ಹಾಡಲು ಕಲಿಯಿರಿ(CLICK HERE TO LEARN THIS SONG)
ಊರಿಗೆ
ಬಂದರೆ ದಾಸಯ್ಯ ನಮ್ಮ ಕೇರಿಗೆ ಬಾ
ಕಂಡ್ಯ ದಾಸಯ್ಯ
ಕೇರಿಗೆ
ಬಂದರೆ ದಾಸಯ್ಯ ಗೊಲ್ಲ ಕೇರಿಗೆ ಬಾ ಕಂಡ್ಯ ದಾಸಯ್ಯ||
ಊರಿಗೆ
ಬಂದರೆ ದಾಸಯ್ಯ ನಮ್ಮ ಕೇರಿಗೆ ಬಾ
ಕಂಡ್ಯ ದಾಸಯ್ಯ
ಕೊರಳೊಳು
ವನಮಾಲೆ ಧರಿಸಿದವನೆ
ಕಿರು ಬೆರಳಲ್ಲಿ ಬೆಟ್ಟವನೆತ್ತಿದನೆ
ಇರುಳು
ಹಗಲು ನಿನ್ನ ಕಾಣದೆ ಇರಲಾರೆ
ಮರುಳು
ಮಾಡಿದಂತ ದಾಸಯ್ಯ||1||
ಕಪ್ಪು
ವರ್ಣದ ದಾಸಯ್ಯ ಕಂದರ್ಪ ಪಿತನೆಂಬೋ ದಾಸಯ್ಯ
ಅಪ್ಪಿಕೊಂಡು
ನಮ್ಮ ಮನಸ್ಸಿಗೆ ಬಂದರೆ ಕಪ್ಪವ ಕೊಡುವೆನು ದಾಸಯ್ಯ||2||
ಸಣ್ಣ
ನಾಮದ ದಾಸಯ್ಯ ನಮ್ಮ ಸದನಕ್ಕೆ ಬಾ
ಕಂಡ್ಯ ದಾಸಯ್ಯ
ಸದನಕ್ಕೆ ಬಂದರೆ
ದಾಸಯ್ಯ ಮಣಿ ಸರವನ್ನು ಕೊಡುವೆನು ದಾಸಯ್ಯ||3||
ಸಿಟ್ಟು
ಮಾಡದಿರು ದಾಸಯ್ಯ ಸಿರಿ ಪುರಂದರ ವಿಠಲ
ದಾಸಯ್ಯ
ರಟ್ಟು
ಮಾಡದಿರು ದಾಸಯ್ಯ ತಂಬಿಟ್ಟು ಕೊಡುವೆನು ದಾಸಯ್ಯ||4||
................................................................................................................................
Also See:
ಕಲಿಸು ಗುರುವೆ ಕಲಿಸು(ಸಾಹಿತ್ಯ)|KALISU GURUVE KALISU LYRICS IN KANNADA|GURU POORNIMA
No comments:
Post a Comment