Feb 1, 2022

ಮನಸೇ,ಬದುಕು ನಿನಗಾಗಿ ||Manase Baduku Ninagaagi (Kannada movie Amrathavarshini song) lyrics

 ಹಾಡಲು ಕಲಿಯಿರಿ(CLICK HERE TO LEARN THIS SONG)


ಮನಸೇ...... ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲಾ ಸುಳ್ಳು ಅಲ್ಲವೇ.......

ಮನಸೇ ಮನಸೇ ||

ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ

ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಕ್ಷಮಿಸೇ||...

ಮನಸೇ ಮನಸೇ ||

ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ ಕೈಗೊಂಬೆಯಾದೆ
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
ನಿನ್ನ ಮರೆತುಹೋದರೆ ಈಗ ಬದುಕೇಕೆ ಮುಂದೆ

ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಹರಿಸೇ||...

ಮನಸೇ......ಈ ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲಾ ಸುಳ್ಳು ಅಲ್ಲವೇ ......

...........................................

Also See:

ಇಳಿದು ಬಾ ತಾಯಿ ಇಳಿದು ಬಾ (ಸಾಹಿತ್ಯ) | Ilidu baa taaye ilidu baa song lyrics in kananda

EMOTIONAL SONGS(ಭಾವಗೀತೆಗಳು),KANNADA FILM SONGS(ಕನ್ನಡ ಚಿತ್ರಗೀತೆಗಳು).

No comments:

Post a Comment