ಸರಳ ಸುಭಾಷಿತಗಳು – 1
ಪರೋಪಕಾರಾಯ ಫಲಂತಿ ವೃಕ್ಷಾ:
ಪರೋಪಕಾರಾಯ ವಹಂತಿ ನದ್ಯ:
ಪರೋಪಕಾರಾಯ ದುಹಂತಿ ಗಾವ:
ಪರೋಪಕಾರಾರ್ಥಂ ಇದಂ ಶರೀರಂ||
(ಮರಗಳು ಹಣ್ಣನ್ನು ಕೊಡುವುದು, ನದಿಗಳು ಎಲ್ಲ ಕಡೆ ಹರಿಯುವುದು, ಹಸುಗಳು ಹಾಲನ್ನು ಕೊಡುವುದು ಇವೆಲ್ಲ ಪರೋಪಕಾರಕ್ಕಾಗಿ. ಅಂತೆಯೇ, ಮನುಷ್ಯ ಜೀವನವೂ ಕೂಡಾ ಪರೋಪಕಾರಕ್ಕಾಗಿಯೇ ಮೀಸಲಾಗಿರಬೇಕು)
ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಮ್
ಪಾತ್ರತ್ವಾತ್ ಧನಮಾಪ್ನೋತಿ ಧನಾತ್ಧರ್ಮ ತತತ್ಸುಖಮ್||
(ವಿದ್ಯೆಯು(ಜ್ಞಾನ) ವಿನಯವನ್ನು ನೀಡುತ್ತದೆ, ವಿನಯದಿಂದ ಮನುಷ್ಯನು ಯೊಗ್ಯತೆಯನ್ನು ಪಡೆಯುತ್ತಾನೆ. ಯೋಗ್ಯತೆಯಿಂದ
ಸಂಪತ್ತನ್ನು ಗಳಿಸುತ್ತಾನೆ. ಆ ಸಂಪತ್ತಿನಿಂದ ಒಳ್ಳೆಯ ಕಾರ್ಯಗಳನ್ನು ಮಾಡಿ, ಅದರಿಂದ ಸಂತೋಷವನ್ನು ಹೊಂದುತ್ತಾನೆ)
ನ ಚೋರ ಹಾರ್ಯ೦ ನ ಚ ರಾಜ ಹಾರ್ಯ೦
ನ ಭ್ರಾತ್ರ್ ಭಾಜ್ಯ೦ ನ ಚ ಭಾರ ಕಾರ್ಯೇ
ವ್ಯಯೇ ಕ್ರತೇ ವರ್ಧತ್ ಏವ ನಿತ್ಯ೦
ವಿದ್ಯಾ ಧನ೦ ಸರ್ವ ಧನ ಪ್ರಧಾನಮ್||
(ವಿದ್ಯೆ ಎನ್ನುವ ಸಂಪತ್ತನ್ನು ಯಾರೂ ಕದಿಯಲು ಸಾಧ್ಯವಿಲ್ಲ, ರಾಜನು ಅದನ್ನು ತೆಗೆದು ಕೊಳ್ಳಲು ಸಾಧ್ಯವಿಲ್ಲ. ಸಹೋದರರಿಗೆ ಅದರಲ್ಲಿ ಯಾವುದೇ ಭಾಗವನ್ನು ಕಸಿಯಲಾಗದು.ಬೇರೆ ಸಂಪತ್ತಿನಂತೆ ಅದನ್ನು ಸಾಗಿಸಲು ತುಂಬ ಭಾರವಿಲ್ಲ. ನಾವು ಅದನ್ನು ವ್ಯಯಿಸಿದಷ್ಟುಅದು ಜಾಸ್ತಿಯಾಗುತ್ತದೆ. ವಿದ್ಯೆ ಎನ್ನುವ ಸಂಪತ್ತು ಬೇರೆ ಎಲ್ಲಾ ಸಂಪತ್ತಿಗಿಂತಲೂ ಮಿಗಿಲಾದದ್ದು)
Related Topics:
ತುಂಬಾ ಚೆನ್ನಾಗಿವೆ ಇನ್ನು ಹೆಚ್ಚಿನ ಸುಭಾಷಿತಗಳನ್ನು ಪ್ರಕಟಿಸಿ...
ReplyDeleteSure, thank you..
DeleteNice
ReplyDeleteThank you..
Delete