Dec 20, 2020

ಹುಚ್ಚು ಕೋಡಿ ಮನಸು(ಸಾಹಿತ್ಯ) | HUCHU KODI MANSU SONG LYRICS IN KANNADA

 ಹುಚ್ಚು ಕೋಡಿ ಮನಸು

(ಭಾವಗೀತೆ)

ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು ಮರುಗಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ||


ಸೆರಗು ತೀಡಿದಷ್ಟು ಹೊತ್ತು ಹಟಮಾಡುವ ಕೂದಲು
ಸೆರಗು ತೀಡಿದಷ್ಟುಹೊತ್ತು ಹಟಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು||1||


ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ನಗುತ ಅವಳ ಅಣುಕಿಸುತಿದೆ ಗಲ್ಲದ ಕರಿ ಮಚ್ಚೆ||2||


ಬರಿ ಹಸಿರು ಬರಿ ಹೂವು ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು||3||

….......................................


Also See:

ಪರಿಸರ ಗೀತೆ : ಹೃದಯಾಂತರಾಳದಲ್ಲಿ ಅಡಗಿರುವ ನೋವುಗಳು| HRADAYANTARAALADALI ADAGIRUVA |NATURE SONG


ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ :KUDURENA THANDIVNI JEEVANA BIGISIVNI SONG LYRICS



No comments:

Post a Comment