ಈ ಭೂಮಿ ಬಣ್ಣದ ಬುಗುರಿ
ಓ ಒಹೊ ಒಹೊ .. ಓ ಒಹೊ
ಒಹೊ... ಓ ಒಹೊ ಒಹೊ
ಈ ಭೂಮಿ ಬಣ್ಣದ ಬುಗುರಿ…. ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ…. ನೀನಿದರ ಮೇಟಿ ಕಣೋ
ನಿಂತಾಗ ಬುಗುರಿಯ ಆಟ…. ಎಲ್ಲಾರು ಒಂದೆ ಓಟ
ಕಾಲ ಕ್ಷಣಿಕ ಕಣೋ…..ಓ ಓ ಓ||
ಮರಿಬೇಡ ತಾಯಿಯ ಋಣವ.... ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೊ|
ಸುಖವಾದ ಬಾಷೆಯ ಕಲಿಸೊ …ಸರಿಯಾದ ದಾರಿಗೆ ನಡೆಸೋ
ಸಂಸ್ಕೃತಿಯೇ ಗುರುವು ಕಣೋ|
ಮರೆತಾಗ
ಜೀವನ ಪಾಠ… ಕೊಡುತಾನೆ ಚಾತಿಟಿ ಏಟ
ಕಾಲ ಕ್ಷಣಿಕ ಕಣೋ…..ಓ ಓ ಓ||1||
ಮರಿಬೇಡ ಮಗುವಿನ ನಗುವ .. ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೆ|
ಕಳಬೇಡ ಕೊಲ್ಲಲು ಬೇಡ ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ|
ನಿಂತಾಗ ಬುಗುರಿಯ ಆಟ…. ಎಲ್ಲಾರು ಒಂದೆ ಓಟ
ಕಾಲ ಕ್ಷಣಿಕ ಕಣೋ…..ಓ ಓ ಓ||2||
No comments:
Post a Comment