನ್ನಡ ನೆಲವೇ ಧನ್ಯ ಕನ್ನಡ ಜಲವೇ ಮಾನ್ಯ

 

ಉಸಿರು ನೀಡಿದೆ…. ಹಸಿರು ತೂಗಿದೆ…. ಮಧುರವಾಗಿದೆ….||

 

ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನು ಕಮ್ಮಿ ಇಲ್ಲ

 ನಮ್ಮ ಪ್ರೀತಿಯಲ್ಲಿ ಸುಳ್ಳು ಮೋಸ ಒಂದೂ ಇಲ್ಲ

.... ...

ನಮ್ಮ ಧರ್ಮದಲ್ಲಿ ಬೇಧಭಾವ ಕಾಣೋದಿಲ್ಲ

 ನಮ್ಮ ನೀತಿಯಲ್ಲಿ ಕಾಡೇ ಇಲ್ದೇ ನಾಡೇ ಇಲ್ಲ

.... ...

ಗಿಡಮರಗಳೇ ತರುಲತೆಗಳೇ ನದಿವನಗಳೇ ವರದಾನ

ಜನ ಬೆರೆತರೆ ಸಮರಸದಲಿಅದೆ ಒಲವಿನ ಹೊಸ ಗಾನ

ಕನ್ನಡ ಜನರೇ ಚೆಂದ ಕನ್ನಡ ಮನವೇ ಅಂದ

ಕನ್ನಡ ಜನರೇ ಚೆಂದ ಕನ್ನಡ ಮನವೇ ಅಂದ

ಉಸಿರು ನೀಡಿದೆ…. ಹಸಿರು ತೂಗಿದೆ…. ಮಧುರವಾಗಿದೆ….||

................................................ 

Also See:

Sep 3, 2025

ಈಶ ನಿನ್ನ ಚರಣ ಭಜನೆ ESHA NINNA CHARANA BHAJANE SONG LYRICS IN KANNADA | KANAKADASA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು

 ದೋಷರಾಶಿ ನಾಶಮಾಡು ಶ್ರೀಶ ಕೇಶವ, ಶ್ರೀಶ ಕೇಶವ |

ಶರಣು ಹೊಕ್ಕೆನಯ್ಯ ಎನ್ನ  ಮರಣ ಸಮಯದಲ್ಲಿ ನಿನ್ನ

ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||

 

ಶೋಧಿಸೆನ್ನ ಭವದ ಕಲುಷ  ಭೋಧಿಸಯ್ಯ ಜ್ಞಾನವೆನಗೆ

ಬಾಧಿಸುವ ಯಮನ ಬಾಧೆ ಬಿಡಿಸು ಮಾಧವ , ಬಿಡಿಸು ಮಾಧವ |

ಹಿಂದನೇಕ ಯೋನಿಗಳಲಿ  ಬಂದು ಬಂದು ನೊಂದೆನಯ್ಯ

ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ ||

 

ಭ್ರಷ್ಟನೆನಿಸಬೇಡ ಕೃಷ್ಣ  ಇಷ್ಟು ಮಾತ್ರ ಬೇಡಿಕೊಂಬೆ

ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ , ವಿಷ್ಣುವೇ |

ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ನುಡಿಯುವಂತೆ

 ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ ||

 

ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆ ಮಾಡಿ

ಜವನ ಬಾಧೆಯನ್ನು ಬಿಡಿಸೋ  ಶ್ರೀತ್ರಿವಿಕ್ರಮ, ಶ್ರೀತ್ರಿವಿಕ್ರಮ |

ಕಾಮಜನಕ ನಿನ್ನ ನಾಮ  ಪ್ರೇಮದಿಂದ ಪಾಡುವಂಥ

 ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ||

 

ಮೊದಲು ನಿನ್ನ ಪಾದಪೂಜೆ ಒದಗುವಂತೆ ಮಾಡೋ ಎನ್ನ

ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ , ಮುದದಿ ಶ್ರೀಧರ |

ಹುಸಿಯನಾಡಿ ಹೊಟ್ಟೆ ಹೊರೆವ  ವಿಷಯದಲ್ಲಿ ರಸಿಕನೆಂದು

 ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ ||

ಬಿದ್ದು ಭವದನೇಕ ಜನುಮ ಬದ್ದನಾಗಿ ಕಲುಷದಿಂದ

ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ , ಪದ್ಮನಾಭನೆ |

ಕಾಮಕ್ರೋಧ ಬಿಡಿಸಿ ನಿನ್ನ  ನಾಮ ಜಿಹ್ವೆಯೊಳಗೆ ನುಡಿಸು

 ಶ್ರೀಮಹಾನುಭಾವನಾದ ದಾಮೋದರ ||

 

ಪಂಕಜಾಕ್ಷ ನೀನು ಎನ್ನ  ಮಂಕುಬುದ್ಧಿಯನ್ನು ಬಿಡಿಸಿ

 ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ , ಸಂಕರ್ಷಣ |

ಏಸು ಜನ್ಮ ಬಂದರೇನು ದಾಸನಲ್ಲವೇನು ನಾನು

 ಘಾಸಿ ಮಾಡದಿರು ಇನ್ನು ವಾಸುದೇವನೇ ||

 

ಬುದ್ಧಿ ಶೂನ್ಯನಾಗಿ ಎನ್ನ ಬದ್ಧಕಾಯ ಕುಹಕ ಮನವ

 ತಿದ್ದಿ ಹೃದಯ ಶುದ್ಧಿ ಮಾಡೋ ಪ್ರದ್ಯುಮ್ನನೇ , ಪ್ರದ್ಯುಮ್ನನೇ |

ಜನನಿ ಜನಕ ನೀನೆಯೆಂದು ನೆನೆವೆನಯ್ಯ ದೀನಬಂಧು

 ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ ||

 

ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮ

 ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ,  ಪುರುಷೋತ್ತಮ |

ಸಾಧುಸಂಗ ಕೊಟ್ಟು ನಿನ್ನ  ಪಾದಭಜನೆ ಇತ್ತು ಎನ್ನ

ಭೇದಮಾಡಿ ನೋಡದಿರೊ ಹೇ ಅಧೋಕ್ಷಜ ||

 

ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ

ಭಾರ ಹಾಕಿರುವೆ ನಿನಗೆ ನಾರಸಿಂಹನೇ , ನಾರಸಿಂಹನೇ |

ಸಂಚಿತಾದಿ ಪಾಪಗಳನು  ಕಿಂಚಿತಾದ ಪೀಡೆಗಳನು

ಮುಂಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ ||

ಜ್ಞಾನ ಭಕುತಿ ಕೊಟ್ಟು ನಿನ್ನ  ಧ್ಯಾನದಲ್ಲಿ ಇಟ್ಟು ಸದಾ

 ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ , ಶ್ರೀ ಜನಾರ್ಧನ |

ಜಪತಪಾನುಷ್ಠಾನವಿಲ್ಲ ದೆ ಕುಪಿತಗಾಮಿಯಾದ ಎನ್ನ

 ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ ||

 

ಮೊರೆಯ ಇಡುವೆನಯ್ಯ ನಿನಗೆ  ಶರಧಿಶಯನ ಶುಭಮತಿಯ

 ಇರಿಸೋ ಭಕ್ತರೊಳಗೆ ಪರಮ ಪುರುಷ ಶ್ರೀಹರೇ , ಪುರುಷ ಶ್ರೀಹರೇ |

ಹುಟ್ಟಿಸಲೇಬೇಡ ಇನ್ನು  ಹುಟ್ಟಿಸಿದಕೆ ಪಾಲಿಸಿನ್ನು

 ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ ||

ಸತ್ಯವಾದ ನಾಮಗಳನು  ನಿತ್ಯದಲ್ಲಿ ಪಠಿಸುವವರ

 ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ , ಕೇಶವ |

ಮರೆಯದಲೆ ಹರಿಯ ನಾಮ  ಬರೆದು ಓದಿ ಪೇಳ್ದವರಿಗೆ

 ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ , ನೆಲೆಯಾದಿಕೇಶವ || ಈಶ ನಿನ್ನ||

..................................................................................