ಗಾಯಕನೆ ಹಾಡಯ್ಯ ಭಾವಗೀತೆಯನೊಂದು
ಗಾಯಕನೆ ಹಾಡಯ್ಯ ಭಾವಗೀತೆಯನೊಂದು
ನಯವಿರಲಿ ನಾದದಲಿ ಭಾವ ತುಂಬಿರಲಿ||
ಮನದ ಮಲಿನತೆಯೆಲ್ಲ ನಾಶವಾಗುವ ತೆರದಿ
ನಿನ್ನಿದಿರು ಕುಳಿತವರು ಮನತುಮ್ಬಿ ಸುಖಿಪಂತೆ||1||
ಯಾರಿಗಾಗಿಯೊ ಎಂದು ಹಾಡದಿರು ಎಂದೆಂದೂ
ಅರಿತು ನೀ ನಿನ್ನೊಳಗೆ ಆಲಿಪರ
ತಣಿಸುತಿರು||2||
ಕನ್ನಡದೊಳೇನಿಹುದೊ ಎಂದು ಹಳಿವವರೆಲ್ಲ
ಕನ್ನಡದೊಳೆನ್ನತಿಹುದೊ
ಎಂದು ಬೆರಗಪ್ಪಂತೆ||3||
No comments:
Post a Comment