ಹಾಡಲು ಕಲಿಯಿರಿ(CLICK HERE TO LEARN THIS SONG)
ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ದೈವವೆ
ಮಹಾ ಮಹಿಮ ಮಂಜುನಾಥ ನಮೋ ಎನ್ನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿಯಿದುವೆ ಆ ಸುರನದಿ||
ಧರ್ಮಪಾಲ ದಯಾಶೀಲ ಮಂಜುನಾಥನೇ
ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ
ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೇ
ನೇಮದಿಂದ ನಮಿಸುವೆವು ಹೆಜ್ಜೆ ಹೆಜ್ಜೆಗೆ||1||
ಅಣ್ಣಪ್ಪ ಗುರುವೇ ನಿನಗೆ ಶರಣು ಎನ್ನುವೆ
ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲ್ಲುವೆ
ನ್ಯಾಯ ಮಾರ್ಗದಲ್ಲಿ ನಡೆದು ಧನ್ಯನಾಗುವೆ
ಧರ್ಮ ನನ್ನ ಕಾಯಲೆಂದು ಸದಾ ಬೇಡುವೆ||2||
ಧರ್ಮವನ್ನು ರಕ್ಷಿಸುವ ಶಕ್ತಿ ನೀಡು
ನಿನ್ನ ನಂಬಿ ಬಾಳುವ ಭಕ್ತಿ ನೀಡು
ಸತ್ಯವೇ ಗೆಲ್ಲುವ ನ್ಯಾಯ
ನೀಡು
ನಮ್ಮ ಮನದ ಗುಡಿಯಲ್ಲಿ ವಾಸಮಾಡು||3||
.......................................................................................................
Also See:
ಭೋ ಶಂಭೋ ಶಿವ ಶಂಭೋ ಸ್ವಯಂಭೋ | Bho Shambho Shiva Shambho song lyrics in Kannada and English
No comments:
Post a Comment