ಪವಮಾನ ಜಗದಾ ಪ್ರಾಣಾ
ಪವಮಾನ
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ
ಭವಭಯಾರಣ್ಯ ದಹನಾ... ದಹನಾ|
ಶ್ರವಣವೆ
ಮೊದಲಾದ ನವವಿಧ ಭಕುತಿಯ
ತವಕದಿಂದಲಿ
ಕೊಡು ಕವಿಜನ ಪ್ರಿಯ||
ಹೇಮ
ಕಚ್ಚುಟ ಉಪವೀತ ಧರಿಪ ಮಾರುತ
ಕಾಮಾದಿ
ವರ್ಗ ರಹಿತ....ಕಾಮಾದಿ ವರ್ಗ ರಹಿತ|
ವ್ಯೋಮಾದಿ
ಸರ್ವವ್ಯಾಪುತ ಸತತ ನಿರ್ಭೀತ
ರಾಮಚಂದ್ರನ
ನಿಜದೂತ ....ರಾಮಚಂದ್ರನ ನಿಜದೂತ|
ಯಾಮ
ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ
ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ
ಮತಿಯನು ನೀ ಮಾಣಿಪುದು||1||
ವಜ್ರ
ಶರೀರ ಗಂಭೀರ ಮುಕುಟಧರ
ದುರ್ಜನವನ
ಕುಠಾರ.....ದುರ್ಜನವನ ಕುಠಾರ|
ನಿರ್ಜರ
ಮಣಿ ದಯಪಾರ ವಾರ ಉದಾರ
ಸಜ್ಜನರಘ
ಪರಿಹಾರ....ಸಜ್ಜನರಘ ಪರಿಹಾರ|
ಅರ್ಜುನಗೊಲಿದಂದು
ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ
ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ
ನಿನ್ನ ಅಬ್ಜ ಪದದ ಧೂಳಿ
ಮರ್ಜನದಲಿ ಭವ
ವರ್ಜಿತವೆನಿಸೋ||2||
ಪ್ರಾಣ ಅಪಾನ
ವ್ಯಾನೋದಾನ ಸಮಾನ
ಆನಂದ ಭಾರತಿ
ರಮಣ....ಆನಂದ ಭಾರತಿ ರಮಣ|
ನೀನೆ ಶರ್ವಾದಿ
ಗೀರ್ವಾಣಾದ್ಯಮರರಿಗೆ
ಜ್ಞಾನಧನ
ಪಾಲಿಪ ವರೇಣ್ಯ....ಜ್ಞಾನಧನ ಪಾಲಿಪ ವರೇಣ್ಯ|
ನಾನು
ನಿರುತದಲಿ ಏನೇನೆಸಗುವೆ
ಮಾನಸಾದಿ
ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ
ಸಿರಿ ವಿಜಯ ವಿಠ್ಠಲನ
ಕಾಣಿಸಿ
ಕೊಡುವುದು ಭಾನುಪ್ರಕಾಶ||3||
ಹಾಡಲು ಕಲಿಯಿರಿ(LEARN HOW TO SING THIS SONG)
Also see:
ಬಾಲಬೋಧೆ(ಮಕ್ಕಳ ಬಾಯಿಪಾಠ):ನವ ಗ್ರಹಗಳು |KIDS BYHEART: 9 GRAHAS
ಬಾನಿನಲ್ಲಿ ಮೂಡಿ ಬಂದ ಚಂದಮಾಮ(ಶಿಶುಗೀತೆ) : BANINALLI MOODI BANDA SONG LYRICS IN KANNADA
No comments:
Post a Comment