Aug 9, 2020

ಈ ಹಿಂದೂ ದೇಶವು ನಮ್ಮ ಮನೆ| EE HINDU DESHAVU NAMMA MANE SONG LYRICS IN KANNADA|PATRIOTIC SONG

 

ದೇಶಭಕ್ತಿ ಗೀತೆ


ಹಿಂದೂ ದೇಶವು ನಮ್ಮ ಮನೆ

ನಮ್ಮ ಮನೆ ಇದು ನಮ್ಮ ಮನೆ||

 

ಉತ್ತರದಲ್ಲಿ ಭಾರಿ ಹಿಮಾಲಯ

 ದಕ್ಷಿಣದಲ್ಲಿಕನ್ಯಾಕುಮಾರಿ

ಪೂರ್ವಪಶ್ಚಿಮದಲಿ ನೀಲ ಸಮುದ್ರ

 ಪಡುವಣ ಮೂಡಣ ಬೆಟ್ಟದ ಸಾಲು||1||

 

ತಾಯಿ ಕಾವೇರಿ ಕೃಷ್ಣ ಗೋದಾವರಿ

ನರ್ಮದ ತಪತಿ ತುಂಗಾಭದ್ರೆ

ಗಂಗಾ ತಾಯಿ ಸಿಂಧೂ ರಾಣಿ

ಚಂದದಿ ಹರಿಯುವ ನಂದನ ನಾಡು||2||

 

ಮೈಸೂರು ಕೇರಳ ಮದರಾಸು ಆಂಧ್ರ

ಬೊಂಬಾಯಿ ಅಸ್ಸಾಂ ಉತ್ಕಲ ವಂಗ

ರಾಜಸ್ಥಾನ ಪಂಜಾಬ್ ಕಾಶ್ಮೀರ

ಉತ್ತರ ಮಧ್ಯ ಹಿಮಾಲಯ ಪ್ರಾಂತ್ಯ||3||

 

ಗೀತ ಸಂದೇಶದ ಆದೇಶದಂತೆ

ಕಾತುರರಾಗಿ ಕಾದಿರಿ ನೀವು

ಗೀತಾಚಾರ್ಯರ ಗೀತೆಯ ನೆನೆಯುತ

ಮಾತೆಯ ಕಾಯು ಬೇಗನೆ ಬನ್ನಿ||4||


..............................

ಹಾಡಲು ಕಲಿಯಿರಿ(LEARN HOW TO SING THIS SONG)

Also see:

banasiri-prakritiya-varadana-lyrics(ಪರಿಸರ ಗೀತೆ: ಬನಸಿರಿ ಪ್ರಕೃತಿಯ ವರದಾನ )

hindustaanavu-endu-mareyada-song-lyrics(ಹಿಂದೂಸ್ಥಾನವು ಎಂದೂ ಮರೆಯದ)

No comments:

Post a Comment