ಸುಲಭ ಶ್ಲೋಕಗಳು-1
ಬೆಳಗ್ಗೆ ಎದ್ದ ತಕ್ಷಣ:
ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ
ಕರಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಮ್||
(ನಮ್ಮ
ಅಂಗೈಯ ಅಗ್ರಭಾಗದಲ್ಲಿ ಲಕ್ಷ್ಮಿ,
ಮಧ್ಯ ಭಾಗದಲ್ಲಿ ಸರಸ್ವತಿ ಮತ್ತು ಮೂಲದಲ್ಲಿಗೌರಿಯು ನೆಲೆಸಿರುತ್ತಾರೆ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಕೈಗಳನ್ನು ನೋಡಿಕೊಳ್ಳಬೇಕು)
ಹಾಸಿಗೆ ಬಿಟ್ಟು ಏಳುವಾಗ:
ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೇ
ವಿಷ್ಣುಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶಮ್ ಕ್ಷಮಸ್ವಮೇ||
(ಸಮುದ್ರವನ್ನೇ
ವಸ್ತ್ರವನ್ನಾಗಿ ಉಳ್ಳವಳು, ಪರ್ವತ
ಶ್ರೇಣಿಗಳನ್ನೇ ತನ್ನ
ಸ್ತನಗಳಾಗಿ ಉಳ್ಳವಳು, ವಿಷ್ಣುಪತ್ನಿ ಯೂ ಆಗಿರುವಂತಹ ಹೇ ಭೂ ಮಾತೆಯೇ
ನಿನಗೆ ನಮಸ್ಕಾರ. ದಯವಿಟ್ಟು ನನ್ನ ಪಾದ ಸ್ಪರ್ಶ ವನ್ನು ಕ್ಷಮಿಸಿಬಿಡು)
ಸ್ನಾನ ಮಾಡುವಾಗ:
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಮ್ ಕುರು||
((ಓ ಪವಿತ್ರರಾದ ಗಂಗೆ, ಯಮುನೆ, ಗೋದಾವರಿ,
ಸರಸ್ವತಿ, ನರ್ಮದೇ, ಸಿಂಧು ಮತ್ತುಕಾವೇರಿ ನದಿಗಳೇ ದಯಮಾಡಿ ನೀವು ಈ ನೀರಿನಲ್ಲಿ ಬಂದು ನೆಲೆಸಿ)
ದೇವರಿಗೆ ಪ್ರಾರ್ಥನೆ:
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಮ್ ಮಮ
ತಸ್ಮಾತ್ ಕಾರುಣ್ಯ ಭಾವೇನ ರಕ್ಷಮಾಮ್ ಪುರುಷೋತ್ತಮ||
(ಓ ಪುರುಷೋತ್ತಮ,
ನನಗೆ ಬೇರೆ ಆಶ್ರಯವಿಲ್ಲ, ನೀನು ನನ್ನ ಏಕೈಕ ಆಶ್ರಯ. ಆದುದರಿಂದ
ನೀನು ನನ್ನನ್ನು ಕರುಣಾ ಭಾವದಿಂದ ರಕ್ಷಿಸು)
ಆಹಾರ ಸೇವಿಸುವಾಗ:
ಅನ್ನಪೂರ್ಣೇ ಸದಾಪೂರ್ಣೇ
ಶಂಕರ ಪ್ರಾಣವಲ್ಲಭೇ
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಮ್ ದೇಹಿಚ ಪಾರ್ವತಿ||
(ಅನ್ನಪೂರ್ಣೇಯೂ,
ಸದಾಪೂರ್ಣೆಯೂ,ಶಿವನ ಪ್ರಾಣ ವಲ್ಲಭೆಯೂ ಆಗಿರುವಂತಹ ಓ ಪಾರ್ವತೀ ದೇವಿ, ನನಗೆ ಜ್ಞಾನ ಮತ್ತು ವೈರಾಗ್ಯ ಸಿದ್ಧಿಗಾಗಿ
ಭಿಕ್ಷೆಯನ್ನು ನೀಡಿ)
ಸಂಜೆ ದೀಪ
ಹೊತ್ತಿಸುವಾಗ:
ದೀಪ ಜ್ಯೋತಿ ಪರಬ್ರಹ್ಮ ದೀಪ ಜ್ಯೋತಿ ಜನಾರ್ದನ:
ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಮ್ ನಮೋಸ್ತುತೆ||
(ದೀಪದ ಬೆಳಕೇ ಪರಬ್ರಹ್ಮ,ದೀಪದ ಬೆಳಕೇ ಸ್ವಯಂ ಜನಾರ್ದನ. ದೀಪದ ಬೆಳಕು ನಮ್ಮ ಎಲ್ಲಾ ಪಾಪಗಳನ್ನು
ಪರಿಹರಿಸುತ್ತದೆ, ಅಂತಹ ದೀಪಕ್ಕೆ ನಮಸ್ಕಾರಗಳು)
ರಾತ್ರಿ
ಮಲಗುವ ಮುನ್ನ:
ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್
ಶಯನೇ ಯ: ಸ್ಮರೇನ್ನಿತ್ಯಂ ದುಸ್ವಪ್ನಮ್ ತಸ್ಯ ನಶ್ಯತಿ||
(ಪ್ರತಿದಿನ
ಮಲಗುವ ಮುನ್ನ ಶ್ರೀ ರಾಮ, ಸ್ಕಂದ, ಹನುಮಂತ,ಗರುಡ ಹಾಗು ಭೀಮನನ್ನು ಯಾರು
ನೆನೆಯುತ್ತಾರೋ ಅವರಿಗೆ ಕೆಟ್ಟ ಕನಸು ಗಳು ಬೀಳುವುದಿಲ್ಲ)
No comments:
Post a Comment