ಗಜಮುಖನೆ ಗಣಪತಿಯೆ ನಿನಗೆ ವಂದನೆ
ಗಜಮುಖನೆ ಗಣಪತಿಯೆ ನಿನಗೆ ವಂದನೆ
ನಂಬಿದವರ ಬಾಳಿನ ಕಲ್ಪತರು ನೀನೆ||
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗೂ ದಯಮಾಡಿ ಹರಸು ಎಂದು
ನಿನ್ನ ಸನ್ನಿಧಾನಕೆ ತಲೆಬಾಗಿ ಕೈಯ್ಯ ಮುಗಿದು
ಬೇಡುವ ಭಕ್ತರಿಗೆ ನೀ ದಯಾ ಸಿಂಧು||1||
ಈರೇಳು ಲೋಕದ ಅಣು ಅಣುವಿನ
ಇಹ ಪರದ ಸಾಧನಕೆ ನೀನೇ ಕಾರಣ
ನಿನ್ನೊಲುಮೆ ನೋಟ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ||2||
ಪಾರ್ವತಿ ಪರಶಿವನ ಪ್ರೇಮ ಪುತ್ರನೆ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮನೆನಿಸು ಎನ್ನ
ಪಾದಸೇವೆಯೊಂದೇ ಧರ್ಮ ಸಾಧನ||3||
...............................................
No comments:
Post a Comment