ಬಾ ಸವಿತಾ.... ಬಾ ಸವಿತಾ...
ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ ,
ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ
ಒಳಿತಲ್ಲದುದೇ ಒಳಿತೆಂಬುದರ ಚಳಕವೆಲ್ಲಕೆ
ವಿನಾಶವ ತಾ.... ||
ನೆಲೆಯಿಂದ ಹೊರಟು ಅಲೆ ಅಲೆ.. ಅಲೆ ಅಲೆ..
ಛಲತೊಟ್ಟ ಮಲ್ಲ ವಾಹಿನಿ ಬಾ..
ನಿಲವಿಲ್ಲ ಜಗದಿ ಕತ್ತಲಿಗೆಂದು
ಗೆಲವನು ಸಾರುವ ಭಾಸವ ತಾ....
ಓಂ ತತ್ಸವಿತುರ್ವರೇಣ್ಯವೆ೦ಬೆವು
ಅಂತಲ್ಲದೆ ಬೇರೆಯದನು ನಂಬೆವು
ಪಂಥವ ಬೆಳಗಿಸಿ,
ನಿರೂಪಿಸಿ ಕಾಂಬೆವು
ಶಾಂತ ಸುಂದರ ಶಿವದಾ ಸವಿತಾ... ||
No comments:
Post a Comment