Aug 28, 2020

ಶೃಂಗಾರ ರೂಪನು ಷಣ್ಮುಖನು(SONG ON LORD KARTHIKEYA)SONG LYRICS IN KANNADA - SHRINGARA RUPANU SHANMUKHANU

 

ಶೃಂಗಾರ ರೂಪನು ಷಣ್ಮುಖನು



ಶೃಂಗಾರ ರೂಪನು ಷಣ್ಮುಖನು

ಶೃಂಗಾರ ರೂಪನು ಷಣ್ಮುಖನು

ಬಂಗಾರದೊಡಲಿನ ಕರುಣಾಂತರಂಗನು

ದಂಡಾಯುಧವನು ಧರಿಸಿದ ಸ್ವಾಮಿಯು

ಧರ್ಮವ ಕಾಯುವ ಕಂಕಣ ಬದ್ಧನು|| 


ಪಾರ್ವತಿ ಪ್ರೇಮದಿ ಹರಸಿದ ಕುವರನು

ಪರಶಿವ ಮೆಚ್ಚಿದ ಪಂಡಿತನು

ಪಾಪವ ನೀಗುವ ಪರಮ ಪುನೀತನು

ಬಡವರ ಕಷ್ಟವ ಬಲ್ಲವನೀತನು||1||


ಗಂಗೆಯು ಸಹಿಸದ ಬೆಂಕಿಯ ಬಡಲು

ಅಂತರಂಗವಿದು ಪ್ರೇಮದ ಕಡಲು

ಆನಂದ ಮೂರುತಿ ನಗುನಗುತಿರಲು

ಕೈಲಾಸ ಭುವಿಯಲ್ಲಿ ಯಾವಾಗಲೂ||2||

.................................................................................................................................

Also See:

No comments:

Post a Comment