ಈ ಆಗಸ ಈ ತಾರೆ
ಈ ಆಗಸ ಈ ತಾರೆ ಜುಳು ಜುಳನೆ ಹರಿವ ಜಲಧಾರೆ
ಮುಗಿಲ ಮಳೆಯ ಸಾಲೆ ಆಹಾ ಯಾರದೊ ಈ ಬಗೆ ಲೀಲೆ||
ಬೆಳಕ ಕಾಯ್ವ ಹಿಮವು ಹಿಮವ
ಮೆಲ್ಲನೆ ಮೀಯುವ ತಮವು
ತಮವ ಕಳೆದು ಹಿಮ ಹಾಯುವ
ಮುಗಿಲಿನ ಬೆಚ್ಚನೆ ಕ್ರಮವು
||1||
ಹೆಣ್ಣಿನ ಕಣ್ಣಿನ ದೀಪ
ಉರಿಸದೆ ದೀಪ ರೂಪ ಪ್ರತಾಪ
ರೂಪ ದೀಪದಾಲಾಪದೀ
ಪರಿಮಳಿಸಿದೆ ರಾಗದ ಧೂಪ||2||
No comments:
Post a Comment