Mar 30, 2024

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ LYRICS IN KANNADA | BHAVAGEETHE | BANNI BHAVAGALE SONG LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈಬೀಸಿ

 ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ॥

 

ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ

 ತವರಿನೆದೆಗೆ ತಂಪೆರೆಯುವ ಮೇಘದ ಪ್ರೀತಿಯ  ಧಾರೆಯಲ್ಲಿ॥೧॥

 

ಲೋಕಕೆ  ಹೊದಿಸಿದ ಕರಿತೆರೆ ಸರಿಸುವ ಅರುಣೋದಯದಲ್ಲಿ

ಪಚ್ಚೆಕೊಮ್ಮೆ ಬಿಳಿ ಪತ್ತಲ ನೇಯುವ ಹುಣ್ಣಿಮೆ ಹಸ್ತದಲ್ಲಿ॥೨॥

.....................................................................................................................................

Mar 22, 2024

ಕಾವ್ಯದ ರಮಣೀಯತೆಯ ಕುರಿತಾದ ಸುಭಾಷಿತಗಳು| SUBHASHITAS ON BEAUTY OF KAVYA|

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


अपारे काव्यसम्सारे कविरेक प्रजापति:

यथास्मै रोचते विश्वम् तथेदं परिवर्तते॥

                             ಅಪಾರೇ ಕಾವ್ಯ ಸಂಸಾರೇ ಕವಿರೇಕ: ಪ್ರಜಾಪತಿ:

ಯಥಾಸ್ಮೈ ರೋಚತೇ ವಿಶ್ವ೦ ತಥೇದ೦ ಪರಿವರ್ತತೆ॥

 

ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೊಬ್ಬನೇ ಸೃಷ್ಟಿಕರ್ತನಾದ ಬ್ರಹ್ಮ. ಅವನಿಗೆ ಹೇಗೆ ರುಚಿಸುವುದೋ ಹಾಗೆಯೆ ವಿಶ್ವವೂ ಪರಿವರ್ತನೆಗೊಳ್ಳುತ್ತದೆ

 …………………………………………………………………………………………………………

काव्यं यशसेऽर्थकृते व्यवहारविदे, शिवेतरक्षये ।

सद्य​: परनिवृतये कान्तासम्मिततयोपदेशयुजे॥

 ಕಾವ್ಯಂ ಯಶಸೇsರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ ।

ಸದ್ಯ: ಪರನಿರ್ವೃತಯೇ ಕಾಂತಾಸಮ್ಮಿತತಯೋಪದೇಶಯುಜೇ॥

 

ಕಾವ್ಯದ ಪ್ರಯೋಜನಗಳು: ಕೀರ್ತಿ, ಧನ, ವ್ಯವಹಾರ ಜ್ಞಾನ, ಅಮಂಗಳ ಪರಿಹಾರ, ಒಡನೆಯೇ ಆಗುವ ಪರಮಾನಂದ ಮತ್ತು ಪ್ರಿಯಳಾದ ಕಾಂತೆಯು ಮನವೊಲಿಸಿ ಹೇಳಿದ ಉಪದೇಶ.

…………………………………………………………………………………………………………

                                द्वै वर्त्मनि गिरो देव्या: शास्त्रं च कवि कर्म च​।

प्रज्नोपज्नं तयोराद्यं प्रतिभोद्भवम् अन्तिमम्॥

 ದ್ವೇ ವರ್ತ್ಮನಿ ಗಿರೋ ದೇವ್ಯಾ: ಶಾಸ್ತ್ರಂ ಚ ಕವಿಕರ್ಮ ಚ।

ಪ್ರಜ್ಞೋಪಜ್ಞ೦ ತಯೋರಾದ್ಯ೦ ಪ್ರತಿಭೋದ್ಭವಮಂತಿಮಮ್||

 

ವಾಗ್ದೇವಿಯ ಮಾರ್ಗಗಳು ಎರಡು: ಒಂದು ಶಾಸ್ತ್ರ ,ಇನ್ನೊಂದು ಕಾವ್ಯ .ಮೊದಲನೆಯದು ಬುದ್ಧಿ ಸಾಮರ್ಥ್ಯದಿಂದ ಹುಟ್ಟುತ್ತದೆ. ಎರಡನೆಯದು ಪ್ರತಿಭೆಯಿಂದ ಆಗುತ್ತದೆ.

…………………………………………………………………………………………………………

                            नियतिकृतनियमरहितां ह्लादैकमयीमनन्यपरतन्त्रताम्।

नवरसरुछिरां निर्मितिमादधती भारती कवेर्जयति॥

 ನಿಯತಿಕೃತನಿಯಮರಹಿತಾ೦ ಹ್ಲಾದೈಕಮಯೀಮನನ್ಯಪರತಂತ್ರತಾಮ್।

ನವರಸರುಚಿರಾ೦ ನಿರ್ಮಿತಿಮಾದಧತೀ ಭಾರತೀ ಕವೇರ್ಜಯತಿ॥

 

ಕವಿಯ ಕಾವ್ಯ ನಿಸರ್ಗಕೃತವಾದ ನಿಯಮಕ್ಕೆ ಒಳಗಾಗಿರುವುದಿಲ್ಲ. ಅದು ಕೇವಲ ಆನಂದ ಸ್ವರೂಪವಾದುದು .ಅನ್ಯಾಧೀನವಲ್ಲ. ನವರಸಗಳಿಂದ ಮನೋಹರವಾಗಿದೆ. ಇಂತಹ ಕಾವ್ಯವನ್ನು ನಿರ್ಮಿಸುವ ಕವಿಯ ವಾಣಿ ಜಯಶೀಲೆ.

………………………………………………………………………………………………………

शास्त्रेषु दुर्ग्रहोऽप्यर्थ​: स्वदते कविसूक्तिषु ।

दृश्यं करगतं रत्नं दारुणं फणिमूर्धनि॥

 ಶಾಸ್ತ್ರೇಷು ದುರ್ಗ್ರಹೋಪ್ಯರ್ಥ: ಸ್ವದತೇ ಕವಿಸೂಕ್ತಿಷು।

ದೃಶ್ಯ೦ ಕರಗತ೦ ರತ್ನ೦ ದಾರುಣ೦ ಫಣಿಮೂರ್ಧನಿ॥

 

ಶಾಸ್ತ್ರಗಳಲ್ಲಿ ತಿಳಿಯಲು ಕಠಿಣವಾದ ವಿಷಯವು ಕವಿ ಸೂಕ್ತಿಗಳಲ್ಲಿ ಬಂದಾಗ ಹಿತಕರವಾಗಿ ರುಚಿಸುತ್ತದೆ. ಕೈಯಲ್ಲಿರುವ ರತ್ನ ನೋಡಲು ಸುಂದರವಾಗಿರುತ್ತದೆ. ಅದೇ ಹಾವಿನ ಹೆಡೆಯಲ್ಲಿದ್ದಾಗ ಭೀಕರವಾಗಿರುತ್ತದೆ.

…………………………………………………………………………………………………………


Mar 21, 2024

ತೃಣಮಪಿ ನ ಚಲತಿ ತೇನ ವಿನಾ |SONG LYRIC IN KANNADA| TENAVINA TRANAMAPI NA CHALATI

 

ಹಾಡಲು ಕಲಿಯಿರಿ(CLICK HERE TO LEARN THIS SONG)


ತೇನ ವಿನಾ ತೇನ ವಿನಾ

ತೃಣಮಪಿ ಚಲತಿ ತೇನ ವಿನಾ.

ಮಮತೆಯ ಬಿಡುಹೇ ಮೂಢಮನಾ,

ಮಮತೆಯ ಬಿಡುಹೇ ಮೂಢಮನಾ||

 

ರವಿಗಿಲ್ಲದ ಭಯಶಶಿಗಿಲ್ಲದ ಭಯ,

ತಾರಾನಿವಹಕೆ ಇರದ ಭಯ,

ನಿನಗೇತಕೆ ಬಿಡುಅಣು ಶ್ರದ್ಧೆಯನಿಡು;

ನಿನ್ನನೆ ನೈವೇದ್ಯವ ನೀಡು ||1||

ಎಲ್ಲೆಲ್ಲಿಯು ಕೈಎಲ್ಲೆಲ್ಲಿಯು ಕಾಲ್

ಎಲ್ಲೆಲ್ಲಿಯು ಕಣ್ ತಾನಾದ

ಸತ್ ಚಿತ್ ಶಕ್ತಿಯ ಆನಂದವಿರಲ್

ಬಿಡು ಏತಕೆ ನಿನಗೆ ವಿಷಾದ||2||

……………………………………………………………………………..


Mar 17, 2024

ಗುರುವೇ ಗತಿ ಯೆನ್ನು ಮನವೇ |SONG ON SHANKARACHARYA |GURUVE GATIYENNU MANAVE |LYRICS IN KANNADA|

 ಹಾಡಲು ಕಲಿಯಿರಿ(CLICK HERE TO LEARN THIS SONG)

ಗುರುವೇ ಗತಿ ಯೆನ್ನು ಮನವೇ ತತ್ವ ಗುರುವಿನ ಪದಕಿಂತ ಪೆರತೊಂದು ಘನವೇ

ಕೇಳ್ ಪೆರತೊಂದು ಘನವೇ|

ಗುರುವೇ ಗತಿ ಯೆನ್ನು ಮನವೇ ತತ್ವ ಗುರುವಿನ ಪದಕಿಂತ ಪೆರತೊಂದು ಘನವೇ

ಕೇಳ್ ಪೆರತೊಂದು ಘನವೇ ಗುರುವೇ ಗತಿ ಯೆನ್ನು ಮನವೇ||

 

ಮರೆವೆಯಿ೦ ಮರುಳನಾಗಿರುವೆ |ಮೂಳೆ| ನರ ಮಾಂಸ ತನುವ ತಾನೆ೦ಬುವುದು ತರವೇ

ಅರಿಯದೆ ಹಿಂದೆ ನೊಂದಿರುವೆ |ಮುಂದೆ| ಕೊರತೆಯಿಲ್ಲದ ನಿಜಾನಂದದೊಳಿರುವೆ ಆನಂದದೊಳಿರುವೆ , ಗುರುವೇ ಗತಿ ಯೆನ್ನು ಮನವೇ ||

 

ಧನ ಧಾನ್ಯ ಬಂಧು ಭಾಗ್ಯಗಳು ।ನಿನ್ನ।

ಘನವ ನೀನರಿಯದ ಮಾಯ ಕಾರ್ಯಗಳು|

ಕೊನೆಗಾಣದಿರುವೊ ದುಃಖಗಳು ।ಅಲ್ಲಿ।

ಮನವಿಟ್ಟ ನರನಿಗೆ ಬಿಡದು ಕೋಳಗಳು |ಕೇಳ್| ಬಿಡದು ಬಂಧುಗಳು

ಗುರುವೇ ಗತಿ ಯೆನ್ನು ಮನವೇ ||

 

ತನ್ನ ತಾ ತಿಳಿವ ಸಾಹಸವ ।ಬಿಟ್ಟು। ನೀನೆಂದು ದೃಶ್ಯವಾಗುವ ಬೀದಿ ಕಸವ

 ಧ್ಯಾನಿಸಿತರು ಮಾನಸವ |ಬಿಟ್ಟು| ನೀನೆಯಾದರೆ ಸೇವಿಸುವೆ ಸಿದ್ದರಸವಾ

 ಶ್ರೀ ಗುರು ಸಿದ್ದರಸವಾ , ಗುರುವೇ ಗತಿ ಯೆನ್ನು ಮನವೇ ||

 

ಕುರುಹಿಲ್ಲವದು ಶೂನ್ಯವಲ್ಲ ।ನಿತ್ಯ। ನಿರತಿಶಯಾನಂದ ನುಡಿಯೊಳಗಿಲ್ಲ

ಪರವಾದಿ ಇದನೇನ ಬಲ್ಲ |ಅಲ್ಲಿ| ಗುರು ಶಂಕರರ ಬಿಟ್ಟು ಪೆರತೊ೦ಬುವುದಿಲ್ಲ

|ಕೇಳ್| ಪೆರತೊ೦ಬುವುದಿಲ್ಲ, ಗುರುವೇ ಗತಿ ಯೆನ್ನು ಮನವೇ ||

...............................................................................................................................................

ಸುಮ್ಮನೆ ಬ್ರಹ್ಮವಾಗುವನೇ | SONG ON SHANKARACHARYA |LYRICS IN KANNADA| SUMMANE BRAHMAVAGUVANE

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಸುಮ್ಮನೆ ಬ್ರಹ್ಮವಾಗುವನೇ ಮೂಲ ಹಮ್ಮೆಲ್ಲ ಲಯವಾಗಿ

 ಉಳಿಯದೆ ತಾನೇ , ತಾನುಳಿಯದೆ ತಾನೇ |

ಸುಮ್ಮನೆ ಬ್ರಹ್ಮವಾಗುವನೇ ||

ಮೂಲ ಹಮ್ಮೆಲ್ಲ ಲಯವಾಗಿ  ಉಳಿಯದೆ ತಾನೇ ,

 ತಾನುಳಿಯದೆ ತಾನೇ ಸುಮ್ಮನೆ ಬ್ರಹ್ಮವಾಗುವನೇ ||

 

ಸುಮ್ಮನಿದ್ದರೂ ಸುಖಿಸುವನೇ ,ಇದು ನಮ್ಮದೆಂಬುದನು ಕೊಂದಿರುವೊ ಸಾಹಸನೆ,

 ಹೊಂದಿರುವೊ ಚಿದ್ರಸನೆ|

ಸಮ್ಮಾನವನು ಮೀರಿದವನೇ, ಮೃತ್ಯು ಸಂಹಾರಿಯಾಗಿ ತಾಂಡವದೊಳಿರುವನೇ,

ಕುಂಡಲಿಯ ಮೀರುವನೇ, ಸುಮ್ಮನೆ ಬ್ರಹ್ಮವಾಗುವನೇ ||

 

ಪುಸ್ತಕವನು ಮುಚ್ಚಲಿಲ್ಲ ತಾನಾ ಪುಸ್ತಕದೊಳಗೆಲ್ಲ ಶಿವನಾಗಲಿಲ್ಲ

ಕೇಶವನಾಗಲಿಲ್ಲ |

ಸುಸ್ತುಗಳ್ ಬಯಲಾಗಲಿಲ್ಲ, ಪರ ವಸ್ತುವೆಂಬುವ ನೋಡಿ ಒಳಗಾಗಲಿಲ್ಲ

ತನ್ನೊಳಗಾಗಲಿಲ್ಲ ಸುಮ್ಮನೆ ಬ್ರಹ್ಮವಾಗುವನೇ ||

 

ಮರಣಭೀತಿಯ ಬೇರೆ ಸುಡದೆ ತನ್ನ ಪರಮಾನಂದವನೇ ಎಲ್ಲೆಲ್ಲಿಯು೦ ನಡೆದೆ

ಎಲ್ಲೆಲ್ಲಿಯು೦ ನಡೆದೆ|

ಶರೀರದೊಳಭಿಮಾನ ಬಿಡದೆ ನಮ್ಮ ಗುರು ಶಂಕರನಿಗೆ ಚಿತ್ತವನು ಒಪ್ಪಿಸದೆ

ಚಿತ್ತವನು ಒಪ್ಪಿಸದೆ ಸುಮ್ಮನೆ ಬ್ರಹ್ಮವಾಗುವನೇ ||

...............................................................................................................................

Mar 1, 2024

ಬೋಲೋ ಬೋಲೋ ಸಬ್ ಮಿಲ್ ಬೋಲೋ ಓಂ ನಮಃ: ಶಿವಾಯ | lord shiva songs| kannada savigana lyrics|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಬೋಲೋ ಬೋಲೋ ಸಬ್ ಮಿಲ್ ಬೋಲೋ ಓಂ ನಮಃ: ಶಿವಾಯ

ಬೋಲೋ ಬೋಲೋ ಸಬ್ ಮಿಲ್ ಬೋಲೋ ಓಂ ನಮಃ: ಶಿವಾಯ

ಓಂ ನಮಃ: ಶಿವಾಯ , ಓಂ ನಮಃ: ಶಿವಾಯ

ಓಂ ನಮಃ: ಶಿವಾಯ , ಓಂ ನಮಃ: ಶಿವಾಯ

ಬೋಲೋ ಬೋಲೋ ಸಬ್ ಮಿಲ್ ಬೋಲೋ ಓಂ ನಮಃ: ಶಿವಾಯ

ಬೋಲೋ ಬೋಲೋ ಸಬ್ ಮಿಲ್ ಬೋಲೋ ಓಂ ನಮಃ: ಶಿವಾಯ ||

 

ಜೂಟ್ ಜಟಾ ಮೆ ಗಂಗಾಧಾರೀ ತ್ರಿಶೂಲ್ ಧಾರೀ ಡಮರು ಬಜಾವೆ

ಡಮ ಡಮ ಡಮ ಡಮ ಡಮರು ಬಜಾವೆ , ಗೂಂಜ್ ಉಟಾವೊ ನಮ: ಶಿವಾಯ ||

ಓಂ ನಮಃ: ಶಿವಾಯ , ಓಂ ನಮಃ: ಶಿವಾಯ ಹರ ಓಂ ನಮಃ: ಶಿವಾಯ ||

.......................................................................................................................................