ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ |ಕೆ ಎಸ್ ನಿಸಾರ್ ಅಹಮದ್| SADA URIYUTIRUVA HAAGE |PATRIOTIC SONG IN KANNADA

 CLICK HERE TO LEARN THIS SONG          CLICK HERE TO LEARN THIS SONG(SCHOOL POEM)

ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ

 ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದ ಜನತೆ

 ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ||

 

 ಮುಳ್ಳಿನಿಂದ ಅರಿವೆ ಬಿಡಿಸಿದಂತೆ ಬಂತೆ ಮುಕ್ತಿ?

ಹುಲಿಯ ಬಾಯ ಮೇವ ಕಸಿಯುವಂತೆ ಧೀರಶಕ್ತಿ

ಪಡೆಯಿತದನು ಜನತೆ, ಬಾಳ ಬೆಸೆಯೆ ನಾಡ ಭಕ್ತಿ.||1||

 

 ಸ್ವಾತಂತ್ರ್ಯದ ಜೊತೆಗೆ ಬಂದು ಕೂಡಲಿಲ್ಲ ಗಳಿಕೆ

 ವ್ಯಕ್ತಿ ವ್ಯಕ್ತಿ ಬೆವರ ಹೀರಿ ಮರವಾಗಿದೆ ಮೊಳಕೆ;

ಮೇಲೇರಿದ ಹಾಗೆ ಭದ್ರ ಪಾಯವುಂಟು ಗೃಹಕೆ ||2||

 

ಸಾಗಿದಂತೆ ಸಲ್ಲುತಿರಲು ಸಾಧನೆಯೆಡೆ ಗಮನ

 ಪ್ರಾಣವನ್ನೇ ಪಗಡೆಯಾಡಿದವಿರಿಗೆಮ್ಮ ನಮನ;

ತಾಯಮುಡಿಗೆ ದಿನವು ಏರುತಿರಲಿ ಹೂವು ದವನ.||3||

---------------------------------------------------------------------------------

No comments:

Post a Comment

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ninnedege baruvaaga | Kuvempu | Kannada bhavagethe lyrics

ಹಾಡಲು ಕಲಿಯಿರಿ(CLICK HERE TO LEARN THIS SONG)   ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ ?  ಸಡಗರದ ಮಾತುಗಳ ಬಿಂಕವೇಕೆ ? ನಿನ್ನ ಮುಂದಿರುವಾಗ ಮಂತ್ರಗಳ...