Dec 12, 2020

ತನುವು ನಿನ್ನದು ಮನವು ನಿನ್ನದು(TANUVU NINNADU MANAVU NINNADU) SONG LYRICS IN KANNADA & ENGLISH

 

ತನುವು ನಿನ್ನದು ಮನವು ನಿನ್ನದು

(ಭಾವಗೀತೆ)

ರಚನೆ: ರಾಷ್ಟ್ರಕವಿ ಕುವೆಂಪು

 

ತನುವು ನಿನ್ನದು ಮನವು ನಿನ್ನದು ನನ್ನ ಜೀವನ ಧನವು  ನಿನ್ನದು

ನಾನು ನಿನ್ನವನೆಂಬ ಹೆಮ್ಮೆಯ  ತೃಣವು ಮಾತ್ರವೆ ನನ್ನದು||

 

ನೀನು ಹೊಳೆದರೆ ನಾನು ಹೊಳೆವೆನು ನೀನು ಬೆಳೆದರೆ ನಾನು ಬೆಳೆವೆನು

ನನ್ನ ಹರಣದ ಹರಣ ನೀನು ನನ್ನ ಮರಣದ ಮರಣವು|| 1||

 

ನನ್ನ ಮನದಲಿ ನೀನೆ ಯುಕ್ತಿ ನನ್ನ ಹೃದಯದಿ ನೀನೆ ಭಕ್ತಿ

ನೀನೆ ಮಾಯಾ ಮೋಹ ಶಕ್ತಿಯು ನನ್ನ ಜೀವನ ಮುಕ್ತಿಯು|| 2 ||


..............................................................................................

TANUVU NINNADU MANAVU NINNADU
NANNA JEEVANA DHANAVU NINNADU 
NAANU NINNAVANEMBA HEMMEYA 
TRANAVU MAATRAVE NANNADU||

NEENU OLIDARE NAANU OLIVENU
NEENU BELEDARE NAANU BELEVENU
NANNA HARANADA HARANA NEENU 
NANNA MARANADA MARANAVU||1||

NANNA MANADALI NEENE YUKTI
NANNA HRADAYADI NEENE BHAKTI
NEENE MAAYAA MOHA SHAKTHIYU 
NANNA JEEVENA MUKTIYU||2||

.................................................................................


Also see:


No comments:

Post a Comment