Nov 28, 2021

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು|Athitha Nodadiru Song Lyrics in Kannada|kannada savigana lyrics

 

   ಹಾಡಲು ಕಲಿಯಿರಿ(CLICK HERE TO LEARN THIS SONG)

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

 ನಿದ್ದೆ ಬರುವಳು ಹೊದ್ದು ಮಲಗು ಮಗುವೆ| ಜೋ… ಜೋ ಜೋ ಜೋ|

ಸುತ್ತಿ ಹೊರಳಾಡದಿರು ಮತ್ತೆ ಹಟ ಹೂಡದಿರು

ನಿದ್ದೆ ಬರುವಳು ಕದ್ದು ಮಲಗು ಮಗುವೆ| ಜೋ… ಜೋ ಜೋ ಜೋ|

 

ಮಲಗು ಚೆಲ್ವಿನ ಸಿರಿಯೆ ಮಲಗು ಒಲ್ಮೆಯ ಸಿರಿಯೆ,

 ಮಲಗು ತೊಟ್ಟಿಲ ಸಿರಿಯೆ ದೇವರಂತೆ|

ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ ,

ಮಲಗು ಚಂದಿರನೂರ ಹೋಗುವೆಯಂತೆ|

ಮಲಗು ಚಂದಿರನೂರ ಹೋಗುವೆಯಂತೆ| ಮಲಗು ಚಂದಿರನೂರ ಹೋಗುವೆಯಂತೆ|

ಜೋ… ಜೋ ಜೋ ಜೋ|

 

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ,

 ಚಂದಿರನ ತಂಗಿಯರು ನಿನ್ನ ಕರೆದು

ಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ , 

ವೀಣೆ ನುಡಿಸುವರಂತೆ ಸುತ್ತ ನೆರೆದು

ವೀಣೆ ನುಡಿಸುವರಂತೆ ಸುತ್ತ ನೆರೆದು| ವೀಣೆ ನುಡಿಸುವರಂತೆ ಸುತ್ತ ನೆರೆದು|

ಜೋ… ಜೋ ಜೋ ಜೋ|

 

ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗ ,

ಹಗಲು ಬರುವನು ಬೆಳ್ಳಿ ಮುಗಿಲ ನಡುವೆ

ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ , 

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ| ಪಟ್ಟದಾನೆಯ ಮೇಲೆ ಪುಟ್ಟ ಮಗುವೆ|

ಜೋ… ಜೋ ಜೋ ಜೋ|

.....................................................................................................

Also See:

ಶಿವ ಪಂಚಾಕ್ಷರಿ ಸ್ತೋತ್ರ(ನಾಗೇಂದ್ರ ಹಾರಾಯ)ಸಾಹಿತ್ಯ| SHIVA PANCHAKSHRA STORTRA ,NAGENDRA HARAYA SONG LYRICS IN KANNADA

ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ ಸಾಹಿತ್ಯ|SHRICHAKRA DHARIGE SONG LYRICS |ಲಾಲಿ ಹಾಡು | ಕನ್ನಡ ಚಿತ್ರಗೀತೆ(ಸ್ವಾತಿ ಮುತ್ತು )

Nov 18, 2021

ಚಿನ್ನದ ನಾಡಿನ ಚಿಗುರುಗಳೆ|CHINNADA NAADINA CHIGURUGALE SONG LYRICS IN KANNADA AND ENGLISH

ಹಾಡಲು ಕಲಿಯಿರಿ(CLICK HERE TO LEARN THIS SONG)

ಚಿನ್ನದ ನಾಡಿನ ಚಿಗುರುಗಳೆ, ಗಂಧದ ಬೀಡಿನ ಮುತ್ತುಗಳೇ

ಬಂದಿದೆ ಹೊನ್ನಿನ ವೇಳೆ, ನಿಮ್ಮದೆ ಬಾಳುವೆ ನಾಳೆ||

 

ನಡೆಯಲಿ ಇರಲಿ ಶಿಸ್ತು, ನುಡಿಯಲಿ ಇರಲಿ ಮುತ್ತು

ಒಲುಮೆಯ ಒಡವೆ ಯಾವತ್ತು ಅದು ದೇವರು ನೀಡಿದ ಸಂಪತ್ತು||1||

 

ರಕ್ತದ ಧಾರೆಯ ಚೆಲ್ಲಿ ಬರೆದರು ಚರಿತೆಯನಿಲ್ಲಿ

ತ್ಯಾಗಕೆ ಸಾಟಿ ತಾನೆಲ್ಲಿ ಅದು ಧರ್ಮದ ರಕ್ಷಣೆ ಬಾಳಲ್ಲಿ||2||

 

ಬಿಳಿಯರ ಮುಖಗಳ ಕಪ್ಪು ಮಾಡಿದನಾ ಹುಲಿ ಟಿಪ್ಪು

ರಾಯಣ್ಣನ ಕೆಚ್ಚೆದೆ ಕಿಚ್ಚು ಅದಕ್ಕಿಂತಲೂ ನಾವಾಗುವ ಹೆಚ್ಚು||3||

..............................................................................................................................

CHINNADA NAADINA CHIGURUGALE

GANDHADA BEEDINA MUTHUGALE

BANDIDE HONNINA VELE

NIMMADE BAALUVE NAALE||

 

NADEYALI IRALI SHISTHU, NUDIYALI IRALI MUTHU

OLUMEYA ODAVE YAAVATHU ADHU DEVARU NEEDIDA SAMPATHU||1||

 

RAKTHADA DHAAREYA CHELLI, BAREDARU CHARITHEYANILLI

TYAAGAKE SAATI THAANELLI ADHU DHARMADA RAKSHANE BAALALLI||2||

 

BILIYARA MUKHGALA KAPPU, MAADIDANAA HULI TIPPU

RAAYANNANA KECHEDE KICHU , ADAKINTHALU NAAVAAGUVA HECHHU||3||

.......................................................................................................

ALSO SEE:

PATRIOTIC SONGS(ದೇಶಭಕ್ತಿಗೀತೆಗಳು).

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

Nov 8, 2021

ಕಾಪಾಡು ಶ್ರೀ ಸತ್ಯನಾರಾಯಣ |KAPADU SHREE SATYA NARAYANA SONG LYRICS IN KANNADA AND ENGLISH

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕಾಪಾಡು ಶ್ರೀ ಸತ್ಯನಾರಾಯಣ

ಪನ್ನಗ ಶಯನ ಪಾವನ ಚರಣ, ನಂಬಿದೆ ನಿನ್ನ||

ನಾರಾಯಣ ಲಕ್ಷ್ಮೀನಾರಾಯಣ , ನಾರಾಯಣ ಸತ್ಯನಾರಾಯಣ||

 

ಮನವೆಂಬ ಮಂಟಪ ಬೆಳಕಾಗಿದೆ

ಹರಿನಾಮದಾ ಮಂತ್ರವೇ ತುಂಬಿದೆ

ಎಂದೆಂದು ಸ್ಥಿರವಾಗಿ ನೀನಿಲ್ಲಿರು

ನನ್ನಲ್ಲಿ ಒಂದಾಗಿ ಉಸಿರಾಗಿರು||1||

 

ನನಗಾಗಿ ಏನನ್ನು ನಾ ಬೇಡೆನು

ಧನಕನಕ ಬೇಕೆಂದು ನಾ ಕೇಳೆನು

ಈ ಮನೆಯು ನೀನಿರುವ ಗುಡಿಯಾಗಲಿ

ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ||2||

......................................................................................................


KAAPAADU SHREE SATY NAARAAYANA

PANNAGA SHAYANA, PAAVANA CHARANA, NAMBIDE NINNA||

NAARAAYANA LAKSHMI NAARAAYANA, NAARAAYANA SATYA NAARAAYANA||

 

MANAVEMBA MANTAPA BELAKAAGIDE

HARINAAMADAA MANTHRA VE THUMBIDE

ENDHENDHU STHIRAVAAGI NEENILLIRU

NANNALLI ONDAAGI USIRAAGIRU||1||

 

NANAGAAGI ENANNU NAA BEDENU

DHANA KANAKA BEKENDU NAA KELENU

EE MANEYU NEENIRUVA GUDIYAAGALI

SUKHA SHAANTHI NEMMADIYA NELEYAAGALI||2||

...........................................................................................................................

ALSO SEE:

ದಾಸನ ಮಾಡಿಕೊ ಎನ್ನ|DAASANA MADIKO ENNA SONG LYRICS IN KANNADA

KANNADA FILM SONGS(ಕನ್ನಡ ಚಿತ್ರಗೀತೆಗಳು).

ತೆರೆದಿದೆ ಮನೆ ಓ ಬಾ ಅತಿಥಿ|Teredide Mane O Baa Atithi song lyrics| ಹೊಸ ಬೆಳಕು |MOVIE- HOSABELAKU| Kannada Savigana

 

ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯಾ
ಹೊಸ ಬಾಳನು ತಾ ಅತಿಥಿ||

ಆವ ರೂಪದೊಳು ಬಂದರು ಸರಿಯೇ
ಆವ ವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ||1||


ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ ||2||


ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ||3||


ಹಾಡಲು ಕಲಿಯಿರಿ(CLICK HERE TO LEARN THIS SONG)

......................................................

ALSO SEE:

ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ|KELISADE KALLU KALLINALI KANNADA NUDI SONG LYRICS IN KANNADA AND ENGLISH

KANNADA FILM SONGS(ಕನ್ನಡ ಚಿತ್ರಗೀತೆಗಳು).

Nov 1, 2021

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು |AMMA NINNA THOLINALLI KANDA NAANU SONG LYRICS IN KANNADA

ಹಾಡಲು ಕಲಿಯಿರಿ(CLICK HERE TO LEARN THIS SONG) 


ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು
ಓಹೋ...ಓಹೋ...........
ಅಮ್ಮ||

ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು||

ನೀನು ಇತ್ತ ಹಣ್ಣುಗಳೆ ಅನ್ನ ನನಗೆ

ನಿನ್ನ ಮಡಿಲಿನಲೇ ನನ್ನ ಹಾಸಿಗೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಹರಿಯುವ ನದಿಯಲೂ ನಿನ್ನ ಛಾಯೆ||1||

ಊರುಬೇಡ ಕೇರಿಬೇಡ ಯಾರೂ ಬೇಡಾ

ಅಮ್ಮ ಒಮ್ಮೆ ಕಣ್ಣ ಬಿಟ್ಟು ನನ್ನ ನೋಡಾ
ತಾಯಿತಂದೆ ಬಂಧುಬಳಗ ನೀನೇ ಎಲ್ಲಾ
ನಿನಗಿಂತ ಬೇರೆ ದೇವರಿಲ್ಲಾ

……………………………………………………………………..

ALSO SEE:

ಕಣ್ಣುಗಳೆರಡು ಸಾಲದಮ್ಮ_ KANNUGALERADU SAALADAMMA LYRICS IN KANNADA

KANNADA FILM SONGS(ಕನ್ನಡ ಚಿತ್ರಗೀತೆಗಳು).