Feb 23, 2022

ಊರಿಗೆ ಬಂದರೆ ದಾಸಯ್ಯ(ಪುರಂದರದಾಸರು) ಸಾಹಿತ್ಯ \ OORIGE BANDARE DASAYYA (PURANDARA DASA) SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಊರಿಗೆ ಬಂದರೆ ದಾಸಯ್ಯ ನಮ್ಮ ಕೇರಿಗೆ ಬಾ ಕಂಡ್ಯ ದಾಸಯ್ಯ

ಕೇರಿಗೆ ಬಂದರೆ ದಾಸಯ್ಯ ಗೊಲ್ಲ ಕೇರಿಗೆ ಬಾ ಕಂಡ್ಯ ದಾಸಯ್ಯ||

ಊರಿಗೆ ಬಂದರೆ ದಾಸಯ್ಯ ನಮ್ಮ ಕೇರಿಗೆ ಬಾ ಕಂಡ್ಯ ದಾಸಯ್ಯ

 

ಕೊರಳೊಳು ವನಮಾಲೆ ಧರಿಸಿದವನೆ

 ಕಿರು ಬೆರಳಲ್ಲಿ ಬೆಟ್ಟವನೆತ್ತಿದನೆ

ಇರುಳು ಹಗಲು ನಿನ್ನ ಕಾಣದೆ ಇರಲಾರೆ

ಮರುಳು ಮಾಡಿದಂತ ದಾಸಯ್ಯ||1||

 

ಕಪ್ಪು ವರ್ಣದ ದಾಸಯ್ಯ ಕಂದರ್ಪ ಪಿತನೆಂಬೋ ದಾಸಯ್ಯ

ಅಪ್ಪಿಕೊಂಡು ನಮ್ಮ ಮನಸ್ಸಿಗೆ ಬಂದರೆ ಕಪ್ಪವ ಕೊಡುವೆನು ದಾಸಯ್ಯ||2||

 

ಸಣ್ಣ ನಾಮದ ದಾಸಯ್ಯ ನಮ್ಮ ಸದನಕ್ಕೆ ಬಾ ಕಂಡ್ಯ ದಾಸಯ್ಯ

ಸದನಕ್ಕೆ ಬಂದರೆ ದಾಸಯ್ಯ ಮಣಿ ಸರವನ್ನು ಕೊಡುವೆನು ದಾಸಯ್ಯ||3||

 

ಸಿಟ್ಟು ಮಾಡದಿರು ದಾಸಯ್ಯ ಸಿರಿ ಪುರಂದರ ವಿಠಲ ದಾಸಯ್ಯ

ರಟ್ಟು ಮಾಡದಿರು ದಾಸಯ್ಯ ತಂಬಿಟ್ಟು ಕೊಡುವೆನು ದಾಸಯ್ಯ||4||

................................................................................................................................

Also See:

ಕಲಿಸು ಗುರುವೆ ಕಲಿಸು(ಸಾಹಿತ್ಯ)|KALISU GURUVE KALISU LYRICS IN KANNADA|GURU POORNIMA

LORD KRISHNA( ಕೃಷ್ಣನ ಹಾಡು)

Feb 11, 2022

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ದೈವವೆ | Nyaya neethi moorthivettha Song Lyrics in Kannada

 ಹಾಡಲು ಕಲಿಯಿರಿ(CLICK HERE TO LEARN THIS SONG)


ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ದೈವವೆ

ಮಹಾ ಮಹಿಮ ಮಂಜುನಾಥ ನಮೋ ಎನ್ನುವೆ

ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ

ನೇತ್ರಾವತಿ ನದಿಯಿದುವೆ ಸುರನದಿ||

 

ಧರ್ಮಪಾಲ ದಯಾಶೀಲ ಮಂಜುನಾಥನೇ

ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ

ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೇ

ನೇಮದಿಂದ ನಮಿಸುವೆವು ಹೆಜ್ಜೆ ಹೆಜ್ಜೆಗೆ||1||

 

ಅಣ್ಣಪ್ಪ ಗುರುವೇ ನಿನಗೆ ಶರಣು ಎನ್ನುವೆ

ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲ್ಲುವೆ

ನ್ಯಾಯ ಮಾರ್ಗದಲ್ಲಿ ನಡೆದು ಧನ್ಯನಾಗುವೆ

ಧರ್ಮ ನನ್ನ ಕಾಯಲೆಂದು ಸದಾ ಬೇಡುವೆ||2||

 

ಧರ್ಮವನ್ನು ರಕ್ಷಿಸುವ ಶಕ್ತಿ ನೀಡು

ನಿನ್ನ ನಂಬಿ ಬಾಳುವ ಭಕ್ತಿ ನೀಡು

ಸತ್ಯವೇ ಗೆಲ್ಲುವ  ನ್ಯಾಯ ನೀಡು

ನಮ್ಮ ಮನದ ಗುಡಿಯಲ್ಲಿ ವಾಸಮಾಡು||3||

.......................................................................................................

Also See:

ಭೋ ಶಂಭೋ ಶಿವ ಶಂಭೋ ಸ್ವಯಂಭೋ | Bho Shambho Shiva Shambho song lyrics in Kannada and English

LORD SHIVA(ಈಶ್ವರನ ಹಾಡು)

Feb 7, 2022

ಭೋ ಶಂಭೋ ಶಿವ ಶಂಭೋ ಸ್ವಯಂಭೋ | Bho Shambho Shiva Shambho song lyrics in Kannada and English

 ಹಾಡಲು ಕಲಿಯಿರಿ(CLICK HERE TO LEARN THIS SONG)

ಭೋ ಶಂಭೋ ಶಿವ ಶಂಭೋ ಸ್ವಯಂಭೋ

ಭೋ ಶಂಭೋ ಶಿವ ಶಂಭೋ ಸ್ವಯಂಭೋ||

 

ಗಂಗಾಧರ ಶಂಕರ ಕರುಣಾಕರ

ಮಾಮವ ಭವ ಸಾಗರ ತಾರಕ||

 

ನಿರ್ಗುಣ ಪರಬ್ರಹ್ಮ ಸ್ವರೂಪ

ಗಮಾಗಮ ಭೂತ ಪ್ರಪಂಚ ರಹಿತ|

ನಿಜಗುಹ ನಿಹಿತ ನಿತಾಂತ ಅನಂತ

ಆನಂದ ಅತಿಶಯ ಅಕ್ಷಯ ಲಿಂಗ||1||

 

ಧಿಮಿತ ಧಿಮಿತ ಧಿಮಿ ಧಿಮಿ ಕಿಟ ಕಿಟ ತೋಂ

ತೋಂ ತೋಂ ತರಿಕಿಟ ತರಿಕಿಟ ಕಿಟ ತೋಂ

ಮತಂಗ ಮುನಿವರ ವಂದಿತ ಈಶ

ಸರ್ವ ದಿಗಂಬರ ವೇಷ್ಟಿತ ವೇಷ

ನಿತ್ಯ ನಿರಂಜನ ನೃತ್ಯ ನಟೇಶ

ಈಶ ಸರ್ವೇಶ ಸರ್ವೇಶ||2||

...........................................................................

Bho shambho shiva shambho swayam bho

Bho shambho shiva shambho swayam bho||

Gangadhara shankara karunaakara

maamava bhava saagara taaraka||


Nirguna parabrahma swaroopa

gamaagama bhoota prapancha rahita

Nija guha nihita nitaanta ananta

Ananda atishaya akshaya linga||1||


Dhimita dhimita dhimi dhimi kita kita thom

thom thom tarikita tarikita kita thom

Matanga munivara vandita eesha 

Sarva digambara veshtita vesha

nitya niranjana nratya natesha

Eesha sarvesha sarvesha||2||

................................................................................................

Also See:

ನೀಡು ಶಿವ ನೀಡದಿರು ಶಿವ(NEEDU SHIVA NEEDADIRU SHIVA) SONG LYRICS IN KANNADA

ಈಶ್ವರ ಶ್ಲೋಕಗಳು|SHLOKAS ON LORD SHIVA LYRICS

Feb 4, 2022

ಭಿಕ್ಷೆವ್ಯಾತಕೆ ಪಾಲಾಕ್ಷ ನಿನಗೆ|Bhikshevyatake Palaksha|Song on Lord Shiva|Lyrics

 ಹಾಡಲು ಕಲಿಯಿರಿ(CLICK HERE TO LEARN THIS SONG)

ಭಿಕ್ಷೆವ್ಯಾತಕೆ ಪಾಲಾಕ್ಷ ನಿನಗೆ

ಲಕುಮಿ ಪತಿಯೆಂಬ ಸಖನಿದ್ದ ಬಳಿಕ||

 

ರಜತಾದ್ರಿ ಅರಮನೆಯು ಹೇಮಕೂಟವೆ ಧನುವು

ಗಜಗಮನ ಸುರನಿಖರ ಪರಿವಾರವು |

ನಿಜ ರಾಣಿ ಅನ್ನಪೂರ್ಣೆ ಭುಜಗ ಪತಿ ಭೂಷಣನು

ಗಜಮುಖನೆ ಮೊದಲಾದ ಮಕ್ಕಳಿರಲು||1||

 

ರೊಕ್ಕ ರೂಪಾಯಿಗಳು ಇಲ್ಲವೆಂಬೆಯ ಸಾಲ

ತಕ್ಕೊಬಾರದೆ ಧನಪನಲ್ಲಿ|

ಶುಕ್ರ ಒಕ್ಕಣ್ಣ ಮೋಹನ ವಿಠ್ಠಲ ಇಕ್ಕಣ್ಣ

ಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವು ಬಿಡದೆ||2||

.............................................................................................

Also See:

ನೀಡು ಶಿವ ನೀಡದಿರು ಶಿವ(NEEDU SHIVA NEEDADIRU SHIVA) SONG LYRICS IN KANNADA

ಶಿವ ಪಂಚಾಕ್ಷರಿ ಸ್ತೋತ್ರ(ನಾಗೇಂದ್ರ ಹಾರಾಯ)ಸಾಹಿತ್ಯ| SHIVA PANCHAKSHRA STORTRA ,NAGENDRA HARAYA SONG LYRICS IN KANNADA


LORD SHIVA(ಈಶ್ವರನ ಹಾಡು). EASY SHLOKAS(ಸರಳ ಶ್ಲೋಕಗಳು)

Feb 1, 2022

ಮನಸೇ,ಬದುಕು ನಿನಗಾಗಿ ||Manase Baduku Ninagaagi (Kannada movie Amrathavarshini song) lyrics

 ಹಾಡಲು ಕಲಿಯಿರಿ(CLICK HERE TO LEARN THIS SONG)


ಮನಸೇ...... ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲಾ ಸುಳ್ಳು ಅಲ್ಲವೇ.......

ಮನಸೇ ಮನಸೇ ||

ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ

ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಕ್ಷಮಿಸೇ||...

ಮನಸೇ ಮನಸೇ ||

ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ ಕೈಗೊಂಬೆಯಾದೆ
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
ನಿನ್ನ ಮರೆತುಹೋದರೆ ಈಗ ಬದುಕೇಕೆ ಮುಂದೆ

ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಹರಿಸೇ||...

ಮನಸೇ......ಈ ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲಾ ಸುಳ್ಳು ಅಲ್ಲವೇ ......

...........................................

Also See:

ಇಳಿದು ಬಾ ತಾಯಿ ಇಳಿದು ಬಾ (ಸಾಹಿತ್ಯ) | Ilidu baa taaye ilidu baa song lyrics in kananda

EMOTIONAL SONGS(ಭಾವಗೀತೆಗಳು),KANNADA FILM SONGS(ಕನ್ನಡ ಚಿತ್ರಗೀತೆಗಳು).