ಭಾವಗೀತೆ: ಎದೆ ತುಂಬಿ ಹಾಡಿದೆನು( EDE TUMBI HAADIDENU LYRICS IN KANNADA)

 

ಭಾವಗೀತೆ: ಎದೆ ತುಂಬಿ ಹಾಡಿದೆನು

ರಚನೆ: ಡಾ . ಜಿ .ಎಸ್ . ಶಿವರುದ್ರಪ್ಪ

 

ಎದೆ ತುಂಬಿ ಹಾಡಿದೆನು ಅಂದು ನಾನು

ಮನವಿಟ್ಟು ಕೇಳಿದಿರಿ ಅಲ್ಲಿ ನೀವು||

 

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು

ಕೇಳುವಿರಿ ಸಾಕೆನಗೆ ಅದುವೆ ಬಹುಮಾನ (2 ಸಲ)

ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ||1||

 

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ

ಹಾಡುವುದು ಅನಿವಾರ್ಯ ಕರ್ಮ ನನಗೆ (2 ಸಲ)

ಕೇಳುವವರಿಹರೆಂದು ನಾ ಬಲ್ಲೆನದರಿಂದ

ಹಾಡುವೆನು ಮೈದುಂಬಿ ಎಂದಿನಂತೆ

ಯಾರು ಕಿವಿ ಮುಚ್ಚಿದರು... ಯಾರು ಕಿವಿ ಮುಚ್ಚಿದರು

ನನಗಿಲ್ಲ ಚಿಂತೆ||2||


No comments:

Post a Comment

ಹೂವು ಚೆಲುವೆಲ್ಲ ನಂದೆಂದಿತು SONG LYRICS | HOOVU CHELUVELLA NANDENDITHU | ಹಣ್ಣೆಲೆ ಚಿಗುರಿದಾಗ MOVIE SONG

ಹಾಡಲು ಕಲಿಯಿರಿ(CLICK HERE TO LEARN THIS SONG)   ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಹೂವು ಚೆಲುವೆಲ್ಲ ನಂದೆಂದಿ...