Sep 20, 2020

ಸರಳ ಸುಭಾಷಿತಗಳು (ಅರ್ಥ ಸಹಿತ)– 3| SUBHASHITAS WITH KANNADA MEANING -3

 

                            ಸರಳ ಸುಭಾಷಿತಗಳು – 3


ಅನ್ನದಾನಂ ಪರಂ ದಾನಂ ವಿದ್ಯಾದಾನಮತ: ಪರಂ|
ಅನ್ನೇನ ಕ್ಷಣಿಕಾ ತೃಪ್ತಿ: , ಯಾವಜ್ಜೀವಂ ವಿದ್ಯಯಾ||

(ಅನ್ನ ದಾನವು ಶ್ರೇಷ್ಠ ದಾನವು. ಅದಕ್ಕೂ ಶ್ರೇಷ್ಠವಾದುದು ವಿದ್ಯಾದಾನ.ಅನ್ನದಾನ ದಿಂದ ಆಗುವ ತೃಪ್ತಿಯು ಕ್ಷಣಿಕವಾದುದು. ಆದರೆ ವಿದ್ಯೆಯಿಂದ ಬರುವ ತೃಪ್ತಿಯು ಜೀವವಿರುವ ವರೆಗೂ ಉಳಿಯುವುದು.)

 ಕಾಕ: ಕೃಷ್ಣ: ಪಿಕ: ಕೃಷ್ಣ: ಕೋ ಭೇದ: ಪಿಕಕಾಕಯೋ: |
ವಸಂತಸಮಯೇ ಪ್ರಾಪ್ತೇ ಕಾಕ: ಕಾಕ: ಪಿಕ:ಪಿಕ: ||

(ಕಾಗೆಯು ಕಪ್ಪಗೆ ಇರುವುದು. ಕೋಗಿಲೆಯೂ ಕಪ್ಪಾಗಿ ಇರುವುದು. ಇವೆರಡನ್ನು ಬೇರೆ ಬೇರೆಯಾಗಿ ತಿಳಿದುಕೊಳ್ಳುವುದು ಹೇಗೆ? ವಸಂತ ಋತು ಬಂದೊಡನೆ ಎರಡು ಪಕ್ಷಿಗಳು ಕೂಗುವವು. ಆ ಕಾಲಕ್ಕೆ ಸ್ವರ ಭೇದದಿಂದ ನಾವು ಎರಡನ್ನೂ ಗುರುತಿಸಬಹುದು. ಕೋಗಿಲೆ ಇಂಪಾಗಿ ' ಕುಹೂ ಕುಹೂ' ಎಂದು ಕುಕಿಲುವುದು, ಕಾಗೆಯು ಕರ್ಕಶವಾಗಿ ಒದರುವುದು)

 ಹಂಸ: ಶ್ವೇತ: ಬಕ: ಶ್ವೇತ: ಕೋ ಭೇದೋ ಬಕ ಹಂಸಯೋ: ನೀರಕ್ಷೀರವಿವೇಕೇ ತು ಹಂಸೋ ಹಂಸ: ಬಕೋ ಬಕ: ||

(ಹಂಸ ಪಕ್ಷಿ ಬೆಳ್ಳಗಿರುತ್ತದೆ; ಬಕಪಕ್ಷಿಯೂ ಬೆಳ್ಳಗಿರುತ್ತದೆ. ಇವೆರಡನ್ನು ವಿಂಗಡಿಸಿ ಹೇಳುವುದು ಹೇಗೆ? ನೀರನ್ನು ಹಾಲಿನಿಂದ ಬೇರ್ಪಡಿಸುವ ಪ್ರಸಂಗದಲ್ಲಿ ಮಾತ್ರ ಹಂಸ – ಬಕಗಳನ್ನು ನಾವು ಗುರುತಿಸಬಹುದು. ಹಾಲು - ನೀರಿನ ಮಿಶ್ರಣದಿಂದ ಹಂಸವು ಹಾಲನ್ನ ಷ್ಟೇ ಹೀರಿ ಕೊಳ್ಳುವುದೆಂದು ಕವಿ ಸಮಯವಿದೆ.)


ಸಾಹಿತ್ಯದೊಂದಿಗೆಹಾಡಲು ಕಲಿಯಿರಿ (LEARN TO SING WITH LYRICS)

Also See:

ಸರಳ ಸುಭಾಷಿತಗಳು – 1| SUBHASHITAS WITH KANNADA MEANING

ಸರಸ್ವತಿ ದೇವಿಯ ಶ್ಲೋಕಗಳು(LORD SARASWATI SHLOKA LYRICS IN KANNADA)

ಸರಳ ಸುಭಾಷಿತ- ಆರಂಭ ಗುರ್ವೀ ಕ್ಷಯಿಣೀ ಕ್ರಮೇಣಾ (ಸಜ್ಜನ -ದುರ್ಜನ ಸ್ನೇಹ ವ್ಯತ್ಯಾಸ)ARAMBHA GURVI KSHAYINI LYRICS AND MEANING

No comments:

Post a Comment