Mar 22, 2024

ಕಾವ್ಯದ ರಮಣೀಯತೆಯ ಕುರಿತಾದ ಸುಭಾಷಿತಗಳು| SUBHASHITAS ON BEAUTY OF KAVYA|

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


अपारे काव्यसम्सारे कविरेक प्रजापति:

यथास्मै रोचते विश्वम् तथेदं परिवर्तते॥

                             ಅಪಾರೇ ಕಾವ್ಯ ಸಂಸಾರೇ ಕವಿರೇಕ: ಪ್ರಜಾಪತಿ:

ಯಥಾಸ್ಮೈ ರೋಚತೇ ವಿಶ್ವ೦ ತಥೇದ೦ ಪರಿವರ್ತತೆ॥

 

ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೊಬ್ಬನೇ ಸೃಷ್ಟಿಕರ್ತನಾದ ಬ್ರಹ್ಮ. ಅವನಿಗೆ ಹೇಗೆ ರುಚಿಸುವುದೋ ಹಾಗೆಯೆ ವಿಶ್ವವೂ ಪರಿವರ್ತನೆಗೊಳ್ಳುತ್ತದೆ

 …………………………………………………………………………………………………………

काव्यं यशसेऽर्थकृते व्यवहारविदे, शिवेतरक्षये ।

सद्य​: परनिवृतये कान्तासम्मिततयोपदेशयुजे॥

 ಕಾವ್ಯಂ ಯಶಸೇsರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ ।

ಸದ್ಯ: ಪರನಿರ್ವೃತಯೇ ಕಾಂತಾಸಮ್ಮಿತತಯೋಪದೇಶಯುಜೇ॥

 

ಕಾವ್ಯದ ಪ್ರಯೋಜನಗಳು: ಕೀರ್ತಿ, ಧನ, ವ್ಯವಹಾರ ಜ್ಞಾನ, ಅಮಂಗಳ ಪರಿಹಾರ, ಒಡನೆಯೇ ಆಗುವ ಪರಮಾನಂದ ಮತ್ತು ಪ್ರಿಯಳಾದ ಕಾಂತೆಯು ಮನವೊಲಿಸಿ ಹೇಳಿದ ಉಪದೇಶ.

…………………………………………………………………………………………………………

                                द्वै वर्त्मनि गिरो देव्या: शास्त्रं च कवि कर्म च​।

प्रज्नोपज्नं तयोराद्यं प्रतिभोद्भवम् अन्तिमम्॥

 ದ್ವೇ ವರ್ತ್ಮನಿ ಗಿರೋ ದೇವ್ಯಾ: ಶಾಸ್ತ್ರಂ ಚ ಕವಿಕರ್ಮ ಚ।

ಪ್ರಜ್ಞೋಪಜ್ಞ೦ ತಯೋರಾದ್ಯ೦ ಪ್ರತಿಭೋದ್ಭವಮಂತಿಮಮ್||

 

ವಾಗ್ದೇವಿಯ ಮಾರ್ಗಗಳು ಎರಡು: ಒಂದು ಶಾಸ್ತ್ರ ,ಇನ್ನೊಂದು ಕಾವ್ಯ .ಮೊದಲನೆಯದು ಬುದ್ಧಿ ಸಾಮರ್ಥ್ಯದಿಂದ ಹುಟ್ಟುತ್ತದೆ. ಎರಡನೆಯದು ಪ್ರತಿಭೆಯಿಂದ ಆಗುತ್ತದೆ.

…………………………………………………………………………………………………………

                            नियतिकृतनियमरहितां ह्लादैकमयीमनन्यपरतन्त्रताम्।

नवरसरुछिरां निर्मितिमादधती भारती कवेर्जयति॥

 ನಿಯತಿಕೃತನಿಯಮರಹಿತಾ೦ ಹ್ಲಾದೈಕಮಯೀಮನನ್ಯಪರತಂತ್ರತಾಮ್।

ನವರಸರುಚಿರಾ೦ ನಿರ್ಮಿತಿಮಾದಧತೀ ಭಾರತೀ ಕವೇರ್ಜಯತಿ॥

 

ಕವಿಯ ಕಾವ್ಯ ನಿಸರ್ಗಕೃತವಾದ ನಿಯಮಕ್ಕೆ ಒಳಗಾಗಿರುವುದಿಲ್ಲ. ಅದು ಕೇವಲ ಆನಂದ ಸ್ವರೂಪವಾದುದು .ಅನ್ಯಾಧೀನವಲ್ಲ. ನವರಸಗಳಿಂದ ಮನೋಹರವಾಗಿದೆ. ಇಂತಹ ಕಾವ್ಯವನ್ನು ನಿರ್ಮಿಸುವ ಕವಿಯ ವಾಣಿ ಜಯಶೀಲೆ.

………………………………………………………………………………………………………

शास्त्रेषु दुर्ग्रहोऽप्यर्थ​: स्वदते कविसूक्तिषु ।

दृश्यं करगतं रत्नं दारुणं फणिमूर्धनि॥

 ಶಾಸ್ತ್ರೇಷು ದುರ್ಗ್ರಹೋಪ್ಯರ್ಥ: ಸ್ವದತೇ ಕವಿಸೂಕ್ತಿಷು।

ದೃಶ್ಯ೦ ಕರಗತ೦ ರತ್ನ೦ ದಾರುಣ೦ ಫಣಿಮೂರ್ಧನಿ॥

 

ಶಾಸ್ತ್ರಗಳಲ್ಲಿ ತಿಳಿಯಲು ಕಠಿಣವಾದ ವಿಷಯವು ಕವಿ ಸೂಕ್ತಿಗಳಲ್ಲಿ ಬಂದಾಗ ಹಿತಕರವಾಗಿ ರುಚಿಸುತ್ತದೆ. ಕೈಯಲ್ಲಿರುವ ರತ್ನ ನೋಡಲು ಸುಂದರವಾಗಿರುತ್ತದೆ. ಅದೇ ಹಾವಿನ ಹೆಡೆಯಲ್ಲಿದ್ದಾಗ ಭೀಕರವಾಗಿರುತ್ತದೆ.

…………………………………………………………………………………………………………


No comments:

Post a Comment