Oct 24, 2020

ಸರಳ ಸುಭಾಷಿತಗಳು(ಅರ್ಥ ಸಹಿತ) – 4| SUBHASHITAS WITH KANNADA MEANING -4

 

ಸರಳ ಸುಭಾಷಿತಗಳು – 4


ಛಾಯಾಮನ್ಯಸ್ಯ ಕುರ್ವಂತಿ ತಿಷ್ಠಂತಿ ಸ್ವಯಮಾತಪೇ|
 ಫಲಾನ್ಯಪಿ ಪರಾರ್ಥಾಯ ವೃಕ್ಷಾ: ಸತ್ಪುರುಷಾಃ ಇವ||

(ಗಿಡಗಳು ಬೇರೆಯವರಿಗೆ ನೆರಳು ಕೊಟ್ಟು, ಸ್ವತಃ: ತಾವು ಬಿಸಿಲಿನಲ್ಲಿ ನಿಲ್ಲುತ್ತವೆ. ತಮ್ಮ ಹಣ್ಣುಗಳನ್ನು ಕೂಡಾ ಬೇರೆಯವರಿಗೆ ಕೊಡುತ್ತವೆ. ಅಂತೆಯೇ ಸತ್ಪುರುಷರು ಪರರ ಕಲ್ಯಾಣಕ್ಕಾಗಿ ಆತ್ಮಾರ್ಪಣೆ ಮಾಡುವರು.)

 

ನಾಭಿಷೇಕೋ ನ ಸಂಸ್ಕಾರ: ಸಿಂಹಸ್ಯ ಕ್ರಿಯತೇ ವನೆ|
ವಿಕ್ರಮಾರ್ಜಿತ ಸತ್ವಸ್ಯ ಸ್ವಯಮೇವ ಮೃಗೇಂದ್ರತಾ||

(ಸಿಂಹಕ್ಕೆ ಯಾರೂ ಸಂಸ್ಕಾರ ಮಾಡಿ ಪಟ್ಟ ಕಟ್ಟಲಿಲ್ಲ. ತನ್ನ ಪರಾಕ್ರಮದಿಂದ ಗೆದ್ದು ವನ ಪ್ರಪಂಚದಲ್ಲಿ ಅದು ಮೃಗ ಗಳಿಗೆ ಅಧಿಪತಿಯಾಗಿದೆ. ಸಿಂಹದ ಪರಾಕ್ರಮ ಗುಣದ ಮೂಲಕ ಕವಿಯು ಮಹಾಪುರುಷರ ಸತ್ವವನ್ನುಅರ್ಥಪೂರ್ಣವಾಗಿ ಬಣ್ಣಿಸುವನು. ಅವರು ಸ್ವಂತ ಬಲದಿಂದ ಮುಂದೆ ಬರುವರು. ಅವರಿಗೆ ಬೇರೆಯವರ ಮಧ್ಯಸ್ಥಿಕೆ ಬೇಡ)

 

ಲಾಲಯೇತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್|
ಪ್ರಾಪ್ತೇತು ಷೋಡಶೇ ವರ್ಷೇ ಪುತ್ರಂ ಮಿತ್ರವದಾಚರೇತ್||

(ಮೊದಲ ಐದು ವರ್ಷಗಳು ಮಕ್ಕಳನ್ನು ಲಾಲಿಸಬೇಕು. ಐದರಿಂದ ಹದಿನೈದು ವರ್ಷಗಳವರೆಗೆ ಅವರಿಗೆ ಶಿಸ್ತು ಬದ್ಧವಾಗಿರಲು ಕಲಿಸಬೇಕು. ಹದಿನೈದು ವರ್ಷಗಳ ನಂತರ ಅವರೊಂದಿಗೆ ಸ್ನೇಹಿತರಂತೆ ಇರಬೇಕು)

……………………………………………………………………………………

ಹಾಡಲು ಕಲಿಯಿರಿ(LEARN HOW TO SING THIS SONG)


Also See:

ಹುಚ್ಚು ಕೋಡಿ ಮನಸು(ಸಾಹಿತ್ಯ) | HUCHU KODI MANSU SONG LYRICS IN KANNADA

ಹರಿವರಾಸನ೦ ವಿಶ್ವಮೋಹನ೦ ಸಾಹಿತ್ಯ(HARIVARASANAM VISHWA MOHANAM LYRICS: SONG ON LORD AYYAPPA

No comments:

Post a Comment