ಶಾಲಾ ಪ್ರಾರ್ಥನೆ ಯಂ ಶೈವಾ ಸಮುಪಾಸತೇ
ಯಂ
ಶೈವಾ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನ:
ಬೌದ್ಧ
ಬುದ್ಧ ಇತಿ ಪ್ರಮಾಣ ಪಟವ:
, ಕರ್ತೇತಿ ನೈಯಾಯಿಕಾ ||
ಅರ್ಹನ್ನಿತ್ಯಥ
ಜೈನ ಶಾಸನ ರತಾ: , ಕರ್ಮೇತಿ ಮೀಮಾಂಸಕಾ:
ಸೋಯಂ
ವೋ ವಿದಧಾತು ವಾಂಛಿತಫಲಂ, ತ್ರೈಲೋಕ್ಯನಾಥೋ ಹರಿ ||
ಅರ್ಥ:
ಶೈವರು ಶಿವನೆಂದು,
ವೇದಾಂತಿಗಳು ಬ್ರಹ್ಮವೆಂದು,
ಬೌದ್ಧರು ಬುದ್ಧನೆಂದು, ವಿಚಾರ ಪಟುಗಳಾದ ನೈಯಾಯಿಕರು ಕರ್ತೃವೆಂದು, ಜೈನ ಶಾಸನವನ್ನು ಅನುಸರಿಸುವವರು ಅರ್ಹತ್ ಎಂದು, ಮೀಮಾಂಸಕರು ಕರ್ಮವೆಂದು ಯಾರನ್ನು ಉಪಾಸಿಸುವರೋ
ಅಂತಹ ತ್ರೈಲೋಕ್ಯ ನಾಥನಾದ ಹರಿಯು ನಿಮ್ಮ ಇಷ್ಟ ಫಲಗಳನ್ನು ನೀಡಲಿ.
.......................................................................
ಹಾಡಲು ಕಲಿಯಿರಿ(LEARN HOW TO SING THIS SONG)
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDelete