Sep 2, 2019

ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ :KUDURENA THANDIVNI JEEVANA BIGISIVNI SONG LYRICS




ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ



ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ ಬರಬೇಕು ತಂಗಿ ಮದುವೇಗೆ
ಬರಬೇಕು ತಂಗಿ ಮದುವೇಗೆ||

ಅಂಗ್ಲ ಗುಡಿಸೋರಿಲ್ಲ ಗಂಗ್ಲಾ ತೊಳೆಯೋರಿಲ್ಲ ಹೆಂಗೆ ಬರಲಣ್ಣ ಮದುವೆಗೆ
ಅಂಗ್ಲಕ್ಕೆ ಆಳಿಡುವೆ ಗಂಗ್ಲಾಕ್ಕೆ ತೊಟ್ಟಿಡುವೆ ಬರಬೇಕು ತಂಗಿ ಮದುವೆಗೆ
ಬರಬೇಕು ತಂಗಿ ಮದುವೆಗೆ||1||

ಮಳೆಯಾರ ಬಂದಿತ್ತು ಹೊಳೆಯಾರ ತುಂಬಿತ್ತು ಹೆಂಗೆ ಬರಲಣ್ಣ ಮದುವೆಗೆ
ಚಿನ್ನದ ಹರಿಗೋಲ್ಗೆ ರನ್ನದ ಹುಟ್ಟುಹಾಕಿ ಜೋಪಾನವಾಗಿ ಕರೆದೊಯ್ಯುವೆ
ಜೋಪಾನವಾಗಿ ಕರೆದೊಯ್ಯುವೆ||2||

ರನ್ನದ ಮಗುವಣ್ಣ ರಗಳೆಯ ಮಾಡಿತ್ತು ಹೆಂಗೆ ಬರಲಣ್ಣ ಮದುವೆಗೆ
ರನ್ನದ ಮಗುವಿಗೆ ಚಿನ್ನದ ಬಳೆ ಇಡುವೆ ಬರಬೇಕು ತಂಗಿ ಮದುವೇಗೆ
ಬರಬೇಕು ತಂಗಿ ಮದುವೇಗೆ||3||

ಅಮ್ಮನಿಲ್ಲದ ಮನೆಗೆ ನಾ ಹ್ಯಾಂಗ ಬರಲಣ್ಣ ಅಮ್ಮನಿಲ್ಲದ ತವರಿಗೆ
ಅಮ್ಮನ ಸ್ಥಾನದಲ್ಲಿ ನಾನಿಲ್ಲವೇನು ಬರಬೇಕು ತಂಗಿ ಮದುವೇಗೆ
ಬರಬೇಕು ತಂಗಿ ಮದುವೇಗೆ||4||

.....................................................................................................................

Also See:

2 comments:

  1. ಈ ಹಾಡನ್ನು ಬರೆದವರು ಯಾರು

    ReplyDelete
  2. ಇದು ಒಂದು ಜಾನಪದ ಗೀತೆ. ರಚಿಸಿದವರ ಹೆಸರು ಗೊತ್ತಿಲ್ಲ.

    ReplyDelete