ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬೇಡ (ತುತ್ತಾ ಮುತ್ತಾ ) |LYRICS IN KANNADA

ಹಾಡಲು ಕಲಿಯಿರಿ(CLICK HERE TO LEARN THIS SONG) 


ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದವನೆ ತತ್ವಜ್ನ್ಞಾನಿ ಅಂತ ತಿಳಿಬೇಡ
ತಾಯಿ ಇಲ್ಲದೆ ಜಗವಿಲ್ಲ ಮಡದಿ ಇಲ್ಲದೆ ಬಾಳಿಲ್ಲ
ತುತ್ತಾ ಮುತ್ತಾ ಗೊತ್ತ, ಆತ್ತ ಇತ್ತ ಎತ್ತ ||

ಮಗುವು ಅತ್ತರೆ ತಾನತ್ತು ಹಾಲನೆರೆದವಳು ತಾಯಲ್ಲವೆ
ನಮಗಾಗಿ ಜೀವವ ತೇಯ್ದಿಲ್ಲವೆ
ತಾಳಿ ಪಾಶಕೆ ತಲೆ ಕೊಟ್ಟು ಗಂಡಿನರ್ಧವೆ ತಾನಾಗಿ
ಸತಿ ನಮಗೆ ಮೀಸಲೇ ಆಗಿಲ್ಲವೆ|
ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ
ಇಬ್ಬರು ಬೆಳಗುವರು ಈ ಹೃದಯದ ಕತ್ತಲೆಯ
ತಾಯಿ ಇಲ್ಲದೆ ಬಲವಿಲ್ಲ್ಲ ಮಡದಿ ಇಲ್ಲದೆ ಛಲವಿಲ್ಲ
ತುತ್ತ ಮುತ್ತ ಗೊತ್ತ, ಅತ್ತ ಇತ್ತ ಎತ್ತ ||1||

ಕುಂತಿ ಇಲ್ಲದೆ ಪಾಂಡವರೆ ದ್ರೌಪದಿ ಇಲ್ಲದೆ ಭಾರತವೆ
ಗಂಡು ಇಬ್ಬರ ಸ್ವತ್ತಲ್ಲವೆ
ನಮ್ಮ ಜನ್ಮಕೆ ಈ ಹೆಣ್ಣು ನಮ್ಮ ಮರಿಯ ಜನ್ಮಕೆ ಆ ಹೆಣ್ಣು
ನಮ್ಮ ಎರಡು ಕಣ್ಣು ಎರಡು ಹೆಣ್ಣು

ಮೂಡಣದ ಸೂರ್ಯ ತಾಯಿಯ ಮಡಿಲಂತೆ
ಪಡುವಣದ ಸೂರ್ಯ ಮಡದಿಯ ಮಡಿಲಂತೆ
ತಾಯಿ ಇಲ್ಲದೆ ತವರಿಲ್ಲ ಮಡದಿ ಇಲ್ಲದೆ ಮನೆ ಇಲ್ಲ
ತುತ್ತ ಮುತ್ತ ಗೊತ್ತ ಅತ್ತ ಇತ್ತ ಎತ್ತ ||2||

ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದವನೆ ತತ್ವಜ್ನ್ಞಾನಿ ಅಂತ ತಿಳಿಬೇಡ
ತುತ್ತಾ ಮುತ್ತಾ ಗೊತ್ತ, ಆತ್ತ ಇತ್ತ ಎತ್ತ ||

…………………………………………………………………………………..


ಏನಾದರೂ ಆಗು ಮೊದಲು ಮಾನವನಾಗು | MODALU MANAVANAGU SONG LYRICS IN KANNADA | SIDDAYYA PURANIKA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಓದಿ ಬ್ರಾಹ್ಮಣನಾಗು ಕಾದಿ ಕ್ಷತ್ರಿಯನಾಗು

ಶೂದ್ರ ವೈಶ್ಯನೆ ಆಗೂ ದುಡಿದು ಗಳಿಸಿ

ಏನಾದರೂ ಆಗು ನೀ ಬಯಸಿದಂತಾಗು

ಏನಾದರೂ ಆಗು ನಿನ್ನಿಚ್ಛೆಯ೦ತಾಗು

ಏನಾದರೂ ಸರಿಯೇ ಮೊದಲು ಮಾನವನಾಗು ॥1||

 

ಹಿಂದು ಮುಸ್ಲಿಮನಾಗು ಬೌದ್ಧ ಕ್ರೈಸ್ತನೆ ಆಗು

ಚಾರ್ವಾಕನೆ ಆಗೂ ಭೋಗ ಬಯಸಿ

ಏನಾದರೂ ಆಗು ನೀ ಬಯಸಿದಂತಾಗು

ಏನಾದರೂ ಆಗು ನಿನ್ನಿಚ್ಛೆಯ೦ತಾಗು

ಏನಾದರೂ ಸರಿಯೇ ಮೊದಲು ಮಾನವನಾಗು ॥2||

 

ರಾಜಕಾರಣಿಯಾಗು ರಾಷ್ಟ್ರ ಭಕ್ತನೆ ಆಗು

ಕಲೆಗಾರ ವಿಜ್ಞಾನಿ ವ್ಯಾಪಾರಿಯೇ ಆಗು

ಏನಾದರೂ ಆಗು ನೀ ಬಯಸಿದಂತಾಗು

ಏನಾದರೂ ಆಗು ನಿನ್ನಿಚ್ಛೆಯ೦ತಾಗು

ಏನಾದರೂ ಸರಿಯೇ ಮೊದಲು ಮಾನವನಾಗು ॥3||

............................................................................................................................................

ತಂಗಾಳಿಯಲ್ಲಿ ನಾನು ತೇಲಿ ಬಂದೆ (ಜನ್ಮ ಜನ್ಮದ ಅನುಬಂಧ )LYRICS IN KANNADA |TANGAALIYALLI NAANU TELI BANDE|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯಾ..ಓ ಇನಿಯಾ.....
ನನ್ನನ್ನು ಸೇರಲೂ ಬಾ ಬಾ ನನ್ನನು ಸೇರಲೂ...||

ನಿನ್ನಾ ಎಲ್ಲೂ ಕಾಣದೇ ಹೋಗಿ
ನನ್ನಾ ಜೀವಾ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ
ಹೀಗೇಕೆ ದೂರ ಓಡಿದೇ
ಓ ಇನಿಯಾ.....ಆ..ಆ...
ನನ್ನನ್ನು ಸೇರಲು ಬಾ ಬಾ ನನ್ನನು ಸೇರಲೂ...||1||

ಏತಕೆ ಹೀಗೆ ಅಲೆಯುತಲಿರುವೆ
ಯಾರನು ಹೀಗೆ ಹುಡುಕುತಲಿರುವೆ
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು
ನೀ ಕಾಣೆ ಏನು ನನ್ನನ್ನು?
ಓ ಇನಿಯಾ.....ಆ..ಆ...
ನನ್ನನ್ನು ಸೇರಲು ಬಾ ಬಾ ನನ್ನನು ಸೇರಲೂ...||2||


……………………………………………………………………….


ಜನುಮ ಜೋಡಿ ಆದರು ಏಕೆ ಅಂತರ (ಜನುಮದ ಜೋಡಿ ) |kannada savigana lyrics | JANUMA JODI AADARU EKE ANTHARA |LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಜನುಮ ಜೋಡಿ ಆದರು ಏಕೆ ಅಂತರ
ಜೀವ ಜೀವ ನಡುವಲಿ ಏಕೆ ಕಂದರ
ಮಧುರ ಗೀತೆ ಕೂಡ ಹೀಗೇಕೆ ಘೋರ ||

ಕಡಲೀನ ಒಡಲು ಮುಗಿಲೀನ ಸಿಡಿಲು
ಮಳೆ ಮಿಂಚು ಸೆಳೆತ ಬಾಳೆಲ್ಲವು
ಎಲೆ ಮೇಲೆ ಹನಿಯು ಮುತ್ತಂಥ ಮಣಿಯು
ಬಿರುಗಾಳಿ ಬೀಸಿ ಸುಳಿಯಾದವು
ನೆರೆ ಬಂದು ಸೆರೆಯಾಯ್ತು ಎದೆಯಾಳದಿ
ಕಣ್ಣೀರೆ ಮಾತಾಯ್ತು ಮನದಾಳದಿ
ಹೊರಗೆ ನಗೆಯ ಲೀಲೆ ಒಳಗೆ ಜ್ವಾಲೆ ||1||

ಕನಸೆಲ್ಲ ಬೆಂದು ಬರಿದಾಗೊ ಬದಲು
ನನಸಾಗೊ ವೇಳೆ ಬರಬಾರದೆ
ಈ ಜೀವವೆರಡು ಒಂದೊಂದು ತೀರ
ದಡ ತೋರೊ ದೋಣಿ ಸಿಗಬಾರದೆ
ಶುಭದ ಶಕುನವೆ ವರವಾಗು ಬಾ
ಅಂಗೈಯ ಗೆರೆಯೆ ಬದಲಾಗಿ ಬಾ
ಕರಗಲೀಗ ಬೇಗ ಕರಿಮುಗಿಲು ದೂರ ||2||

....................................................................................................

ಮನಸೇ ಓ ಮನಸೇ ಎಂಥಾ ಮನಸೇ(ಚಂದ್ರಮುಖಿ ಪ್ರಾಣಸಖಿ) LYRICS IN KANNADA | KANNADA SAVIGANA LYRICS| MANASE O MANASE

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಚಂದ್ರಮುಖಿ ಪ್ರಾಣಸಖಿ - ಮನಸೇ ಓ ಮನಸೇ


ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಒಳ ಮನಸೇ


ಮನಸಿನಿನ್ನಲಿ ಯಾವ ಮನಸಿದೆ
ಯಾವ ಮನಸಿಗೆ ನೀ ಮನಸು ಮಾಡಿದೆ
ಮನಸಿಲ್ಲದ ಮನಸಿನಿಂದ ಮನಸು ಮಾಡಿ ಮಧುರ ಮನಸಿಗೆ ಏಏಏ
ಮನಸು ಕೊಟ್ಟು ಮನಸನ್ನೆ ಮರೆತು ಬಿಟ್ಟೆಯಾ
ಮನಸು ಕೊಟ್ಟು ಮನಸೊಳಗೆ ಕುಳಿತು ಬಿಟ್ಟೆಯಾ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ ||

ಓ ಮನಸೇ, ಒಂದು ಮನಸು ಎರಡು ಮನಸು ಎಲ್ಲಾ ಮನಸ ನಿಯಮ
ಓ ಮನಸೆ ,ಎರಡು ಬಾಳು ಮನಸಲೊಂದೆ ಮನಸು ಇದ್ದರೆ ಪ್ರೇಮ
ಮನಸಾಗೊ ಪ್ರತಿ ಮನಸಿಗು ಮನಸೋತಿರುವ,
 ಎಳೆ ಮನಸು ಎಲ್ಲ ಮನಸಿನ ಮನಸೇರಲ್ಲ
ಕೆಲ ಮನಸು ನಿಜ ಮನಸಿನಾಳದ ಮನಸ 
ಹುಸಿ ಮನಸು ಅಂತ ಮನಸನ್ನು ಮನಸೆನ್ನೊಲ್ಲ
ಮನಸೆ ಮನಸೆ ಹಸಿ ಹಸಿ ಮನಸೆ 
ಮನಸು ಒಂದು ಮನಸಿರೋ ಮನಸಿನ ತನನನನ
ತಿರುಗೊ ಮನಸಿಗು ಮರುಗೊ ಮನಸಿದೆ
ಮರದ ಮನಸಿಗು ಕರಗೊ ಮನಸಿದೆ
ಮೈ ಮನಸಲೆ ಮನಸಿದ್ದರೆ ಮನಸು ಮನಸ ಹಿಡಿತವಿದ್ದರೆ ಏಏಏ
ಒಮ್ಮಲ ಮನಸಿದ್ದರು ಮುಳುಗೇಲದು ಮನಸು
ಮನಸೆಲ್ಲೊ ಮನಸು ಮಾಡೊ ಮನಸಾ ಮನಸು
ಮನಸೆ ಓ ಮನಸೆ ||
ಓ ಮನಸೆ, ಮನಸು ಮನಸಲ್ಲಿದ್ದರೇನೆ ಅಲ್ಲಿ ಮನ:ಶಾಂತಿ
ಓ ಮನಸೆ, ಮನಸು ಮನಸ ಕೇಳಿ ಮನಸು ಕೊಟ್ಟರೆ ಮನ:ಸಾಕ್ಷಿ
ಮನಸಾರೆ ಮನಸಿಟ್ಟು ಹಾಡುವ ಮನಸು
ಮನಸೂರಿ ಆಗೋದು ಮನಸಿಗು ಗೊತ್ತು
ಮನಸಿದ್ದರೆ ಮಾರ್ಗಾಂತ ಹೇಳುವ ಮನಸು
ಮನ್ನಿಸುವ ಮನಸಲ್ಲಿ ಮನಸಿಡೋ ಹೊತ್ತು
ಮನಸೆ ಮನಸೆ ಬಿಸಿ ಬಿಸಿ ಮನಸೆ 
ಮನಸು ಒಂದು ಮನಸಿರೊ ಮನಸಿನ ಧಿರೆನನ
ತುಮುಲ ಮನಸಿಗು ಕೋಮಲ ಮನಸಿದೆ
ತೊದಲು ಮನಸಿಗು ಮೃದುಲ ಮನಸಿದೆ
ಮನಸಿಚ್ಛೆ ಮನಸ ಒಳಗೆ ಮನಸ್ವೇಚ್ಛೆ ಮನಸ ಹೊರಗೆ
ಮನಸ್ಫೂರ್ತಿ ಮನಸ ಪೂರ್ತಿ ಇರುವುದೆ ಮನಸು
ಮನಸೆಲ್ಲೊ ಮನಸು ಮಾಡೊ ಮನಸಾ ಮನಸು

ಮನಸೇ ಓ ಮನಸೇ, ಮನಸೇ ಎಳೆ ಮನಸೇ , ಮನಸೇ ಒಳ ಮನಸೇ

………………………………………………………………………….............


ನೀ ಬಂದು ನಿಂತಾಗ (ಕಸ್ತೂರಿ ನಿವಾಸ)KANNADA MOVIE SONG LYRICS IN KANNADA | NEE BANDU NINTAAGA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ||

ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋತಾಗ ಮನವೆರಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೆ ಅನುರಾಗ ಬಾರಾ ||

ಜೇನಂತ ಮಾತಲ್ಲಿ ಕುಡಿಗಣ್ಣ ಸಂಚಲ್ಲಿ
ನಗುವೆಂಬ ಹೂಚೆಲ್ಲಿ ನಿಂತೆ ನೀ ಮನದಲ್ಲಿ
ಎದುರಾದೆ ಹಗಲಲ್ಲಿ ಮರೆಯಾದೆ ಇರುಳಲ್ಲಿ
ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ
ಬಲುದೂರ ನೀ ಹೋಗೆ ನಾ ತಾಳೆ ಈ ಬೇಗೆ
ಬಾ ಬಾರೆ ಚೆಲುವೆ ಬಾರೆ ಒಲವೆ ಬಾರ ||

ಬಾಳೆಂಬ ಪಥದಲ್ಲಿ ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ ನನಸೆಲ್ಲ ಸೊಗಸಾಗಿ
ಯುಗವೊಂದು ದಿನವಾಗಿ ದಿನವೊಂದು ಛಣವಾಗಿ
ನಮ್ಮಾಸೆ ಹೂವಾಗಿ ಇಂಪಾದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
ಎಂದೆಂದು ಜೊತೆಯಾಗಿ ನಡೆವ ಒಂದಾಗಿ ಬಾರ ||

………………………………………………………………………..


ಎಲ್ಲೇ ಇರು ಹೇಗೇ ಇರು (ಕಸ್ತೂರಿ ನಿವಾಸ) | SONG LYRICS IN KANNADA | ELLE IRU HEGE IRU SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಎಲ್ಲೇ ಇರು ಹೇಗೇ ಇರು
ಎಂದೆಂದು ಮನದಲ್ಲಿ ನೀ ತುಂಬಿರು ||

ಬಾಳೆಂಬ ಗುಡಿಗೆ ನೀ ದೇವನಾದೆ
ಕರುಣಾಳು ನೀನು ಆಧಾರವಾದೆ
ನಾ ಬೇಡಲಾರೆ ವರವೇನನೂ
ನೀ ನೀಡು ಸಾಕು ನಗೆಯೊಂದನು ||1||

ನನ್ನಾಸೆ ನೂರು ಹೂವಾಗಿ ನಗಲು
ಹೂಮಾಲೆ ಮಾಡಿ ನಿನಗೆಂದೆ ತರಲು
ಕಣ್ತುಂಬ ಕಂಡೆ ಆ ರೂಪವ
ಬೆಳಕಾಗಿ ಬಂದ ಆ ದೀಪವ ||2||
............................................