Dec 3, 2024

ನೀ ಬಂದು ನಿಂತಾಗ (ಕಸ್ತೂರಿ ನಿವಾಸ)KANNADA MOVIE SONG LYRICS IN KANNADA | NEE BANDU NINTAAGA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ||

ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋತಾಗ ಮನವೆರಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೆ ಅನುರಾಗ ಬಾರಾ ||

ಜೇನಂತ ಮಾತಲ್ಲಿ ಕುಡಿಗಣ್ಣ ಸಂಚಲ್ಲಿ
ನಗುವೆಂಬ ಹೂಚೆಲ್ಲಿ ನಿಂತೆ ನೀ ಮನದಲ್ಲಿ
ಎದುರಾದೆ ಹಗಲಲ್ಲಿ ಮರೆಯಾದೆ ಇರುಳಲ್ಲಿ
ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ
ಬಲುದೂರ ನೀ ಹೋಗೆ ನಾ ತಾಳೆ ಈ ಬೇಗೆ
ಬಾ ಬಾರೆ ಚೆಲುವೆ ಬಾರೆ ಒಲವೆ ಬಾರ ||

ಬಾಳೆಂಬ ಪಥದಲ್ಲಿ ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ ನನಸೆಲ್ಲ ಸೊಗಸಾಗಿ
ಯುಗವೊಂದು ದಿನವಾಗಿ ದಿನವೊಂದು ಛಣವಾಗಿ
ನಮ್ಮಾಸೆ ಹೂವಾಗಿ ಇಂಪಾದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
ಎಂದೆಂದು ಜೊತೆಯಾಗಿ ನಡೆವ ಒಂದಾಗಿ ಬಾರ ||

………………………………………………………………………..


No comments:

Post a Comment