Nov 25, 2023

KANNADA RHYMES- ನಾಯಿಮರಿ-ನಾಯಿಮರಿ ತಿಂಡಿ ಬೇಕೆ LYRICS - NAYI MARI NAYI MARI THINDI BEKE

 

ನಾಯಿಮರಿ-ನಾಯಿಮರಿ ತಿಂಡಿ ಬೇಕೆ ?

ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

 ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?

ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

 ನಾಯಿ ಮರಿ ಕಳ್ಳ ಬಂದರೆ ಏನು ಮಾಡುವೆ?

 ಬೌ ಬೌ ಎಂದು ಕೂಗಿ ಹೇಳುವೆ,

ಜಾಣಮರಿ ನಾನು ಹೋಗಿ ತಿಂಡಿ ತರುವೆನು

ನಾನು ನಿನ್ನ ಮನೆಯನ್ನು ಕಾಯುತ್ತಿರುವೆನು ||

 

                                                 -ಜಿ. ಪಿ ರಾಜರತ್ನಮ್

.............................................................................


Oct 30, 2023

ಸರಳ ಸುಭಾಷಿತ - ಕಸ್ಯಾಪಿ ಕೋಪ್ಯತಿಶಯೋಸ್ತಿ |SUBHASHITA WITH MEANING| KANNADA SAVIGANA

 

कस्यापि कोप्यतिश्योस्ति तेन लोके

ख्यातिं प्रयाति न हि सर्व विदस्तु सर्वॆ।

किं केतकी फलति किं पनस​: सपुष्प:

किं नागवल्यपि पुष्प फलैरुपेता ||

 

ಕಸ್ಯಾಪಿ ಕೋಪ್ಯತಿಶಯೋಸ್ತಿ ತೇನ ಲೋಕೆ

ಖ್ಯಾತಿ೦ ಪ್ರಯಾತಿ ಹಿ ಸರ್ವ ವಿದಸ್ತು ಸರ್ವೇ।

ಕಿ೦ ಕೇತಕೀ ಫಲತಿ ಕಿ೦ ಪನಸ: ಪುಷ್ಪ:

ಕಿ೦ ನಾಗವಲ್ಯಪಿ ಪುಷ್ಪ ಫಲೈರುಪೇತಾ||

 

ಪ್ರತಿಯೊಬ್ಬ ಮನುಷ್ಯನಲ್ಲು ಯಾವುದೋ ಒಂದು ವಿಶಿಷ್ಟವಾದ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಎಲ್ಲರಲ್ಲೂ ಎಲ್ಲಾ ರೀತಿಯ ಪ್ರತಿಭೆ ಇರಲು ಸಾಧ್ಯವಿಲ್ಲ.  ಕೇತಕಿ ಹಣ್ಣು ಫಲ ನೀಡುತ್ತದೆಯೇ? ಹಲಸಿನ ಹಣ್ಣು ಸಪುಷ್ಪವೆ?ವೀಳ್ಯದೆಲೆಯ ಬಳ್ಳಿ ಹೂ ಹಣ್ಣುಗಳಿಂದ ತುಂಬಿದೆಯೇ?

ಪ್ರತಿಯೊಬ್ಬರು ಅವರವರ ಪ್ರತಿಭೆಯ ಮೂಲಕ ಸಮಾಜದಲ್ಲಿ ಮನ್ನಣೆಯನ್ನು ಪಡೆಯಬೇಕು.

.......................................................................................................................

Oct 29, 2023

ಪೂಜೆಯ ಮಾಡೋಣಾ ದೇವಿಗೆ ಪೂಜೆಯ ಮಾಡೋಣಾ SONG LYRICS IN KANNADA |

ಹಾಡಲು ಕಲಿಯಿರಿ(CLICK HERE TO LEARN THIS SONG) 


ಪೂಜೆಯ ಮಾಡೋಣಾ ದೇವಿಗೆ ಪೂಜೆಯ ಮಾಡೋಣಾ

ಜಯ ಜಯ ಜಯ ಜಯ ಜಯ ಜಯವೆಂದು ಆರತಿ ಬೆಳಗೋಣ||

 

ಕಾಯನು ಒಡೆಯೋಣ ದೇವಿಯ ನಾಮವ ಜಪಿಸೋಣ (2 ಸಲ)

ಮಂಗಳೆಯರೆಲ್ಲ ಕೂಡಿ ನಾವು ಜ್ಯೋತಿಯ ಬೆಳಗೋಣ (2 ಸಲ)

ಜಯ ಜಯ ಜಯ ಜಯ ಜಯ ಜಯವೆಂದು ಆರತಿ ಬೆಳಗೋಣ

ಜಯ ಜಯವೆಂದು ಮಹಾಲಕ್ಷ್ಮಿಗೆ ಆರತಿ ಬೆಳಗೋಣ||1||

 

ಕರ್ಪೂರ ಹಚ್ಚೋಣಾ ಕರ್ಪೂರದಾರತಿ ಬೆಳಗೋಣ (2 ಸಲ)

ಮಡಿಹುಡಿಯಿಂದ ಮಹಾಲಕ್ಷ್ಮಿಗೆ ಜ್ಯೋತಿಯ ಬೆಳಗೋಣ (2 ಸಲ)

ಜಯ ಜಯ ಜಯ ಜಯ ಜಯ ಜಯವೆಂದು ಆರತಿ ಬೆಳಗೋಣ

ಜಯ ಜಯವೆಂದು ಮಹಾಲಕ್ಷ್ಮಿಗೆ ಆರತಿ ಬೆಳಗೋಣ||2||

....................................................................................


Oct 11, 2023

ಯಾ ದೇವಿ ಸರ್ವ ಭೂತೇಷು - LYRICS IN KANNADA | YA DEVI SARVA BHOOTESHU | DEVI STOTRA

 ಹಾಡಲು ಕಲಿಯಿರಿ(CLICK HERE TO LEARN THIS SONG)

 

ಯಾ ದೇವಿ ಸರ್ವ ಭೂತೇಷು ವಿಷ್ಣು ಮಾಯೇತಿ ಶಬ್ದಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||1 ||

ಯಾ ದೇವಿ ಸರ್ವ ಭೂತೇಷು
ಚೇತನೇತ್ಯಭಿಧೀಯತೇ
ನಮಸ್ತಸ್ಯೈ ನಮಸ್ತಸ್ಯೈ  ನಮಸ್ತಸ್ಯೈ ನಮೋ ನಮಃ ||2||

ಯಾ ದೇವಿ ಸರ್ವ ಭೂತೇಷು
ಬುದ್ದಿ ರೂಪೇಣ ಸಂಸ್ಥಿತ
ನಮಸ್ತಸ್ಯೈ ನಮಸ್ತಸ್ಯೈ  ನಮಸ್ತಸ್ಯೈ ನಮೋ ನಮಃ ||3||

ಯಾ ದೇವಿ ಸರ್ವ ಭೂತೇಷು
ನಿದ್ರಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||4||

ಯಾ ದೇವಿ ಸರ್ವ ಭೂತೇಷು
ಕ್ಷುಧಾ ರೂಪೇಣ ಸಂಸ್ಥಿತ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||5||

ಯಾ ದೇವಿ ಸರ್ವ ಭೂತೇಷು
ಛಾಯಾ ರೂಪೇಣ ಸಂಸ್ಥಿತ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ  ||6||

ಯಾ ದೇವಿ ಸರ್ವ ಭೂತೇಷು
ಶಕ್ತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ  ||7||

ಯಾ ದೇವಿ ಸರ್ವ ಭೂತೇಷು
ತೃಷ್ಣಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||8||

ಯಾ ದೇವಿ ಸರ್ವ ಭೂತೇಷು
ಕ್ಷಾಂತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ  ||9||

ಯಾ ದೇವಿ ಸರ್ವ ಭೂತೇಷು
ಜಾತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ  ||10||

ಯಾ ದೇವಿ ಸರ್ವ ಭೂತೇಷು 
ಲಜ್ಜಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||11||

 ಯಾ ದೇವಿ ಸರ್ವ ಭೂತೇಷು  ಶಾಂತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||12||

ಯಾ ದೇವಿ ಸರ್ವ ಭೂತೇಷು  ಶ್ರದ್ಧಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||13||

ಯಾ ದೇವಿ ಸರ್ವ ಭೂತೇಷು  ಕಾಂತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||14||

ಯಾ ದೇವಿ ಸರ್ವ ಭೂತೇಷು  ಲಕ್ಷ್ಮಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||15||

ಯಾ ದೇವಿ ಸರ್ವ ಭೂತೇಷು  ವೃತ್ತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||16||

ಯಾ ದೇವಿ ಸರ್ವ ಭೂತೇಷು  ಸ್ಮೃತೀ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||17||

ಯಾ ದೇವಿ ಸರ್ವ ಭೂತೇಷು  ದಯಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||18||

ಯಾ ದೇವಿ ಸರ್ವ ಭೂತೇಷು  ತುಷ್ಟಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||19||

ಯಾ ದೇವಿ ಸರ್ವ ಭೂತೇಷು  ಮಾತೃ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||20||

ಯಾ ದೇವಿ ಸರ್ವ ಭೂತೇಷು  ಭ್ರಾಂತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||21||

.........................................................................................

 

Sep 12, 2023

ಸರಳ ಸುಭಾಷಿತಗಳು(ಅರ್ಥ ಸಹಿತ)- 8 |SUBHASHITAS WITH MEANING -8

 

1.   अभिवादनशीलस्य नित्यं वृद्धॊपसेविन:

चत्वारि तस्य वर्धन्ते आयुर्विद्या यशो धनम्॥

ಅಭಿವಾದನ ಶೀಲಸ್ಯ ನಿತ್ಯ೦ ವೃದ್ಧೋಪಸೇವಿನ:

ಚತ್ವಾರಿ ತಸ್ಯ ವರ್ಧನ್ತೇ ಆಯುರ್ವಿದ್ಯಾ ಯಶೋ ಧನಮ್॥

 ಅರ್ಥ:    ಪ್ರತಿದಿನವೂ ಗುರುಹಿರಿಯರ ಸೇವೆಯನ್ನು ಮಾಡುತ್ತಾಅವರಿಗೆ ನಮಸ್ಕಾರಗಳನ್ನು ಮಾಡುತ್ತಿರುವ ವ್ಯಕ್ತಿಗೆ ಆಯಸ್ಸು,ವಿದ್ಯೆ,ಯಶಸ್ಸು ಮತ್ತು ಧನ ಈ ನಾಲ್ಕೂ ಸಂಪತ್ತುಗಳು ವೃದ್ಧಿಯಾಗುತ್ತವೆ.

 

 

2.   आलस्यं हि मनुष्याणां शरीरस्थॊ महान् रिपु: । 

नास्त्युद्यम समॊ बन्धु: कुर्वाणॊ नावसीदति॥

ಆಲಸ್ಯಮ್ ಹಿ ಮನುಷ್ಯಾಣಾ೦ ಶರೀರಸ್ಥೋ ಮಹಾನ್ ರಿಪು: |

ನಾಸ್ತ್ಯುದ್ಯಮಸಮೋ ಬಂಧು: ಕುರ್ವಾಣೋ ನಾವಸೀದತಿ ||

 ಅರ್ಥ:   ಆಲಸ್ಯವು ಮನುಷ್ಯನ ಶರೀರದಲ್ಲಿ ನೆಲೆಸಿದ ಮಹಾಶತ್ರು.ಉದ್ಯೋಗ-ಪ್ರವೃತ್ತಿಯಂತಹ ಬಂಧುವು ಇನ್ನೊಬ್ಬನಿಲ್ಲ. ಉದ್ಯೋಗಶೀಲನಾದ ಮನುಷ್ಯನಿಗೆ ಯಶಸ್ಸು, ಕೀರ್ತಿ, ಹಣ ಸುಖ ಸಿಗುತ್ತದೆ.

 

3.   अञ्जलिस्थानि पुष्पाणि वासयन्ति करद्वयम्।

अहॊ सुमनसां प्रीतिर्वामदक्षिणयॊ: समा॥

 ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಮ್।

ಅಹೋ ಸುಮನಸಾ೦ ಪ್ರೀತಿರ್ವಾಮ ದಕ್ಷಿಣಯೋ: ಸಮಾ॥

ಅರ್ಥ:  ಕೈಯಲ್ಲಿ ಹಿಡಿದಿರುವ ಪುಷ್ಪವು ತನ್ನ್ನನ್ನು ಹಿಡಿದಿರುವ ಎರಡೂ ಕೈಗಳನ್ನು ಸುವಾಸಿತವನ್ನಾಗಿಸುತ್ತದೆ. ಅಂತೆಯೇ ಸಜ್ಜನರು ಎಲ್ಲಾ ಜನರನ್ನು ಒಂದೇ ಪ್ರೀತಿಯಿಂದ ನೋಡುತ್ತಾರೆ.

 

4.   अनुगन्तुं सतां धर्म कृत्स्नम् यदि न शक्यते।

स्वल्पमपि अ नुगन्तव्यं  मार्गस्तॊ नावसीदति॥

 ಅನುಗಂತುಂ ಸತಾಂ ಧರ್ಮ ಕೃತ್ಸ್ನ೦ ಯದಿ ನ ಶಕ್ಯತೆ।

ಸ್ವಲ್ಪಮಪಿ ಅನುಗಂತವ್ಯ೦ ಮಾರ್ಗಸ್ತೋ ನಾವಸೀದತಿ॥

ಅರ್ಥ:   ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು. ಹಾಗೆ ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಿಲ್ಲದಿದ್ದಲ್ಲಿ ಸ್ವಲ್ಪವಾದರೂ ಅವರನ್ನು ಅನುಸರಿಸಬೇಕು. ಆ ಮಾರ್ಗವನ್ನು ಅನುಸರಿಸುವವರು ನಾಶವನ್ನು ಹೊಂದುವುದಿಲ್ಲ.

 

5.  अन्य क्षेत्रे कृतं पापं पुण्यक्षेत्रे प्रणश्यति।

पुण्यक्षेत्रे कृतं पापं वज्रलेपो भविष्यति||

          ಅನ್ಯಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ಪ್ರಣಶ್ಯತಿ।

ಪುಣ್ಯಕ್ಷೆತ್ರೇ ಕೃತ೦ ಪಾಪ೦ ವಜ್ರಲೇಪೋ ಭವಿಷ್ಯತಿ॥

ಜೀವನದ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಡಿದ ಪಾಪಗಳನ್ನು ಪುಣ್ಯಕ್ಷೇತ್ರಕ್ಕೆ ಹೋಗಿ ಕಳೆದು ಕೊಳ್ಳಬಹುದು. ಆದರೆ ಪುಣ್ಯಕ್ಷೇತ್ರಗಳಿಗೆ ಹೋಗಿ ಅಲ್ಲಿಯೂ ಪಾಪ ಮಾಡಿದರೆ ಆ ಪಾಪವು ವಜ್ರಲೇಪದಂತೆ ಶಾಶ್ವತವಾಗಿರುತ್ತದೆ.

 

6. हस्तस्य भूषणं दानं सत्यं कण्ठस्य भूषणम्।

श्रोत्रस्य भूषणं शास्त्रं भूष्हणै: किं प्रयोजनम्॥

 ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಮ್।

ಶ್ರೋತೃಸ್ಯ ಭೂಷಣ೦ ಶಾಸ್ತ್ರ೦ ಭೂಷಣೈ: ಕಿ೦ ಪ್ರಯೋಜನಮ್॥

 ಕೈಗೆ ದಾನವೇ ಆಭರಣ,ಸತ್ಯ ನುಡಿಯುವುದೇ ಕಂಠಕ್ಕೆ ಭೂಷಣ. ಕಿವಿಗೆ ಶಾಸ್ತ್ರ ಶ್ರವಣವೇ ಆಭರಣ. ಸಾಮಾನ್ಯ ಆಭರಣಗಳಿಂದ ಏನು ಪ್ರಯೋಜನ?

 

7.  मातृवत् परदारॆषु परद्रव्यॆषु लोष्टवत् ।

आत्मवत् सर्व भूतेषु य: पश्यति स: पण्डित: ॥

      ಮಾತೃವತ್ ಪರದಾರೇಷು ಪರದ್ರವ್ಯೇಷು ಲೊಷ್ಟವತ್ ।

ಆತ್ಮವತ್ ಸರ್ವ ಭೂತೇಷು ಯ: ಪಶ್ಯತಿ ಸ: ಪಂಡಿತ: ||

ಪರಸ್ತ್ರೀಯರನ್ನು ತಾಯಿಯಂತೆ , ಪರದ್ರವ್ಯವನ್ನು ಮಣ್ಣಿನಂತೆ ,ಎಲ್ಲಾ ಜೀವಿಗಳನ್ನು ತನ್ನಂತೆ ಕಾಣುವವನು ಪಂಡಿತ ನು.

 

 8. यथा चित्तं तथा वाच: यथा वाचस्तथा क्रिया ।

चित्ते वाचि क्रियायां च साधूनामेकरूपता॥

     ಯಥಾ ಚಿತ್ತ0 ತಥಾ ವಾಚ: ಯಥಾ ವಾಚಸ್ತಥಾ ಕ್ರಿಯಾ।

ಚಿತ್ತೇ ವಾಚಿ ಕ್ರಿಯಾಯಾ೦ ಚ ಸಾಧೂನಾಮೇಕರೂಪತಾ॥

 ಸಜ್ಜನರು ಮನಸ್ಸಿನಲ್ಲಿರುವುದನ್ನೇ ಹೊರಗೆ ಮಾತುಗಳಲ್ಲಿ ತೋರಿಸುತ್ತಾರೆ. ಮಾತಿನಂತೆ ಅವರ ಕೃತಿಯೂ ಇರುತ್ತದೆ. ಮನಸ್ಸು ,ಮಾತು, ಕೃತಿಗಳಲ್ಲಿ ಅವರು ಯಾವಾಗಲೂ ಒಂದೇ ಬಗೆಯಾಗಿ ಇರುತ್ತಾರೆ.

............................................................................................................................................