Apr 20, 2021

ಜ್ಞಾನವಿಲ್ಲದೇ ಮೋಕ್ಷವಿಲ್ಲಾ/JNANAVILLADE MOKSHAVILLA song lyrics in kannada

 ತಾಳ:  ಆದಿ ತಾಳ

ರಚನೆ : ಶ್ರೀ ವಿಜಯದಾಸರು


ಏನಾದರೇನು  ಮೋಕ್ಷವಿಲ್ಲಾ

ಜ್ಞಾನವಿಲ್ಲದೇ ಮೋಕ್ಷವಿಲ್ಲಾ  ||


ವೇದ ಓದಿದರೇನು ಶಾಸ್ತ್ರ ಕೇಳಿದರೇನು

ಕಾಡಿ ಕಾದಾಡಿ ಗೆದ್ದರೇನು….. 

ಜ್ಞಾನವಿಲ್ಲದೇ ಮೋಕ್ಷವಿಲ್ಲಾ  || ೧ ||


ಕಾಶಿಗೆ ಹೋದರೇನು ಕಾನನ ಸೇರಿದರೇನು

ಕಾಶಿ ಪೀತಂಬರ ಉಟ್ಟರೇನು ….

ಜ್ಞಾನವಿಲ್ಲದೇ ಮೋಕ್ಷವಿಲ್ಲಾ  || ೨ ||


ಜಪ ತಪ ಮಾಡಿದರೇನು ಜಾಣತನದಿ ಮೆರೆದರೇನು

ವಿಜಯ ವಿಠಲವ ಸಾರಿದರೇನು....

ಜ್ಞಾನವಿಲ್ಲದೇ ಮೋಕ್ಷವಿಲ್ಲಾ  || ೩ ||

.........................................................

Click here to learn this song


Also See:

ಸ್ವರ್ಣಗೌರಿ ಶ್ಲೋಕಗಳು (SWARNA GOWRI SHLOKAS) WITH KANNADA AND ENGLISH LYRICS

ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡಾನ |MUNJANEDDU KUMBARANNA LYRICS IN KANNADA,ENGLISH


Apr 16, 2021

Maakhan chora Nanda kishora (ಮಾಖನ್ ಚೋರ ನಂದ ಕಿಶೋರ) lyrics in kannada

 ಮಾಖನ್ ಚೋರ ನಂದ ಕಿಶೋರ

ಯಶೋದ ಬಾಲ ಗೋಪಾಲ

ನಂದ ಮುಕುಂದ ಶ್ಯಾಮ ಗೋವಿಂದ

ದೇವಕಿ ನಂದನ ಗೋಪಾಲ

ನಂದಲಾಲ ಹೇ ನಂದಲಾಲ

ನಂದಲಾಲ ಹೇ ಗೋಪಾಲ

Apr 10, 2021

ದಾಸನ ಮಾಡಿಕೊ ಎನ್ನ|DAASANA MADIKO ENNA SONG LYRICS IN KANNADA

 

ರಚನೆ: ಪುರಂದರ ದಾಸರು

ರಾಗ : ನಾದನಾಮಕ್ರಿಯೆ

ತಾಳ: ಆದಿತಾಳ

 ........................

ಹಾಡಲು ಕಲಿಯಿರಿ(CLICK HERE TO LEARN THIS SONG)

ದಾಸನ ಮಾಡಿಕೊ ಎನ್ನ ಸ್ವಾಮಿ

ಸಾಸಿರ ನಾಮದ ವೆಂಕಟರಮಣ||

 

ದುರ್ಬುದ್ಧಿಗಳನೆಲ್ಲ ಬಿಡಿಸೋ

ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೋ

ಚರಣ ಸೇವೆ ಎನಗೆ ಕೊಡಿಸೋ

ಅಭಯಕರ ಪುಷ್ಪವನ್ನು ಶಿರದಲ್ಲಿ ಮುಡಿಸೋ||1||

 

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ

ಅಡಿಗೆರಗುವೆನಯ್ಯ ಅನುದಿನ ಪಾಡಿ

ಕಡೆಗಣ್ಣಲೇಕೆನ್ನ ನೋಡಿ ಬಿಡುವೆ

ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ||2||

 

ಮೊರೆ ಹೊಕ್ಕವರ ಕಾಯ್ವ ಬಿರುದು ಎನ್ನ

ಮರೆಯದೇ ರಕ್ಷಣೆ ಮಾಡಯ್ಯ ಪೊರೆದು

ದುರಿತಗಳೆಲ್ಲವ ತರಿದು ಶ್ರೀ

ಪುರಂದರ ವಿಠಲ ಎನ್ನನು ಪೊರೆದು ||3||

..............................................................................................

Also See:


Apr 3, 2021

ಪಿಳ್ಳಂಗೋವಿಯ ಚೆಲ್ವ ಕೃಷ್ಣನ|PILLANGOVIYA CHELWA KRISHNANA SONG LYRICS IN KANNADA

 ರಚನೆ: ಪುರಂದರ ದಾಸರು

ಹಾಡಲು ಕಲಿಯಿರಿ(CLICK HERE TO LEARN THIS SONG)

ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ

ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ…ರಂಗನ

ಎಲ್ಲಿ ನೋಡಿದಿರಿ…

ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರೆ||

 

ನಂದ ಗೋಪನ ಮಂದಿರಂಗಳ ಸಂದುಗೊಂದಿನಲಿ

ಅಂದ ಚಂದದ ಗೋಪ ಬಾಲರ ವೃಂದ ವೃಂದದಲಿ

ಸುಂದರಾಂಗದ ಸುಂದರಿಯರ ಹಿಂದುಮುಂದಿನಲಿ

ಅಂದದಾಕಳ ಕಂದಕರುಗಳ ಮಂದೆ ಮಂದೆಯಲಿ||1||

 

ಈ ಚರಾಚರದೊಳಗೆ ಅಜಂಡದ ಆಚೆಈಚೆಯಲಿ

ಖೇಚರೇಂದ್ರನ ಸುತನ ರಥದ ಉಛ ಪೀಠದಲಿ

ನಾಚದೆ ಮಾಧವ ಕೇಶವ ಎಂಬ ವಾಚಕಂಗಳಲಿ

ಮೀಚು ಕೊಂಡದ ಪುರಂದರವಿಠಲನ ಲೋಚನಾಗ್ರದಲಿ||2||

......................................................................................................

Also See:

ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ|AKASHAKKEDDU NINTA SONG LYRICS IN KANNADA

ಆವ ಕುಲವೋ ರಂಗ ಅರಿಯಲಾಗದು(AAVA KULAVO RANGA ARIYALAGADU LYRICS IN KANNADA