ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ | mella mellane bandane song lyrics | purandara dasa |

 

ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ ||||

ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುತ್ತ ಕೊಟ್ಟು
ನಿಲ್ಲದೆ ಓಡಿ ಪೋದ ಕಳ್ಳಗೆ ಬುದ್ಧಿ ಪೇಳೆ ||.||

ಹಾಲು ಮಾರಲು ಪೋದರೆ, ನಿನ್ನಯ ಕಂದ, ಕಾಲಿಗಡ್ಡವ ಕಟ್ಟಿದ
ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಕಟ್ಟಿ
ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ || 1||

ಮೊಸರ ಮಾರಲು ಪೋದರೆ, ನಿನ್ನಯ ಕಂದ ಪೆಸರೇನೆಂದೆಲೆ ಕೇಳಿದ
ಹಸನಾದ ಹೆರಳ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲ ಬಸಿರು ಮಾಡಿದ ಕೃಷ್ಣ ||2||

ಪೋಗಿರೆ ರಂಗಯ್ಯನ, ಮೇಲೆ ನೀವು , ದೂರೇನು ಕೊಂಡು ಬಂದಿರೆ
ಸೃಷ್ಟೀಶ ಪುರಂದರ ವಿಠಲ ರಾಯನ
ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ || 3||

 ----------------------------------------------------------------------------------------


ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ | mella mellane bandane song lyrics | purandara dasa |

ಹಾಡಲು ಕಲಿಯಿರಿ(CLICK HERE TO LEARN THIS SONG)   ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ ಮೆಲ್ಲ ಮೆಲ್ಲನೆ ಬಂದನೆ || ಪ || ಮೆಲ್ಲ ಮೆಲ್ಲನೆ ಬಂದು...