Dec 14, 2020

ಆಂಜನೇಯ ಶ್ಲೋಕಗಳು((ಅರ್ಥ ಸಹಿತ) | LORD ANJANEYA /HANUMAN SHLOKAS LYRICS WITH MEANING IN KANNADA

  ಆಂಜನೇಯ ಶ್ಲೋಕಗಳು

(ಅರ್ಥ ಸಹಿತ)


1 . ಮನೋಜವಂ ಮಾರುತ ತುಲ್ಯ ವೇಗ೦ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|

    ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮ ದೂತಂ ಶರಣಂ ಪ್ರಪದ್ಯೇ||

  ಅರ್ಥ: ಮನಸ್ಸಿನ  ಆಲೋಚನೆಯಂತೆ ಚುರುಕಾದ, ಗಾಳಿಗಿಂತ ಹೆಚ್ಚು ವೇಗವುಳ್ಳ,ಇಂದ್ರಿಯಗಳನ್ನು ಜಯಿಸಿದವನು, ಬುದ್ಧಿವಂತರಲ್ಲಿ ಉತ್ತಮನಾದ, ವಾಯುವಿನ ಮಗನಾದ, ವಾನರ ಸೇನೆ  ಮುಖ್ಯಸ್ಥನಾದ,ಶ್ರೀ ರಾಮ ದೂತನಾದ ಆಂಜನೇಯ ಸ್ವಾಮಿಯನ್ನು ನಾನು ವಂದಿಸುತ್ತೇನೆ.


2. ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ

   ಅಜಾಡ್ಯಂ ವಾಕ್ಪಟುತ್ವಂ ಹನುಮತ್ ಸ್ಮರಣಾದ್ ಭವೇತ್||

ಅರ್ಥ: ಯಾವುದೇ ಪರಿಸ್ಥಿತಿಯನ್ನು ಅರ್ಥಮಾಡಿ ಕೊಳ್ಳುವ ಬುದ್ಧಿವಂತಿಕೆ, ಶಕ್ತಿ, ಒಳ್ಳೆಯ ವ್ಯಕ್ತಿತ್ವ, ಧೈರ್ಯ, ನಿರ್ಭಯತೆ, ಆರೋಗ್ಯ, ಚುರುಕುತನ, ಮಾತಿನ ಕೌಶಲ್ಯ, ಇವೆಲ್ಲವೂ ಹನುಮಂತ ಸ್ಮರಣೆಯಿಂದ ಲಭಿಸುತ್ತದೆ.


ಹಾಡಲು ಕಲಿಯಿರಿ(LEARN HOW TO SING THIS SONG)

Also See:

ಭಗವದ್ಗೀತೆ ಶ್ಲೋಕಗಳು - 1 (WITH MEANING IN KANNADA)

GURU STOTRAM: ಗುರು ಸ್ತೋತ್ರಮ್ |SHLOKAS WITH MEANING

2 comments: