ಹಾಡಲು ಕಲಿಯಿರಿ(CLICK HERE TO LEARN THIS SONG)
ಸುಮ್ಮನೆ ಬ್ರಹ್ಮವಾಗುವನೇ ಮೂಲ ಹಮ್ಮೆಲ್ಲ ಲಯವಾಗಿ
ಉಳಿಯದೆ
ತಾನೇ , ತಾನುಳಿಯದೆ ತಾನೇ |
ಸುಮ್ಮನೆ ಬ್ರಹ್ಮವಾಗುವನೇ
||
ಮೂಲ ಹಮ್ಮೆಲ್ಲ ಲಯವಾಗಿ
ಉಳಿಯದೆ ತಾನೇ ,
ತಾನುಳಿಯದೆ
ತಾನೇ ಸುಮ್ಮನೆ ಬ್ರಹ್ಮವಾಗುವನೇ
||
ಸುಮ್ಮನಿದ್ದರೂ ಸುಖಿಸುವನೇ ,ಇದು ನಮ್ಮದೆಂಬುದನು ಕೊಂದಿರುವೊ
ಸಾಹಸನೆ,
ಹೊಂದಿರುವೊ
ಚಿದ್ರಸನೆ|
ಸಮ್ಮಾನವನು ಮೀರಿದವನೇ, ಮೃತ್ಯು ಸಂಹಾರಿಯಾಗಿ ತಾಂಡವದೊಳಿರುವನೇ,
ಕುಂಡಲಿಯ ಮೀರುವನೇ, ಸುಮ್ಮನೆ ಬ್ರಹ್ಮವಾಗುವನೇ
||
ಪುಸ್ತಕವನು ಮುಚ್ಚಲಿಲ್ಲ ತಾನಾ ಪುಸ್ತಕದೊಳಗೆಲ್ಲ ಶಿವನಾಗಲಿಲ್ಲ
ಕೇಶವನಾಗಲಿಲ್ಲ |
ಸುಸ್ತುಗಳ್ ಬಯಲಾಗಲಿಲ್ಲ, ಪರ ವಸ್ತುವೆಂಬುವ ನೋಡಿ ಒಳಗಾಗಲಿಲ್ಲ
ತನ್ನೊಳಗಾಗಲಿಲ್ಲ ಸುಮ್ಮನೆ ಬ್ರಹ್ಮವಾಗುವನೇ
||
ಮರಣಭೀತಿಯ ಬೇರೆ ಸುಡದೆ ತನ್ನ ಪರಮಾನಂದವನೇ ಎಲ್ಲೆಲ್ಲಿಯು೦
ನಡೆದೆ
ಎಲ್ಲೆಲ್ಲಿಯು೦ ನಡೆದೆ|
ಶರೀರದೊಳಭಿಮಾನ ಬಿಡದೆ ನಮ್ಮ ಗುರು ಶಂಕರನಿಗೆ ಚಿತ್ತವನು
ಒಪ್ಪಿಸದೆ
ಚಿತ್ತವನು ಒಪ್ಪಿಸದೆ ಸುಮ್ಮನೆ ಬ್ರಹ್ಮವಾಗುವನೇ
||
No comments:
Post a Comment