Jan 27, 2021

ಬಾನಿಗೊಂದು ಎಲ್ಲೆ ಎಲ್ಲಿದೆ(ಕನ್ನಡ ಭಾವಗೀತೆ/ಚಿತ್ರಗೀತೆ)|BANIGONDU ELLE ELLIDE SONG LYRICS IN KANNADA

 ಬಾನಿಗೊಂದು ಎಲ್ಲೆ ಎಲ್ಲಿದೆ

(ಕನ್ನಡ ಭಾವಗೀತೆ/ಚಿತ್ರಗೀತೆ)

ಹಾಡಲು ಕಲಿಯಿರಿ(CLICK HERE TO LEARN THIS SONG)


ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ

ಏಕೆ ಕನಸು ಕಾಣುವೆ ನಿಧಾನಿಸು ನಿಧಾನಿಸು||

 

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ

ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ

ಅವನ ನಿಯಮ ಮೀರಿ ಇಲ್ಲಿ ಏನು ಸಾಗದು

ನಾವು ಎಣಿಸಿದಂತೆ ಬಾಳಲೇನು ನಡೆಯದು

ವಿಷಾದವಾಗಲಿ ವಿನೋದವಾಗಲಿ

ಅದೇನೇ ಆದರೂ ಅವನೇ ಕಾರಣ||1||

 

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು

ಬಯಸಿದಾಗ ಕಾಣದಿರುವ ಎರಡು ಮುಖಗಳು

ಹರುಷವೊಂದೆ ಯಾರಿಗುಂಟು ಹೇಳು ಜಗದಲಿ

ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ

ದುರಾಸೆಯೇತಕೆ ನಿರಾಸೆಯೇತಕೆ

ಅದೇನೇ ಬಂದರೂ ಅವನ ಕಾಣಿಕೆ||2||

 ...........................................................................................

Also See:

ಕಣ್ಣುಗಳೆರಡು ಸಾಲದಮ್ಮ_ KANNUGALERADU SAALADAMMA LYRICS IN KANNADA

ಹಿಂದೂಸ್ಥಾನವು ಎಂದೂ ಮರೆಯದ: HINDUSTANAVU ENDU MAREYADA SONG LYRICS: PATRIOTIC SONG



Jan 21, 2021

ಕೋಡಗನ ಕೋಳಿ ನುಂಗಿತ್ತ (KODAGANA KOLI NUNGITA) SONG LYRICS IN KANNADA

 

ಕೋಡಗನ ಕೋಳಿ ನುಂಗಿತ್ತ

ರಚನೆ: ಸಂತ ಶಿಶುನಾಳ ಶರೀಫ಼

 ಹಾಡಲು ಕಲಿಯಿರಿ(CLICK HERE TO LEARN THIS SONG)


ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ

ಕೋಡಗನ ಕೋಳಿ ನುಂಗಿತ್ತ||

 

ಆಡು ಆನೆಯ ನುಂಗಿ ಗೋಡೆ ಸುಣ್ಣವ ನುಂಗಿ

ಆಡಲು ಬಂದ ಪಾತರದವಳ ಮದ್ದಲೆ ನುಂಗಿತ್ತ ತಂಗಿ||1||

 

ಒಳ್ಳುಒನಕೆಯ ನುಂಗಿ ಕಲ್ಲು ಗೂಟವ ನುಂಗಿ

ಮೆಲ್ಲಲು ಬಂದ ಮುದುಕಿಯನ್ನೆ ನೆಲ್ಲು ನುಂಗಿತ್ತ ತಂಗಿ||2||

 

ಹಗ್ಗ ಮಗ್ಗವ ನುಂಗಿ ಮಗ್ಗವ ಲಾಳಿ ನುಂಗಿ

ಮಗ್ಗದಲಿರುವ ಅಣ್ಣನನ್ನೇ ಮಣಿಯು ನುಂಗಿತ್ತ ತಂಗಿ||3||

 

ಗುಡ್ಡಗವಿಯನ್ನು ನುಂಗಿ ಗವಿಯು ಇರುವೆಯ ನುಂಗಿ

ಗೋವಿಂದ ಗುರುವಿನ ಪಾದ ನನ್ನನೆ ನುಂಗಿತ್ತ ತಂಗಿ ||4||

......................................................................................

Also See:

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ | KOOSINA KANDIRA SONG LYRICS IN KANNADA

ಗುರುವೆ ನಾನು ಒಂದು ಸೊನ್ನೆ lyrics- GURUVE NAANU ONDU SONNE LYRICS


Jan 19, 2021

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ | KOOSINA KANDIRA SONG LYRICS IN KANNADA

 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ


ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ

ಬಾಲನ ಕಂಡೀರಾ ಬಲವಂತನ ಕಂಡೀರಾ||

 

ಅಂಜನೆಯುದರದಿ ಜನಿಸಿತು ಕೂಸು

ರಾಮನ ಪಾದಕ್ಕೆರಗಿತು ಕೂಸು

ಸೀತೆಗೆ ಉಂಗುರ ಕೊಟ್ಟಿತು ಕೂಸು

ಲಂಕಾ ಪುರವನೇ ಸುಟ್ಟಿತು ಕೂಸು||1||


 ಬಂಡಿ ಅನ್ನವನುಂಡಿತು ಕೂಸು

ಬಕನ ಪ್ರಾಣವ ಕೊಂದಿತು ಕೂಸು

ವಿಷದ ಲಡ್ಡುಗೆ ಮೆದ್ದಿತು ಕೂಸು

ಮಡದಿಗೆ ಪುಷ್ಪವ ಕೊಟ್ಟಿತು ಕೂಸು||2||


 ಮಾಯಾವೆಲ್ಲ ಗೆದ್ದಿತು ಕೂಸು

ಮಧ್ವ ಮತವನುದ್ಧರಿಸಿತು ಕೂಸು

ಪುರಂದರ ವಿಠಲನ ದಯದಿಂದ ಕೂಸು

ಸುಮ್ಮನೆ ಉಡುಪಿಲಿ ನಿಂತಿತು ಕೂಸು||3||

.................................................................................

Also see:

ರಾಮ ರಾಮ ರಾಮ್ ರಾಮ್ ರಾಮ್(RAMA RAMA RAM RAM RAM LYRICS IN KANNADA)

ನಾನು ಸೈನ್ಯ ಸೇರುವೆ(ಕನ್ನಡ ಶಿಶುಗೀತೆ) | NAANU SAINYA SERUVE, KIDS' RHYMES IN KANNADA

Jan 13, 2021

ಎಲ್ಲಿ ಜಾರಿತೋ ಮನವು ಸಾಹಿತ್ಯ | ELLI JAARITO MANAVU SONG LYRICS IN KANNADA

 ಎಲ್ಲಿ ಜಾರಿತೋ ಮನವು

(ಭಾವಗೀತೆ)


ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲಿ ಸಾಲ
ಮೀಟಿ ಹಳೆಯ ಮಧುರ ನೋವ||1||

ಬಾನಿನಲ್ಲಿ ಒಂಟಿ ತಾರೆ

ಸೋನೆ ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ||2||

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ ||3||

.....................................

ಹಾಡಲು ಕಲಿಯಿರಿ(LEARN TO SING THIS SONG)

Also See:

ನಾಯಿಮರಿ ನಾಯಿಮರಿ ತಿಂಡಿ ಬೇಕೆ ( ಶಿಶುಗೀತೆ) | NAYIMARI NAYIMARI TINDI BEKE LYRICS IN KANNADA & ENGLISH

ಸ್ಮೃತಿಪಟಲದಲ್ಲಿ ಹೊತ್ತಿರಲು ಜ್ವಾಲೆ | SMRATIPATALADALLI HOTTIRALU SONG LYRICS|




Jan 8, 2021

ನಾಯಿಮರಿ ನಾಯಿಮರಿ ತಿಂಡಿ ಬೇಕೆ ( ಶಿಶುಗೀತೆ) | NAYIMARI NAYIMARI TINDI BEKE LYRICS IN KANNADA & ENGLISH

 ನಾಯಿಮರಿ ನಾಯಿಮರಿ ತಿಂಡಿ ಬೇಕೆ
 ಶಿಶುಗೀತೆ


ಸಾಹಿತ್ಯ: ಜಿ.ಪಿ. ರಾಜರತ್ನಂ

ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ
ಕ್ವೊಂ ಕ್ವೊಂ ಬೌ ಎಂದು ಕೂಗಿ ಪಾಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು

.................................

NAAYIMARI NAAYIMARI TINDI BEKE

TINDI BEKU TIRTHA BEKU ELLA BEKU


NAAYIMARI NINAGE TINDI EKE BEKU

TINDU GATTIYAAGI MANEYA KAAYABEKU


NAAYIMARI KALLA BANDARENU MAADUVE

KOV KOV BOW ENDU KOOGI HAADUVE


JAANAMARI TAALU HOGI TINDI TARUVENU

TAA NINNA MANEYA NAANU KAAYUTIRUVENU

..............................................................................................

Also See:

ನಮ್ಮ ನೆಲ ಜಲ ನಮ್ಮದೆಂದಿಗೂ:NAMMA NELA JALA NAMMDENDIGU : PATRIOTIC SONG LYRICS

Jan 5, 2021

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು (ಸಾಹಿತ್ಯ) | ELLO HUTTI ELLO BELEDU SONG LYRICS IN KANNADA

 ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
 (ಭಾವಗೀತೆ)


ಹಾಡಲು ಕಲಿಯಿರಿ(LEARN TO SING THIS SONG)

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಒಳಗೊಳಗೇ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ
ಒಳಗೊಳಗೇ ಕೊರೆಯುವವಳು ಸದಾ…
ಗುಪ್ತಗಾಮಿನಿ ನನ್ನ ಶಾಲ್ಮಲಾ

ಹಸಿರು ಮುರಿವ ಎಲೆಗಳಲ್ಲಿ
ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ
ಬೆಂಕಿ ಹಾಡು ಉಸುರುವವಳು ಸದಾ…
ತಪ್ತಕಾಮಿನಿ ನನ್ನ ಶಾಲ್ಮಲಾ


ಭೂಗರ್ಭದ ಮೌನದಲ್ಲಿ
ಜುಂಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ
ಕನಸಿನಲ್ಲಿ ತುಳುಕುವವಳು ಸದಾ..
ಸುಪ್ತಮೋಹಿನಿ ನನ್ನ ಶಾಲ್ಮಲಾ

ನನ್ನ ಬದುಕ ಭುವನೇಶ್ವರಿ
ನನ್ನ ಶಾಲ್ಮಲಾ
ನನ್ನ ಹೃದಯ ರಾಜೇಶ್ವರಿ
ನನ್ನ ಶಾಲ್ಮಲಾ ಸದಾ…
ಗುಪ್ತಗಾಮಿನಿ ನನ್ನ ಶಾಲ್ಮಲಾ

....................................

Also See:

ಆಂಜನೇಯ ಶ್ಲೋಕಗಳು((ಅರ್ಥ ಸಹಿತ) | LORD ANJANEYA /HANUMAN SHLOKAS LYRICS WITH MEANING IN KANNADA


ಈ ಹಿಂದೂ ದೇಶವು ನಮ್ಮ ಮನೆ| EE HINDU DESHAVU NAMMA MANE SONG LYRICS IN KANNADA|PATRIOTIC SONG


Jan 1, 2021

ಹಾಡು ಹಳೆಯದಾದರೇನು ಸಾಹಿತ್ಯ(HAADU HALEYADAADARENU SONG LYRICS IN KANNADA) FILM- ಮಾನಸ ಸರೊವರ

 ಹಾಡು ಹಳೆಯದಾದರೇನು

ಸಾಹಿತ್ಯ :ಡಾ| ಜಿ.ಎಸ್.ಶಿವರುದ್ರಪ್ಪ


ಹಾಡು ಹಳೆಯದಾದರೇನು ಭಾವ ನವನವೀನ..

ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ||

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ||1||

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ||2||

.........................................

ಹಾಡಲು ಕಲಿಯಿರಿ(LEARN TO SING THIS SONG)

Also see:

ಕನ್ನಡ ಜಾನಪದ ಗೀತೆ : ಬಾಗಿ ಬಾಗಿ ಬಂಗಾರ ತೂಗಿ(BAAGI BAAGI BANGAARA TOOGI)

ಕಣ್ಣುಗಳೆರಡು ಸಾಲದಮ್ಮ_ KANNUGALERADU SAALADAMMA LYRICS IN KANNADA